ನಮಸ್ತೆ ಪ್ರಿಯ ಓದುಗರೇ, ಪ್ರತಿನಿತ್ಯ ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಪ್ರಕೃತಿ ನಮಗೆ ಬೇಗನೆ ಮಲಗಿ ಬೇಗನೆ ಏಳಲು ಹೇಳುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಧರ್ಮಗಳು ಈ ನಿಟ್ಟಿನಲ್ಲಿ ಬೆಳಿಗ್ಗೆ ಬೇಗ ಎದ್ದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಕೂಡ ಹೇಳುತ್ತವೆ. ಆದರೆ ಇಂದಿನ ಬಹಳಷ್ಟು ಯುವಜನತೆ ಪ್ರಕೃತಿ ನೀಡಿದ ಈ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ತಡರಾತ್ರಿಯವರೆಗೆ ಎಚ್ಚರ ಇದ್ದು ಸೂರ್ಯೋದಯವನ್ನು ಕಾಣದ ನಮ್ಮನ್ನು ಆರೋಗ್ಯವನ್ನು ಪಡೆಯುವುದಕ್ಕಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುವ ಮೂಲಕ ಆರೋಗ್ಯವಾಗಿ ಇರಬಹುದು ಎಂಬ ನಂಬಿಕೆ ಬೆಳೆದುಬಿಟ್ಟಿದೆ. ಆದ್ರೆ ನಿಜವಾದ ಆರೋಗ್ಯವಂತರು ನಿಸರ್ಗದೊಡನೆ ನಡೆಯುತ್ತಾರೆ. ಮುಂಜಾನೆ ಎದ್ದು ಸೂರ್ಯ ಉದಯಿಸುವಾಗ ನಡೆಯುವ ನಡಿಗೆಯು ತುಂಬಾ ಆರೋಗ್ಯಕರ ಮತ್ತು ಇಡೀ ದೇಹಕ್ಕೆ ವ್ಯಯಾಮ ಮತ್ತು ಮನಸ್ಸಿಗೆ ಆನಂದ ಹಾಗೂ ನೆಮ್ಮದಿಯನ್ನು ನೀಡುವ ಚಟುವಟಿಕೆ ಆಗಿದೆ.
ನಮ್ಮ ಆರೋಗ್ಯ ನಮ್ಮ ನಡಿಗೆಯಲ್ಲಿದೇ. ವಾಕಿಂಗ್ ಮಾಡುವುದರಿಂದ ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ. ನಮ್ಮ ಮೀನಖಂಡಗಳು ಸದೃಢ ಗೊಳ್ಳುತ್ತವೆ. ತೊಡೆ ಸ್ನಾಯುಗಳು ಬಲಗೊಳ್ಳುತ್ತವೆ. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ ಮತ್ತು ಚೈತನ್ಯವನ್ನು ಒದಗಿಸುತ್ತದೆ. ಜೊತೆಗೆ ಹೃದಯಕ್ಕೂ ಕೂಡ ವ್ಯಾಯಾಮ ಮಾಡಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಮೂಲಕ ಹೃದಯದ ಕ್ರಿಯೆ ಸುಲಭ ಗೊಳಿಸುತ್ತದೆ. ನರಗಳು ಹಿಗ್ಗುವುದು ಮತ್ತು ಕುಗ್ಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹೀಗಾಗಿ ಹೃದಯ ಆರೋಗ್ಯಯುತವಾಗಿ ಇರುತ್ತದೆ. ವಾಕಿಂಗ್ ಮಾಡುವಾಗ ಧೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳುತ್ತೇವೆ ಇದರಿಂದ ದೇಹಕ್ಕೆ ಅಗತ್ಯವಾದ ಆಮ್ಲಜನಕವು ದೊರೆಯುತ್ತದೆ. ಚಿಕಿತ್ಸೆಗೆ ಒಳಗಾದವರು ಬೇಗನೆ ಚೇತರಿಸಿಕೊಳ್ಳಲು ವಾಕಿಂಗ್ ಒಂದು ಸೂಕ್ತ ಮಾರ್ಗ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಅರೋಗ್ಯಗಗಳನ್ನು ಸಮ ಸ್ಥಿತಿಯಲ್ಲಿ ಇಡುತ್ತದೆ ಈ ಬೆಳಗಿನ ವಾಕಿಂಗ್. ಬೆಳಗಿನ ಜಾವ ಗಾಳಿ ಶ್ವಾಸಕೋಶಗಳನ್ನು ಪ್ರವೇಶಿಸಿದ ತಕ್ಷಣ ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಮ್ಲ ಜನಕ ಸ್ನಾಯುಗಳಿಗೆ ಲಭ್ಯ ಆಗುವುದರಿಂದ ರಕ್ತನಾಳಗಳಿಗೆ ಹೆಚ್ಚಿನ ವಿಶ್ರಾಂತಿ ದೊರೆತು ರಕ್ತದೊತ್ತಡ ಸಮ ಸ್ಥಿತಿಯಲ್ಲಿ ಇಡುತ್ತದೆ.
ಇನ್ನೂ ಸಕ್ಕರೆ ಕಾಯಿಲೆ ಇದ್ದವರಿಗೂ ಉತ್ತಮ ವ್ಯಾಯಾಮ ಈ ವಾಕಿಂಗ್. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ವಾಕಿಂಗ್ ಸಕ್ಕರೆ ಕಾಯಿಲೆ ಇದ್ದವರಿಗೂ ಅದ್ಭುತ ಹಾಗೂ ಅತ್ತ್ಯುತ್ತಮ ವ್ಯಾಯಾಮ ಆಗಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಸೂಕ್ತ ಮಿತಿಯಲ್ಲಿಡಲು ವಾಕಿಂಗ್ ಅತ್ತ್ಯುತ್ತಮವಾಗಿದೆ. ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಾಗಿ ಸಾಕಷ್ಟು ವೈದ್ಯರು ಮಧುಮೇಹಿಗಳಿಗೆ ವಾಕಿಂಗ್ ಮಾಡಲು ಸಲಹೆ ನೀಡುತ್ತಾರೆ. ನಮ್ಮ ದೇಹ ಫಿಟ್ ಆಗಿರಲು ಕೂಡ ನೆರವಾಗುತ್ತದೆ. ತೂಕ ಕಳೆದುಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕಿಂತ ಕಷ್ಟವಾದದ್ದು ಇಳಿದ ತೂಕವನ್ನು ಅಲ್ಲೇ ನಿಲ್ಲಿಸುವುದು. ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಈ ಕಾರ್ಯವನ್ನು ಸುಲಭ ಗೊಳಿಸುತ್ತದೆ. ಮುಖ್ಯವಾಗಿ ಸೊಂಟದ ಸುತ್ತ ಸಂಗ್ರಹವಾದ ಕೊಬ್ಬನ್ನು ತಡೆಯುತ್ತದೆ. ಸಾಕಷ್ಟು ಜನರು ಫಿಟ್ ಆಗಿರುವುದಕ್ಕೆ ಜಿಮ್ ಹಾಗೂ ವ್ಯಾಯಾಮ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಪ್ರತಿನಿತ್ಯ ನಡೆಯುವುದರಿಂದ ವಾಕಿಂಗ್ ಮಾಡುವುದರಿಂದ, ಮೆಟ್ಟಿಲು ಹತ್ತುವುದರಿಂದ ಹಾಗೂ ಸೈಕ್ಲಿಂಗ್ ಮಾಡುವುದರಿಂದ ಕೂಡ ಫಿಟ್ ಆಗಿರಬಹುದು. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು ದೀರ್ಘಾಯುಷ್ಯದ ಗುಟ್ಟು ಕೂಡ ಆಗಿದೆ. ಬೆಳಿಗ್ಗೆ ವಾಕಿಂಗ್ ಮಾಡುವಾಗ ಸೂರ್ಯನ ಕಿರಣಗಳು ದೇಹಕ್ಕೆ ಉತ್ತಮ ಎಂದು ಆಯುರ್ವೇದವೂ ಕೂಡ ಹೇಳುತ್ತದೆ. ಸೂರ್ಯನ ಕಿರಣಗಳು ಮೈಮೇಲೆ ಬೀಳುವುದರಿಂದ ಬೆಳಿಗ್ಗೆ ನಮಗೆ ವಿಟಮಿನ್ ಡಿ ಕೂಡ ಸಿಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವನ್ನು ವೃದ್ಧಿಸುತ್ತದೆ ಈ ವಾಕಿಂಗ್. ಈ ಲೇಖನದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ. ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.