ನಿಂಬೆ ಹಣ್ಣಿನ ಉಪಯೋಗ ಕೇವಲ ಅಡುಗೆ ತಯಾರಿಗೆ ಮತ್ತು ಆರೋಗ್ಯ ವೃದ್ಧಿಗೆ ಮಾತ್ರವಲ್ಲದೆ ದೇವರ ಪೂಜಿಗತ್ಯ ಪ್ರಮುಖವಾದದ್ದು ಎಂದರೆ ತಪ್ಪಾಗಲಾರದು. ನಿಂಬೆಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದದರಿಂದ ದೇವಿಯ ಕೃಪೆ ಮತ್ತು ಆಶೀರ್ವಾದ ನಮಗೆ ಸಿಗಲೆಂದು ಹಚ್ಚುತ್ತೇವೆ ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ ಹಣಕಾಸಿನ ತೊಂದರೆಗಳು ನಿರೂತ್ಸಹ ಆರೋಗ್ಯದ ಸಮಸ್ಯೆಗಳು ಮನೆಯ ವಾಸ್ತುದೋಶಕ್ಕೆ ಅಪಮೃತ್ಯು ಮುಖ್ಯವಾಗಿ ಕಾಳ ಸರ್ಪ ದೋಷಕ್ಕೆ ವ್ಯವಹಾರದಲ್ಲಿ ತೊಂದರೆ ಆಗುತ್ತಿದ್ದರೆ ಶತ್ರುಗಳ ಕಾಟ ಹಚ್ಚಿದರೆ ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತ್ತಿದ್ದಾರೆ ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ
ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪದ ಅಂಬ ಭವಾನಿ ಕಾಳಿಕಾದೇವಿ ಚೌಡೇಶ್ವರಿ ಮಾರಿ ಯಮ್ಮ ದುರ್ಗಾದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು. ದೇವಿಯ ವರದ ಮಂಗಳವಾರ ಮಧ್ಯಾನ ಮೂರು ಮೂವತ್ತರಿಂದ ಐದು ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 11 ರಿಂದ 2:30 ವರೆಗೆ ಹಚ್ಚಬಹುದು. ನಿಂಬೆ ದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವ ಗುಣದಿಂದ ಕೂಡಿರುತ್ತದೆ ಮತ್ತು ಶುಭ ಪ್ರಾರ್ಥವಾಗಿರುತ್ತದೆ.
ನಿಂಬೆಹಣ್ಣಿನ ದೀಪವನ್ನು ಹಚ್ಚಿ ಸಿ ನಂತರ ದೇವಿಗೆ ಮತ್ತು ಪೂಜೆಯನ್ನು ಮಾಡಿಸಬೇಕು. ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಮದುವೆ ತಡ ವಾಗುತ್ತಿದ್ದರೆ ಅಥವಾ ಮದುವೆಗೆ ಬೇರೆಯವರಿಂದ ತೊಂದರೆಗಳು ಉಂಟಾಗುತ್ತಿದ್ದರೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಶುಭ ಫಲ ಸಿಗುವುದು.
ಮನೆಯಲ್ಲಿ ಗಂಡ-ಹೆಂಡತಿಯರಲ್ಲಿ ಕಿತ್ತಾಟ ವೈಮನಸ್ಸು ಇನ್ನೂ ಅನೇಕ ಸಮಸ್ಯೆಗಳು ಉಂಟಾದಲ್ಲಿ ದಂಪತಿಯರು ಜೊತೆಯಲ್ಲಿಯೇ ದೇವಿಯ ದೇವಸ್ಥಾನಕ್ಕೆ ಹೋಗಿ ಈ ದೀಪವನ್ನು ಹಚ್ಚುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಬೆಳಗಿನ 8:30 ರಿಂದ 10:00 ವರೆಗೆ ಮತ್ತು ಸಂಜೆ 04:20 ರಿಂದ 5:40 ಗಂಟೆಯವರೆಗೆ ಹಚ್ಚುವುದು ಉತ್ತಮ. ಹಾಗೂ ಒಂದೇ ದಿನ ಒಂದೇ ಮನೆಯ ಇಬ್ಬರು ಹೆಣ್ಣು ಮಕ್ಕಳು ಈ ದೀಪವನ್ನು ಹಚ್ಚಬಾರದು ಹಾಗೂ ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಹಚ್ಚಬಾರದು ದೇವಸ್ಥಾನಗಳಲ್ಲಿ ಮಾತ್ರ ಹಚ್ಚಬೇಕು.
ಆರೋಗ್ಯ ಸರಿಯಿಲ್ಲದವರು, ಮೈಲಿಗೆ ಆದವರು ಮತ್ತು ಸೂತಕ ಇದ್ದವರು ಹಚ್ಚಬಾರದು ಆದರೆ ಮಕ್ಕಳು ಹುಟ್ಟಿದ ದಿನದಂದು ಮತ್ತು ಮದುವೆ ದಿನಗಳೆಂದು ನಿಂಬೆ ಹಣ್ಣಿನ ದೀಪವನ್ನು ಹಚ್ಚಲೇಬಾರದು, ಹಾಗಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕು ನೀವು ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಇಷ್ಟೆಲ್ಲ ಲಾಭವನ್ನು ಪಡೆಯಬಹುದು.