ತುಳಸಿ ಹಾಕದೆ ದೇವರ ತೀರ್ಥವಿರುವುದಿಲ್ಲ. ತುಳಸಿಯು ಧಾರ್ಮಿಕವಾಗಿಯೂ ಹಾಗು ಆರೋಗ್ಯವರ್ಧಕವಾಗಿ ಅದರದ್ದೇ ಮಹತ್ವವನ್ನು ಹೊಂದಿದೆ. ತುಳಸಿಯು ದೇವಪತ್ರೆ. ವಿಷ್ಣುವಿಗೆ ಅತಿಪ್ರಿಯವಾದ ತುಳಸಿಯು ಹಿಂದೆ ದೇವ ದಾನವರ ನಡುವೆ ನಡೆದ ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿತೆಂಬ ಪ್ರತೀತಿ ಇದೆ. ಅಮೃತದ ಕೆಲ ಹನಿಗಳು ಭೂಮಿಗೆ ಬಿದ್ದು ತುಳಸಿ ಹುಟ್ಟಿದ್ದರಿಂದ ಆದಲ್ಲಿ ಅಮೃತ ಗುಣವಿದೆ. ತುಳಸಿ ಗಿಡವು ದುಷ್ಟ ಶಕ್ತಿಗಳನ್ನು ಬಡೆದೋಡಿಸಿ ಒಳ್ಳೆಯ ಶಕ್ತಿಗಳನ್ನು ಹೆಚ್ಚಿಸುವುದರಿಂದ ಪ್ರತಿ ಮನೆಯ ಮುಂದೆ ಈ ಗಿಡವನ್ನು ಕಾಣಬಹುದು.

ತುಳಸಿಯು ಆರೋಗ್ಯವರ್ಧಕವು ಹೌದು. ಇದರಲ್ಲಿರುವ ಅನೇಕ ಔಷಧೀಯ ಗುಣಗಳು ಮನುಷ್ಯನ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ತುಳಸಿ ಎಲೆ ಅಥವಾ ಅದನ್ನು ನೆನಸಿದ ನೀರು ಕುಡಿದರೆ ಉಸಿರಾಟ ಸುಗಮವಾಗುತ್ತದೆ. ತುಳಸಿ ನೀರು ಕುಡಿದರೆ ಕಫ ನಿವಾರಣೆಯಾಗುತ್ತದೆ.

ಜ್ವರ, ಕೆಮ್ಮು, ನೆಗಡಿ ಅಂತಹ ತೊಂದರೆಗಳನ್ನು ಬೇರಿನಿಂದ ಕಿತ್ತೊಗೆಯುವ ಶಕ್ತಿ ತುಳಸಿ ಎಲೆಗಳಿಗಿದೆ. ಚರ್ಮದ ತುರಿಕೆ ಹಾಗು ಫಂಗಸ್ ಇನ್ಫೆಕ್ಷನ್ ಗಳಲ್ಲಿ ತುಳಸಿ ರಸ ಲೇಪಿಸಿದಲ್ಲಿ ತುರಿಕೆ ಮಂಗಮಾಯವಾಗುತ್ತದೆ.

ಒತ್ತಡ ನಿವಾರಣೆಗೆ, ಕಿಡ್ನಿ ಸ್ಟೋನ್, ಹೃದ್ರೋಗ ಹಾಗು ಮದುಮೇಹ ತಡೆಯಲು ಕೂಡ ತುಳಸಿ ಪ್ರಶಸ್ತ್ಯ.
ತುಳಸಿಯಲ್ಲಿರುವ ಒಲಿಯೊನಿಕ್ ಆಸಿಡ್ ಯಕೃತ್ ರಕ್ಷಕ. ತುಳಸಿಯಲ್ಲಿ ಆಂಟಿಬಯೋಟಿಕ್ ಹಾಗು ಆಂಟಿವೈರಲ್ ಅಂಶಗಳಿದ್ದು ಸೂಕ್ಷ್ಮಅಣುಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

ತುಳಸಿಯಲ್ಲಿರುವ ಆರ್ಸೋಲಿಕ್ ಆಸಿಡ್ ಕಾನ್ಸರ್ ಅನ್ನು ನಿಗ್ರಹಿಸುತ್ತದೆ. ಕಾನ್ಸರ್ ಕೋಶಗಳ ಸ್ವಯಂ ಭಕ್ಷಣೆಗೆ ಇದು ಪ್ರೇರೇಪಿಸುತ್ತದೆ. ಚರಕ ಸಂಹಿತೆಯ ಪ್ರಕಾರ ತುಳಸಿಯು ಮನೋ ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಶರೀರದಲ್ಲಿ ಸಮತೋಲನೆ ಉಂಟುಮಾಡುತ್ತದೆ.

ತುಳಸಿಯು ಒಂದರ್ಥದಲ್ಲಿ ಆಯುಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ ಕೆಲಸ ಮಾಡುವುದರಿಂದಲೇ ನಮ್ಮ ಹಿರಿಯರು ಪ್ರತಿದಿನ ತುಳಸಿಯು ದೇಹಕ್ಕೆ ಸೇರಬೇಕೆಂಬ ಉದ್ದೇಶ್ಯದಿಂದ ತೀರ್ಥದಲ್ಲಿ ತುಳಸಿಯನ್ನು ಕಡ್ಡಾಯವಾಗಿ ಬಳಸುವ ಸೂಚನೆ ನೀಡಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *