1. ನಿಂಬೆ ಹಣ್ಣಿನಲ್ಲಿ ಸಿ ಜೀವಸತ್ವ ಅಧಿಕವಾಗಿರುತ್ತದೆ. ಇದು ಜೀರ್ಣಶಕ್ತಿ ಹೆಚ್ಚಿಸುತ್ತದೆ. ದಾಹ ಇಂಗಿಸುತ್ತದೆ. ಪಿತ್ತ ವಿಕಾರಗಳನ್ನು ಗುಣಪಡಿಸುತ್ತದೆ. ಬಳಲಿಕೆ ನಿವಾರಿಸುತ್ತದೆ. 2. ಒಂದು ಟಿ ಚಮಚ ನಿಂಬೆ ರಸಕ್ಕೆ ಒಂದು ಟಿ ಚಮಚ ಬಿಳಿ ಈರುಳ್ಳಿ ರಸ ಸೇರಿಸಿ ದಿನಕ್ಕೆ ಮೂರು ಬಾರಿ ತೆಗೆದುಕೊಂಡರೆ ಮಲೇರಿಯಾ ರೋಗ ಗುಣವಾಗುತ್ತದೆ. 3. ನಿಂಬೆ ಹಣ್ಣಿನ ಪಾನಕ ಕುಡಿಯುವುದರಿಂದ ಆಮಶಂಕೆ ಮತ್ತು ಮೂಲವ್ಯಾಧಿ ಅಲ್ಲಿ ಆಗುವ ರಕ್ತ ಸ್ರಾವ ಕಡಿಮೆ ಆಗುತ್ತದೆ. 4. ಅಜೀರ್ಣವಾದಾಗ ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ ಕುಡಿಯುವದರಿಂದ ಬೇಗ ಗುಣವಾಗುತ್ತದೆ. 5. ಜೇನುತುಪ್ಪ ಮತ್ತು ನಿಂಬೆರಸ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ತೆಗೆದುಕೊಂಡರೆ ಎದೆನೋವು, ತಲೆ ನೋವು, ಹೊಟ್ಟೆ ತೊಳಸುವುಡು ಮತ್ತು ತಲೆ ಸುತ್ತು ನಿಲ್ಲುತ್ತದೆ. 6. ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಡೆಗಟ್ಟಲು ಹಾಲಿನ ಕೆನೆ ಕೆಲವು ತೊಟ್ಟು ನಿಂಬೆ ರಸ ಸೇರಿಸಿ ಮುಖದ ಮೇಲೆ ಮೃದುವಾಗಿ ಹಚ್ಚಬೇಕು. ಮತ್ತು ಸ್ವಲ್ಪ ಸಮಯದ ನಂತರ ಮುಖ ತೊಳೆಯಬೇಕು. 7. ಒಂದು ಟಿ ಚಮಚ ನಿಂಬೆ ರಸವನ್ನೂ ಛನ್ನಾಗಿ ಮಾಗಿದ ಬಾಳೆಹಣ್ಣು ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಆಮಶಂಕೆ ಗುಣವಾಗುತ್ತದೆ. 8. ಒಂದು ಟಿ ಚಮಚ ನಿಂಬೆ ರಸವನ್ನು ಊಟಕ್ಕೆ ಮುಂಚೆ ಸೇವಿಸಿದರೆ ಉಬ್ಬಸ ರೋಗಕ್ಕೆ ಪರಿಹಾರ ಸಿಗುತ್ತದೆ. 9. ಬಿಸಿಯಾದ ಟೀ ಗೆ ನಿಂಬೆರಸ ಹಿಂಡಿ ಕುಡಿಯುವುದರಿಂದ ನೆಗಡಿ ಗುಣವಾಗುತ್ತದೆ. ಹಾಗೂ ರಸಭರಿತವಾದ ನಿಂಬೆಹಣ್ಣು ಗಳನ್ನು ಅರ್ಧ ಹೋಳುಗಳನ್ನು ಮಾಡಿ ಅದರ ಮೇಲೆ ಅಡುಗೆ ಉಪ್ಪನ್ನು ಸವಾರಿ ಬಿಸಿಲಿನಲ್ಲಿ ಹದಿನೈದು ದಿನ ಚೆನ್ನಾಗಿ ಒಣಗಿಸಿ ಅವುಗಳನ್ನು ಚೂರ್ಣ ಮಾಡಿಟ್ಟು. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಲ್ಲಿ ಈ ಚೂರ್ಣವನ್ನು ಒಂದು ಚಮಚ ಸೇವಿಸುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿ.
10. ನಿಂಬೆರಸ ಮತ್ತು ಹರಳೆಣ್ಣೆ ಸಮ ಪ್ರಮಾಣದಲ್ಲಿ ಬೆರೆಸಿ ಕೀಲುನೋವು, ಮಾಂಸ ಖಂಡಗಳ ನೋವಿನಿಂದ ಕೂಡಿರುವ ಭಾಗಕ್ಕೆ ಹಚ್ಚಿ ತಿಕ್ಕಿ ಮಾಲೀಸು ಮಾಡುವುದರಿಂದ ನೋವು ಬಿಟ್ಟು ಹೋಗುತ್ತದೆ. 11. ಒಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನಾಗುವುದು. ಕೂದಲು ಉದುರುತ್ತದೆ ನಿಂಬೆರಸ ವನ್ನ ಚೆನ್ನಾಗಿ ತೆಳೆಗೆ ತಿಕ್ಕಿ, ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ಹೀಗೆ ಆಗಾಗ್ಗೆ ಈ ರೀತಿ ಮಾಡುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. 12. ಬಿಸಿ ಮಾಡಿದ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ತೊಟ್ಟು ತೊಟ್ಟಾಗಿ ಕಿವಿಗೆ ಹಾಕಿದರೆ ಕಿವಿಯಲ್ಲಿ ಪೋಟು ಆಗಿದ್ದರೆ ಕಡಿಮೆ ಆಗುತ್ತದೆ. 13. ಮುಟ್ಟಿನ ಸಮಯದಲ್ಲಿ ದಿನಕ್ಕೆ ಮೂರು ನಾಲ್ಕು ಬಾರಿ ನಿಂಬೆರಸ ಸೇವಿಸುತ್ತಿದ್ದರೆ ಹೆಚ್ಚಿನ ಋತಸ್ರಾವ ಆಗುವುದಿಲ್ಲ. 14. ಒಂದು ಬಟ್ಟಲು ಕುದಿಸಿ ಆರಿಸಿದ ನೀರಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಅದಕ್ಕೆ ನಾಲ್ಕು ಚಮಚ ಜೇನುತುಪ್ಪ ಉಪ್ಪು ಮಿಶ್ರ ಮಾಡಿ ಚೆನ್ನಾಗಿ ಕಲಕಿ ಟಾನ್ ಸಿಲಿ ಟಿಸ್ ನಿಂದ ನರಳುತ್ತಿರುವ ರೋಗಿಯು ಈ ಪಾನಕವನ್ನು ಸ್ವಲ್ಪ ಸ್ವಲ್ಪವಾಗಿ ಗುಟುಕರಿಸುತ್ತಿದ್ದರೆ ಗುಣ ಕಂಡು ಬರುತ್ತದೆ. 15. ದಾಲ್ಚಿನ್ನಿ ಯನ್ನು ನಿಂಬೆರಸ ದಲ್ಲಿ ತೇದು ಕಪಾಲಗಳಿಗೆ ಹಚ್ಚಿದರೆ ತಲೆ ನೋವು ಕಡಿಮೆ ಆಗುತ್ತದೆ. 16. ಆಗ ತಾನೇ ಹಿಂಡಿದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆಹಣ್ಣ ಹಿಂಡಿ ತಕ್ಷಣ ಸೇವಿಸಿ. ಒಂದು ವಾರ ಈ ರೀತಿ ಮಾಡಿದರೆ ಮೂಲವ್ಯಾಧಿ ಗುಣವಾಗುವುದು ಹಾಗೂ ತಾಜಾ ಕಬ್ಬಿನ ಹಾಲಿಗೆ ಎಳೆನೀರು, ಹಸಿಶುಂಠಿ ರಸ, ನಿಂಬೆರಸ ಸೇರಿಸಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತದೆ. 17. ಚೆನ್ನಾಗಿ ಸೀಯಿಸಿದ ಸ್ವಲ್ಪ ರಾಗಿಯ ಚೂರ್ಣವನ್ನು ಒಂದು ಟೀ ಚಮಚ ನಿಂಬೆರಸ ದೊಂದಿಗೆ ತೆಗೆದುಕೊಂಡರೆ ಅಧಿಕ ಪಿತ್ತದಿಂದ ತಲೆದೋರುವ ರೋಗಗಳು ಶಮನವಾಗುತ್ತದೆ. ಇದು ಅತ್ಯುತ್ತಮ ಪಿತ್ತ ಶಾಮಕ ಚಿಕಿತ್ಸೆ. 18. ಮೊಸರು ಅನ್ನಕ್ಕೆ ನಿಂಬೆರಸ ಹಿಂಡಿ ಊಟ ಮಾಡಿ ಈ ರೀತಿ 3-4 ದಿನಗಳು ಮಾಡಿದರೆ ಗುದದ್ವಾರದಲ್ಲಿ ನವೆ, ಕೆರೆತ ಮತ್ತು ಉರಿ ಆಗುತ್ತಿದ್ದರೆ ಕಡಿಮೆಯಾಗುತ್ತದೆ.
19. ಲವಂಗವನ್ನು ಚೆನ್ನಾಗಿ ನುಣ್ಣಗೆ ಅರೆದು ಸ್ವಲ್ಪ ನಿಂಬೆರಸ ದೊಂದಿಗೆ ಮಿಶ್ರ ಮಾಡಿ ನೋಯುತ್ತಿರುವ ಒಸಡು ಮತ್ತು ಹಲ್ಲುಗಳ ಮೇಲೆ ಇದನ್ನು ತಿಕ್ಕಿರಿ. ನೋವು ಶಾಂತವಾಗುವುದು. 20. ಅಭ್ಯಂಜನ ಸ್ನಾನ ಮಾಡುವಾಗ ಒಂದು ನಿಂಬೆ ಹಣ್ಣಿನ ರಸವನ್ನು ಸೀಗೆ ಪುಡಿಯೊಂದಿಗೆ ಬೆರೆಸಿ ತಲೆಗೆ ಉಜ್ಜಿಕೊಂಡರೆ ತಲೆಯಲ್ಲಿ ಒಟ್ಟು ಏಳುವುದು ನಿಂತು ಹೋಗುವುದು. 21. ಸುಮಾರು ನೂರು ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿoಬೆರಸ ಹಾಕಿ, ನಂತರ ಎಣ್ಣೆಯನ್ನು ಅಷ್ಟೇ ಪ್ರಮಾಣದ ಸುಣ್ಣದ ತಿಳಿಯೊಂದಿಗೆ ಮಿಶ್ರಣ ಮಾಡಿ ಇದನ್ನು ಕೂದಲಿಗೆ ಹಚ್ಚು ತಿದ್ದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿನ ಕಾಂತಿ ಹೆಚ್ಚುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುವುದು. 22. ನಿಂಬೆಹಣ್ಣಿನ ಸಿಪ್ಪೆ ಅಥವಾ ಎಳೆಯ ನಿಂಬೆ ಎಲೆಗಳನ್ನು ಅರಿಶಿನ ದೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು ಮಾಯುತ್ತವೆ. 23. ಶುದ್ಧವಾದ ಹಾಲನ್ನು ಚೆನ್ನಾಗಿ ಕುದಿಸಿ, ಒಂದು ಬಟ್ಟಲು ಹಾಲಿಗೆ ಒಂದು ನಿಂಬೆಹಣ್ಣನ್ನು ಹಿಂಡಿ ಒಂದು ಟೀ ಚಮಚ ಗ್ಲಿಸರಿನ್ ಸೇರಿಸಿ, ಅರ್ಧ ಗಂಟೆ ನಂತರ ಈ ಮಿಶ್ರಣವನ್ನು ಬಿರುಕು ಬಿಟ್ಟ ಕಾಲುಗಳಿಗೆ ಮಲಗುವುದಕ್ಕೆ ಮುಂಚೆ ಹಚ್ಚಿದರೆ ಚರ್ಮವು ಮೃದುವಾಗುತ್ತದೆ ಮತ್ತು ಕಾಂತಿ ಯುಕ್ತವಾಗುತ್ತದೆ. 24. ನಿಂಬೆಹಣ್ಣಿನ ರಸದಲ್ಲಿ ಗಂಧಕದ ಹುಡಿಯನ್ನು ತೇದು ಲೇಪಿಸಿದರೆ ತುರಿಕಜ್ಜಿ ಗುಣವಾಗುತ್ತದೆ. 25. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದ ನಂತರ ಒಂದು ಬಟ್ಟಲು ಮಜ್ಜಿಗೆಗೆ ಒಂದು ನಿಂಬೆಹಣ್ಣು ಹಿಂಡಿ ಅದನ್ನು ಕುಡಿದರೆ ದೇಹಾರೋಗ್ಯ ಉತ್ತಮವಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. 26. ಅರ್ಧ ಬಟ್ಟಲು ಮಜ್ಜಿಗೆಗೆ ಒಂದು ಹೋಳು ನಿಂಬೆ ಹಣ್ಣಿನ ರಸ, ಒಂದು ಟೀ ಚಮಚ ಜೀರಿಗೆ ಮತ್ತು 4-5 ಏಲಕ್ಕಿ ನುಣ್ಣಗೆ ಅರೆದು ಚೆನ್ನಾಗಿ ಬೆರೆಸಿ ಇದನ್ನು 2-3 ಗಂಟೆಗಳಿಗೊಮ್ಮೆ ಕುಡಿಯುತ್ತಿದ್ದರೆ ಹೊಟ್ಟೆ ತೊಳೆಸುವುದು ನಿಲ್ಲುವುದು ಮತ್ತು ವಾಂತಿ ಕಡಿಮೆ ಆಗುತ್ತದೆ.