ಎಷ್ಟೇ ಬಾರಿ ಪೂಜೆ ಮಾಡಿದರೂ, ಎಷ್ಟೇ ಅದ್ದೂರಿಯಾಗಿ ಪೂಜೆ ಮಾಡಿದರೂ ಕೆಲವೊಮ್ಮೆ ಪೂಜೆಯ ಫಲ ಸಿಗದೆ ಹೋಗಬಹುದು. ಇದಕ್ಕೆ ಮುಖ್ಯ ಕಾರಣ ನಾವು ದೇವರ ಪೂಜೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ಎನ್ನಬಹುದು. ಪೂಜೆ ಮಾಡುವಾಗ ನಾವು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು. ಪೂಜೆಯಲ್ಲಿ ಮರೆತು ಈ ತಪ್ಪುಗಳನ್ನು ಮಾಡದಿರಿ. ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆರಾಧನೆಯಿಂದ ದೇವರ ಅನುಗ್ರಹವು ಯಾವಾಗಲೂ ಭಕ್ತರ ಮೇಲೆ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರು ನಿತ್ಯ ಪೂಜೆ ಮಾಡುತ್ತಿದ್ದರೂ ಪೂಜೆಯ ಫಲ ಸಿಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಹಲವು ಬಾರಿ ಕೇಳಿರಬಹುದು. ಇದಕ್ಕೆ ಕಾರಣವೇನೆಂದು ಅವರು ಚಿಂತಿಸುತ್ತಿರಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ದೇವರ ಪೂಜೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ಎನ್ನಬಹುದು. ಪೂಜೆ ಮಾಡುವಾಗ ನಾವು ಯಾವೆಲ್ಲಾ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪೂಜೆ ಮಾಡುವಾಗ ಯಾವಾಗಲು ಮನಸ್ಸು ಕಲುಷಿತವಾಗಬಾರದು. ಪೂಜೆಯ ಸಮಯದಲ್ಲಿ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಹೊಂದುವುದರಿಂದ ಪೂಜೆಯ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.
ಪೂಜೆಯಲ್ಲಿ ಧೂಪದ್ರವ್ಯವನ್ನು ಬಳಸಬೇಡಿ. ಬಿದಿರಿನಿಂದ ಮಾಡಿದ ಅಗರಬತ್ತಿಯನ್ನು ಹಚ್ಚಬೇಡಿ. ಏಕೆಂದರೆ ಅವುಗಳನ್ನು ಅಂತ್ಯಕ್ರಿಯೆಯ ವಿಧಿಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಪೂಜೆಯ ಸಮಯದಲ್ಲಿ ಧೂಪ, ದೀಪ, ಅಗರಬತ್ತಿಗಳನ್ನು ಹಚ್ಚಿದ ನಂತರ ಬೆಂಕಿಕಡ್ಡಿಯನ್ನು ಬಾಯಿಂದ ಊದುವ ಮೂಲಕ ನಂದಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಮನೆಯಿಂದ ದೂರವಾಗುತ್ತಾಳೆ ಎನ್ನುವ ನಂಬಿಕೆಯಿದೆ.ಭಗವಂತನಿಗೆ ಅಭಿಷೇಕ ಮಾಡುವಾಗ ಕೇವಲ ಬೆರಳುಗಳನ್ನು ಮಾತ್ರ ಬಳಸಬೇಕು ಹೆಬ್ಬೆರಳನ್ನು ಬಳಸಬಾರದು. ಹೀಗೆ ಮಾಡುವುದರಿಂದ ದೇವರು ಕೋಪಿಸಿಕೊಂಡು ಮನೆಯಲ್ಲಿ ಆಪತ್ತು ಎದುರಾಗುವಂತೆ ಮಾಡುತ್ತಾನೆ. ಯಾವಾಗಲೂ ಗಣೇಶನ ಪೂಜೆಯೊಂದಿಗೆ ಯಾವುದೇ ಪೂಜೆಯನ್ನು ಪ್ರಾರಂಭಿಸಿ. ಶ್ರೀ ಗಣೇಶನಿಗೆ ತುಳಸಿ ದಳವನ್ನು ಎಂದಿಗೂ ಅರ್ಪಿಸಬೇಡಿ. ಏಕೆಂದರೆ ಹಾಗೆ ಮಾಡುವುದರಿಂದ ಪಾಪದ ಪಾಲುದಾರರಾಗುತ್ತೀರಿ.