ದಾಳಿಂಬೆ ಗಿಡವನ್ನು ಬಕೆಟ್ ನಲ್ಲಿ ಬೆಳೆಸುವ ಕ್ರಮವನ್ನು ತಿಳಿದುಕೊಳ್ಳಿ. ಹಾಗೂ ಉತ್ತಮ ಆದಾಯವನ್ನು ಗಳಿಸಿ. ನೋಡಿ ಸ್ನೇಹಿತರೆ ದಾಳಿಂಬೆ ಹಣ್ಣನ್ನ ಬೆಳೆಯುವುದು ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಬೆಳೆಯಲಾಗುತ್ತದೆ. ಅದನ್ನು ನೀವು ಹೊರಗಡೆ ನಿಮ್ಮ ಜಾಗದಲ್ಲೇ ಬೆಳೆಯಬೇಕಂತಿಲ್ಲ ನಿಮ್ಮ ಮನೆಯ ಹೊರಗಡೆ ಒಂದು ಚಿಕ್ಕ ಬಕೆಟ್ ನಲ್ಲಿ ಕೂಡ ನೀವು ಇದನ್ನ ಬೆಳೆಯಬಹುದು. ಸರಿಯಾದ ಕ್ರಮವನ್ನ ಅನುಸರಿಸಿದರೆ ತುಂಬಾ ಫಲಗಳು ಬರುತ್ತವೆ ಹಾಗೂ ನೀವು ಉತ್ತಮ ಆದಾಯವನ್ನು ಸಹ ಗಳಿಸಬಹುದು.

ನೋಡಿ ಇತ್ತೀಚಿನ ದಿನಗಳಲ್ಲಿ ಜಾಗವು ಕಡಿಮೆ ಇರುವುದರಿಂದ ಎಲ್ಲವೂ ಬಕೆಟ್ಗಳಲ್ಲಿ ಬೆಳೆಯುವ ಪದ್ಧತಿ ರೂಢಿಯಲ್ಲಿ ಬಂದಿದೆ ಒಂದು ತರಕಾರಿಯನ್ನಾಗಲಿ ಹೂವುಗಳನ್ನಾಗಲಿ ಎಲ್ಲವನ್ನು ಸಹ ಬಕೆಟ್ ನಲ್ಲೆ ಬೆಳೆಯಲಾಗುತ್ತದೆ. ಈ ದಾಳಿಂಬೆ ಹಣ್ಣನ್ನು ಕೂಡ ಬಕೆಟ್ನಲ್ಲಿ ಬೆಳೆಯುವುದು ಹೇಗೆ ಅಂತ ನಾವು ಹೇಳುತ್ತೇವೆ ನೀವು ಪೂರ್ತಿ ಲೇಖನವನ್ನ ಓದಿ ಸ್ನೇಹಿತರೆ. ನಿಮಗೆ ಉತ್ತಮ ಹೊಸ ಹೊಸ ಮಾಹಿತಿನಾ ತಂದು ಕೊಡುತ್ತೇವೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಈಗ ನಾವು ಬಕೆಟ್ನಲ್ಲಿ ದಾಳಿಂಬೆ ಬೆಳೆಯನ್ನ ಹೇಗೆ ಬೆಳೆಯುವುದು ಅಂತ ತಿಳಿದುಕೊಳ್ಳೋಣ. ದಾಳಿಂಬೆ ಹಣ್ಣು ಚಿಕ್ಕದಾಗಿರುವುದರಿಂದ ನೀವು ಮನೆಯ ಅಂಗಳದಲ್ಲೇ ಒಂದು ಚಿಕ್ಕ ಬಕೆಟ್ ಇಟ್ಟು ಅದರಲ್ಲಿ ಬೆಳೆದುಕೊಳ್ಳಬಹುದು. ಬೇಸಿಗೆಯ ಮಧ್ಯದವರೆಗೆ ಬೆಳೆಯಬಹುದು. ಅಂದರೆ ಸುಮಾರು ಆಗಸ್ಟ್ ನಿಂದ ನಾವು ಫೆಬ್ರುವರಿ ಮಾರ್ಚ್ ವರೆಗೂ ಕೂಡ ಬೆಳೆಯಬಹುದು. ಇನ್ನೂ ಒಂದು ಕುತೂಹಲಕಾರಿ ವಿಷಯ ಅಂತಂದ್ರೆ ದಾಳಿಂಬೆ ಬೆಳೆಗ್ಗೆ ಕಡಿಮೆ ನೀರು ಸಾಕಾಗುತ್ತೆ. ಇದನ್ನ ನೀವು ಒಣಗಿದ ಸ್ಥಳದಲ್ಲಿಯೂ ಕೂಡ ಅಂದರೆ ನೀರಿಲ್ಲದ ಸ್ಥಳದಲ್ಲಿಯೂ ಕೂಡ ನೀವು ಬೆಳೆಯಬಹುದು ಹೀಟ್ ಪ್ರದೇಶದಲ್ಲಿಯೂ ಕೂಡ ಇದನ್ನು ಬೆಳೆಯಬಹುದು ಆದರೆ ಸ್ವಲ್ಪ ಒಂದು ತಿಂಗಳುಗಳ ಕಾಲ ಸ್ವಲ್ಪ ನೀವು ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಚೆನ್ನಾಗಿ ಆರೈಕೆಯನ್ನು ಮಾಡಬೇಕಾಗುತ್ತದೆ.

25 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನವು ದಾಳಿಂಬೆ ಬೆಳವಣಿಗೆಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇದು ಕಡಿಮೆ ತಾಪಮಾನವನ್ನು ಸಹಿಸಿಕೊಳ್ಳಬಲ್ಲದು. ಬಕೆಟ್‌ನಲ್ಲಿ ಬೆಳೆದ ದಾಳಿಂಬೆ ಗಿಡಕ್ಕೆ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಈ ಸಸ್ಯಗಳನ್ನು ಭಾಗಶಃ ನೆರಳಿನ ಸ್ಥಳಗಳಲ್ಲಿಯೂ ಬೆಳೆಸಬಹುದು. ದಾಳಿಂಬೆ ರೋಗ ಬಂದಾಗ ಅದಕ್ಕೆ ಕೀಟನಾಶ ಸಿಂಪಡಿಸುವುದು ಅಗತ್ಯವಾಗಿದೆ.

ಇದಕ್ಕೆ ಕಾಯಿ ಕೊರೆತ ರೋಗ ಮತ್ತು ಹೃದಯ ಕೊಳೆತ ರೋಗ ಬರುವ ಸಾಧ್ಯತೆ ಇದೆ ಇದಕ್ಕೆ ನೀವು ಶಿಲೀಂದ್ರ ನಾಶಕಗಳನ್ನ ಮತ್ತು ಕೀಟನಾಶಕಗಳನ್ನು ಸಿಂಪಡಿಸಬೇಕು. ನೀವು ಇದನ್ನ ಬಕೆಟ್ ಅಲ್ಲಿ ಬೆಳೆಯುವುದರಿಂದ ತುಂಬಾ ಎತ್ತರ ಹಾಗೂ ತುಂಬಾ ಅಗಲವಾಗದಂತೆ ನೋಡಿಕೊಳ್ಳಬೇಕು. ದಾಳಿಂಬೆ ಮರಗಳು ನೆಟ್ಟ ದಿನದಿಂದ ಹಿಡಿದು ಮೂರರಿಂದ ನಾಲ್ಕು ವರ್ಷಗಳ ನಂತರ ಫಲವನ್ನು ಕೊಡುತ್ತವೆ. ಕಾಯಿ ಬಿಟ್ಟ ನಂತರ ಏಳರಿಂದ ಎಂಟು ತಿಂಗಳದ ನಂತರ ಹಣ್ಣಾಗಲು ಪ್ರಾರಂಭವಾಗುತ್ತದೆ. ಹೊರಗಡೆ ಪದರ ಗುಲಾಬಿ ಬಣ್ಣ ಕ್ಕೆ ತಿರುಗಿದ ನಂತರ ನೀವು ಕಿತ್ತುಕೊಳ್ಳಬೇಕು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *