ನಮಸ್ತೆ ಪ್ರಿಯ ಓದುಗರೇ, ಕಷ್ಟ ಅನ್ನುವುದು ಮನುಷ್ಯನಿಗೆ ಬರದೇ ಇನ್ನೇನು ಪ್ರಾಣಿಗಳಿಗೆ ಬರಲು ಸಾಧ್ಯವೇ? ಮನುಷ್ಯನಿಗೆ ಕಷ್ಟ ಅಂತ ಬಂದಾಗ ಆತನಿಗೆ ತಕ್ಷಣವೇ ನೆನಪಾಗುವುದು ದೇವರು. ಆಗ ಮನುಷ್ಯನು ದೇವರ ಹತ್ತಿರ ಹೋಗಿ ತನ್ನ ಎಲ್ಲ ಕಷ್ಟವನ್ನು ಹೇಳಿಕೊಳ್ಳುತ್ತಾನೆ ಅದೇ ಆತನು ಸುಖದಲ್ಲಿ ಇರುವಾಗ ಯಾವುದೇ ದೇವರ ನೆನಪು ಅನ್ನುವುದು ಆತನಿಗೆ ಆಗುವುದಿಲ್ಲ. ಆದರೆ ಈ ರೀತಿಯಾಗಿ ಕೆಲವರು ಮಾಡುತ್ತಾರೆ. ಎಲ್ಲರೂ ಅಂತ ಹೇಳಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಕಷ್ಟ ಅಂತ ಬಂದಾಗ ಅವರು ದೇವರಲ್ಲಿ ಹೋಗಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ ಅವರ ಎಲ್ಲ ಸಂಕಷ್ಟಗಳು ದೂರವಾಗಬೇಕು ಅಂತ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಇದರ ಜೊತೆಗೆ ಕಷ್ಟಗಳು ದುಃಖ ದುಮ್ಮಾನಗಳು ಎಲ್ಲವೂ ಕಡಿಮೆ ಆಗುತ್ತಾ ಬಂದರೆ ನಾನು ನಿಮಗೆ ಇಷ್ಟೊಂದು ಕಾಣಿಕೆಯನ್ನು ಕೊಡುತ್ತೇನೆ, ಮುಡಿಯನ್ನು ಕೊಡುತ್ತೇನೆ ಅಂತ ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿರುತ್ತಾರೆ. ಹೀಗೆ ಮಾಡಿದರೆ ಮಾತ್ರ ದೇವರು ನಮ್ಮೊಂದಿಗೆ ಇರುತ್ತಾನೆಯೇ ಅಥವಾ ಬೇರೆ ಏನಾದರೂ ಪರಿಹಾರ ಇದೆಯೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಎಲ್ಲ ಇಷ್ಟಾರ್ಥಗಳು ಪೂರ್ತಿಯಾಗಲು ಏನು ಮಾಡಬೇಕು ಅಂತ ತಿಳಿಸಿಕೊಡುತ್ತೇವೆ. ಕೆಲವರು ಹರಕೆ ಮುಗಿದ ಮೇಲೆ ದೇವರಿಗೆ ಹೋಗಿ ಪೂಜೆ ಮಾಡುವುದು ಮಾಡುತ್ತಾರೆ ಇನ್ನೂ, ಕೆಲವರು ಕೂದಲನ್ನು ಕತ್ತರಿಸಿ ದೇವರಿಗೆ ಮುಡಿ ಅನ್ನು ಅರ್ಪಣೆ ಮಾಡುತ್ತಾರೆ ಇನ್ನೂ ಕೆಲವರು ಅನ್ನದಾನವನ್ನು ಮಾಡುತ್ತಾರೆ,ಇನ್ನೂ ಕೆಲವರು ಬಡವರಿಗೆ ಬಟ್ಟೆಯನ್ನು ದಾನವಾಗಿ ಕೊಡುತ್ತಾರೆ ಹೀಗೆ ಅವರ ಮನೋಕಾಮಣೆಗಳು ಪೂರ್ತಿಯಾದಾಗ ಅವರು ದೇವರಿಗೆ ಈ ರೀತಿಯಾಗಿ ತಮ್ಮ ಪೂಜೆಯನ್ನು ಸಮರ್ಪಣೆ ಮಾಡುತ್ತಾರೆ. ಇನ್ನೂ ಕೆಲವರು ದೇವರ ಹುಂಡಿಗೆ ಹಣವನ್ನು ಹಾಕುತ್ತಾರೆ. ಆದರೆ ಈ ರೀತಿಯಾಗಿ ಪ್ರತಿ ಬಾರಿ ಕಷ್ಟ ಬಂದಾಗಲೂ ಮಾಡಿದರೆ ನಾವು ದೇವರಿಗೆ ಲಂಚ ಕೊಟ್ಟ ಹಾಗೆ ಆಗುತ್ತದೆ. ನಾವು ದೇವರಿಗೆ ದುಡ್ಡು ಕೊಟ್ಟರೆ ದೇವರು ನಮ್ಮ ಎಲ್ಲ ಕಷ್ಟಗಳನ್ನು ಈಡೆರಿಸುತ್ತಾನೆ ಅಂತ ಭಾವಿಸುವುದು ತುಂಬಾನೇ ದೊಡ್ಡ ತಪ್ಪು ಕಲ್ಪನೆ. ಹಾಗಾದರೆ ಇದಕ್ಕೆ ಏನು ಮಾಡಬೇಕು. ಇನ್ನಾವುದಾದರೂ ಮಾರ್ಗಗಳು ಮತ್ತು ಪರಿಹಾರಗಳು ಇವೆಯೇ? ಹೌದು ನಿಜಕ್ಕೂ ಇದೆ ಮಿತ್ರರೇ ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ.
ಮೊದಲಿಗೆ ಭಕ್ತಿ ಮತ್ತು ನಂಬಿಕೆ, ನಾವು ಯಾವುದೇ ಕೆಲಸವನ್ನು ಮಾಡುವುದಾಗಲಿ ದೇವರ ಹತ್ತಿರ ಪ್ರಾರ್ಥನೆಯನ್ನು ಮಾಡುವುದಾಗಲಿ ಒಳ್ಳೆಯ ಭಕ್ತಿ ಭಾವ ಮತ್ತು ನಂಬಿಕೆಯಿಂದ ದೇವರಲ್ಲಿ ಕೇಳಿಕೊಳ್ಳಬೇಕು. ಉದಾಹರಣೆಗೆ ನಿಮಗೆ ಯಾವುದೋ ಒಂದು ಕೆಲಸ ಬೇಕಾಗಿರುತ್ತದೆ. ಅದನ್ನು ನೀವು ದೇವರ ಮುಂದೆ ನಿಂತು ದೇವರೇ ನನಗೆ ಕೆಲಸ ಬೇಕಾಗಿದೆ ಕೆಲಸವನ್ನು ನೀಡಿ ದಯೆ ತೋರಿಸು, ನಾನು ನಿಮಗೆ 101 ರೂಪಾಯಿ ಕಾಣಿಕೆಯಾಗಿ ನೀಡುತ್ತೇನೆ ಅಂತ ಬೇಡಿಕೊಳ್ಳುತ್ತೀರಿ. ಎಲ್ಲರೂ ಸಾಮಾನ್ಯವಾಗಿ ದೇವರಲ್ಲಿ ಈ ರೀತಿಯಾಗಿ ಕೇಳಿಕೊಳ್ಳುತ್ತಾರೆ. ಆದರೆ ಪ್ರತಿ ಸಾರೀ ಈ ರೀತಿ ಕೇಳಿ ದೇವರಿಗೆ ಹಣ ನೀಡುವುದು ತಪ್ಪು ಅಂತ ಹೇಳಲಾಗುತ್ತದೆ. ಆದ್ರೆ ಇದರ ಬದಲಾಗಿ ನೀವು ಈ ರೀತಿ ಪ್ರಾರ್ಥನೆ ಮಾಡಿ ಕೇಳಿಕೊಂಡರೆ ಮತ್ತಷ್ಟು ನಿಮ್ಮ ಇಷ್ಟಾರ್ಥಗಳು ಬೇಗನೆ ನೆರವೇರುತ್ತದೆ. ಅದುವೇ ಭಗವಂತ ನನಗೆ ಕೆಲಸದ ಅವಶ್ಯಕತೆ ಇದೆ ಇದರಿಂದ ನಮ್ಮ ಮನೆಯಲ್ಲಿ ತುಂಬಾನೇ ಸಹಾಯ ಆಗುತ್ತದೆ ಜೊತೆಗೆ ನನ್ನ ಕಷ್ಟಗಳು ದೂರವಾಗುತ್ತದೆ ನನಗೆ ಸಹಾಯ ಮಾಡು ಅಂತ ತುಂಬಾನೇ ಕನಿಕರಣವಾಗಿ ಭಕ್ತಿಯಿಂದ ದೇವರಲ್ಲಿ ಬೇಡಿಕೊಳ್ಳಬೇಕು.
ದೇವರಿಗೆ ಹುಂಡಿಯಲ್ಲಿ ದುಡ್ಡು ಹಾಕುವುದರಿಂದ ದೇವರು ಪ್ರತಿ ಸಾರಿಯೂ ಸಹಾಯ ಮಾಡುವುದಿಲ್ಲ. ಹಾಗೆಯೇ ನಿಮ್ಮ ಕಷ್ಟಗಳು ಇಷ್ಟಾರ್ಥಗಳು ನೆರವೇರಿದ ಮೇಲೆ ದೇವರು ನಿಮ್ಮನ್ನು ಪರೀಕ್ಷೆಯನ್ನು ಮಾಡುತ್ತಿರುತ್ತಾನೆ. ನೀವು ಅದೇ ಭಕ್ತಿ ಭಾವದಿಂದ ದೇವರನ್ನು ಕಂಡರೆ ದೇವರು ಸದಾ ಕಾಲ ನಿಮ್ಮೊಂದಿಗೆ ಇರುತ್ತಾರೆ. ಇಲ್ಲವಾದರೆ ನೀವು ದೇವರ ಹತ್ತಿರ ಕಷ್ಟ ಬಂದಾಗ ದೇವರು ಬೇಕು ಬೇಡವಾದಾಗ ದೇವರು ಬೇಡ ಅಂತ ನೀವು ನಿರಾಕರಣೆ ಮಾಡಿದರೆ ದೇವರು ನಿಮ್ಮ ಕೈ ಬಿಡುತ್ತಾನೆ ಆದ್ದರಿಂದ ಜೀವನದಲ್ಲಿ ಹಿಗ್ಗದೆ ಕುಗ್ಗದೆ ದೇವರಲ್ಲಿ ನಂಬಿಕೆ ಇಟ್ಟು ಜೀವನ ನಡೆಸಬೇಕು. ಇಷ್ಟು ಇಂದಿನ ಲೇಖನವಾಗಿದೆ. ಶುಭದಿನ.