ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ನಿಮಗೆ ಗೊತ್ತಾ ಸಂಜೀವಿನಿಯನ್ನು ನಾವು ಸೇವನೆ ಮಾಡಿದರೆ ನಮಗೆ ಯಾವುದೇ ರೀತಿಯಾಗಿ ಅನಾರೋಗ್ಯ ಕಾಡುವುದಿಲ್ಲ. ಮುಪ್ಪು ಬರುವುದಿಲ್ಲ ಕೊನೆಗೆ ಸಾವು ಕೂಡ ಬರುವುದಿಲ್ಲ. ಎಂದು ಹಲವಾರು ರೀತಿಯ ವೇದ ಮತ್ತು ಪುರಾಣಗಳಲ್ಲಿ ನಾವು ಕೇಳಿದ್ದೇವೆ. ಹಾಗಾದರೆ ಅಂತಹ ಸಂಜೀವಿನಿ ಈಗ ಇದೆಯೋ ಇಲ್ಲವೋ ಅನ್ನುವುದು ಯಾರಿಗೂ ಕೂಡ ತಿಳಿದಿಲ್ಲ. ಆದರೆ ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲ ಹಲವಾರು ರೀತಿಯ ಔಷಧೀಯ ಸಸ್ಯಗಳು ಮತ್ತು. ಗಿಡಮೂಲಿಕೆಗಳು ನಮ್ಮಲ್ಲಿವೆ. ಅಂತಹ ಆಯುರ್ವೇದ ಸಸ್ಯಗಳಲ್ಲಿ ಒಂದು ಆಗಿರುವಂತಹ ಸಸ್ಯ ಯಾವುದು ಎಂದರೆ ಅದು ದಾಸವಾಳ ಸಸ್ಯ. ಹೌದು ವೀಕ್ಷಕರೇ ನಮ್ಮ ಕೈತೋಟದಲ್ಲಿ ಅಥವಾ ಮಹಡಿ ಮೇಲೆ ಸುಲಭವಾಗಿ ಬೆಳೆಸಲು ಸಾಧ್ಯವಾಗುವಂತಹ ದಾಸವಾಳ ವು ಸಾಮಾನ್ಯವಾಗಿ ಹೂ ಗಿಡವನ್ನು ನಾವು ಪೂಜೆಗೆ ಬಳಕೆ ಮಾಡುತ್ತೇವೆ. ಆದರೆ ಈ ಗಿಡದಿಂದ ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಪ್ರಯೋಜನವಿದೆಯೇ.

 

ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ದಾಸವಾಳ ಹೂವು ಗಿಡದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳಾಗುತ್ತವೆ ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಈ ಮಾಹಿತಿಯನ್ನು ಕೊನೆಯವರೆಗೂ ತಪ್ಪದೇ ಓದಿ. ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಈಗಲೇ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ. ವೀಕ್ಷಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಬ್ಬರಿಗಾದರೂ ಒಬ್ಬರಿಗೆ ಶುಗರ್ ಮತ್ತು ಬಿಪಿ ರೋಗ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಂತಹವರಿಗೆ ಈ ದಾಸವಾಳದ ಹೂವು ತುಂಬಾನೇ ಪ್ರಯೋಜನವಾಗುತ್ತದೆ. ಹೌದು ವೀಕ್ಷಕರೇ ಈ ದಾಸವಾಳ ಹೂವು ಗಳಿಂದ ಚಹಾವನ್ನು ತಯಾರು ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಲಾಭವಾಗುತ್ತದೆ. ಈ ದಾಸವಾಳ ಹೂಗಳಿಂದ ತಯಾರು ಮಾಡಿರುವಂತಹ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಕಲ್ಮಶಗಳು ಹೋಗುತ್ತವೆ. ಮತ್ತು ಈ ಗಿಡದ ಹೂವಿನಿಂದ ತಯಾರು ಮಾಡಿರುವಂತಹ ಚಹಾವನ್ನು ಕುಡಿಯುವುದರಿಂದ ಬಿಪಿ ಕೂಡ ಕಡಿಮೆಯಾಗುತ್ತದೆ ಜೊತೆಗೆ

 

ಸಕ್ಕರೆ ಕಾಯಿಲೆ ಅಧಿಕವಾಗಿದ್ದರೆ ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದರಿಂದ ಸಕ್ಕರೆ ಕಾಯಿಲೆಯು ಕೂಡ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ಮತ್ತು ಈ ದಾಸವಾಳದಲ್ಲಿ ಕೆಂಪು ಹಳದಿ ದಾಸವಾಳ ಹಾಗೂ ಬಿಳಿ ದಾಸವಾಳ ಸಿಗುತ್ತದೆ. ಇದರಿಂದ ಬಿಳಿದಾಸವಾಳ ಚಹಾವನ್ನು ತಯಾರು ಮಾಡಲು ಹೆಚ್ಚು ಸೂಕ್ತವಾಗಿರುತ್ತದೆ. ಇದು ಅಷ್ಟೇ ಅಲ್ಲದೆ ಈ ಬಿಳಿ ದಾಸವಾಳವನ್ನು ಔಷಧಕ್ಕೆ ಹೆಚ್ಚು ಬಳಕೆ ಮಾಡುತ್ತಾರೆ.

Leave a Reply

Your email address will not be published. Required fields are marked *