ದೇವಸ್ಥಾನದ ಹತ್ತಿರ ಮನೆಗಳು ಯಾಕೆ ಇರಬಾರದು ಒಂದು ವೇಳೆ ಹಾಗೆ ಇದ್ದರೆ ಯಾವ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಇದೀಗ ನಾವು ಹೇಳುತ್ತೇವೆ ಕೇಳಿ. ದೇವಸ್ಥಾನ ಒಂದು ಪವಿತ್ರವಾದ ಧಾರ್ಮಿಕ ಸ್ಥಳ ಅಂತ ಸ್ಥಳದ ಪಕ್ಕದಲ್ಲಿ ಮನೆಗಳು ಇರಬಾರದು ಯಾರು ವಾಸ ಮಾಡಬಾರದು ಎಂದು ನಮ್ಮ ಪೂರ್ವಿಕರು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣಗಳು ಸಹ 10 ಹಲವಾರು ದೇವಾಲಯದ ಗೋಪುರದ ನೆರಳು ಮನೆಯ ಮೇಲೆ ಬೀಳದಂತೆ ಮನೆಯನ್ನು ಉಳಿಸಿಕೊಳ್ಳಬೇಕು.
ದೇವಾಲಯ ಅತ್ಯಂತ ಶಕ್ತಿಯುತವಾದದ್ದು ಆ ಶಕ್ತಿ ದೇವಸ್ಥಾನದ ಸುತ್ತಮುತ್ತ ಇರುವ ಪರಿಸರವನ್ನು ಪ್ರಭಾವಕ್ಕೆ ಒಳಪಡಿಸುತ್ತದೆ ಅದು ಮನೆಯಲ್ಲಿರುವ ಶಾಂತಿಯನ್ನು ಹೋಗಲಾಡಿಸುತ್ತದೆ ಆದ್ದರಿಂದಲೇ ಪುರಾತನ ದೇವಸ್ಥಾನದಲ್ಲಿನ ಸುತ್ತಮುತ್ತ ಒಂದಕ್ಕಿಂತ ಹೆಚ್ಚು ಕಾಂಪೌಂಡ್ ಗೋಡೆಗಳನ್ನು ಇರಿಸಲಾಗುತ್ತಿತ್ತು. ಒಂದು ವೇಳೆ ದೇವಾಲಯದ ಸುತ್ತಮುತ್ತ ಮನೆಯನ್ನು ನಿರ್ಮಿಸಿಕೊಂಡರೆ ಯಾವ ಪರಿಣಾಮಗಳು ಬೀರುತ್ತವೆ ಎಂದು ಇದೀಗ ಹೇಳುತ್ತೇವೆ ಕೇಳಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಕೆಸರು ಇರಬಾರದು. ಇದರ ಹೊರತಾಗಿ ಮರ, ಗೋಡೆ, ಮೂಲೆ, ಹಳ್ಳ, ಬಾವಿ ಹಾಗೂ ದೇವಸ್ಥಾನದ ನೆರಳು ಮನೆಯ ಮುಖ್ಯದ್ವಾರದ ಮುಂದೆ ಬೀಳಬಾರದು. ಇದರ ಹೊರತಾಗಿ, ಯಾವುದೇ ಸಮಾಧಿ, ಉದ್ದದ ಲೇನ್ ಅಥವಾ ಯಾವುದೇ ಅಡೆತಡೆಗಳು ಇರಬಾರದು. ಅಂತಹ ಅಡೆತಡೆಗಳು ಇದ್ದಲ್ಲಿ, ಅಂತಹ ಸ್ಥಳದಲ್ಲಿ ನಿವಾಸವನ್ನು ನಿರ್ಮಿಸುವುದು ಅಥವಾ ಖರೀದಿಸುವುದನ್ನು ತಪ್ಪಿಸಬೇಕು. ಅಂತಹ ಅಡೆತಡೆಗಳು ಅಶುಭ ಮತ್ತು ಜೀವನದಲ್ಲಿ ವಿನಾಶವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ.
ಪ್ರಪಂಚ ಎಷ್ಟು ಅಭಿವೃದ್ಧಿಯಾಗಿ ಹೊಂದುತ್ತದೆ ಆದರೆ ಮನುಷ್ಯನಿಗೆ ಪ್ರಶಾಂತತೆ ಮಾತ್ರ ಇರುತ್ತದೆ ಆದ್ದರಿಂದ ಮನಸ್ಸಿನ ಪ್ರಶಾಂತತೆಗೋಸ್ಕರ ದೇವಸ್ಥಾನಕ್ಕೆ ಹೋಗುತ್ತಾರೆ ಅದಕ್ಕಾಗಿ ಕೆಲವು ಮಂದಿ ದೇವಸ್ಥಾನದ ಸಮೀಪದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳುತ್ತಾರೆ ಆದರೆ ಕೆಲವು ಪ್ರಾಚೀನ ಮತ್ತು ಪುರಾತನ ಗ್ರಂಥಗಳ ಪ್ರಕಾರ ದೇವಸ್ಥಾನಕ್ಕೆ ತುಂಬಾ ಹತ್ತಿರವಾಗಿ ಮನೆಯನ್ನು ನಿರ್ಮಿಸಿದರೆ ಕೆಟ್ಟ ಪರಿಣಾಮಗಳನ್ನು ಕಾಣಬೇಕಾಗುತ್ತದೆ ಇದು ಪುರಾಣ ಗ್ರಂಥಗಳ ಪ್ರಕಾರ ದೇವಸ್ಥಾನದಲ್ಲಿರುವ ಬುಧಸ್ಥಂಭದ ನೆರಳು ಮನೆಯ ಮೇಲೆ ಬೀಳಬಾರದು ಎನ್ನುವ ಸೂತ್ರವಿದೆ ವಾಸ್ತು ಶಾಸ್ತ್ರದಲ್ಲಿ ಇದರ ಬಗ್ಗೆ ಹೆಚ್ಚಿನ ವಿವರಗಳು ಇವೆ.
ಮಹಾಶಿವ ಗ್ರಾಮ ದೇವತೆ ಮತ್ತು ಹೆಣ್ಣು ದೇವತೆಗಳ ಎದುರುಗಡೆ ಮನೆಯನ್ನು ನಿರ್ಮಿಸಬಾರದು ಹಾಗೆ ಇಂತಹ ಪರಿಸ್ಥಿತಿಯಲ್ಲಿ ಮನೆಯನ್ನು ಕಟ್ಟಬೇಕೆಂದರೆ ಕನಿಷ್ಠ ಪಕ್ಷ ನೂರು ಅಡಿ ದೂರವಾದರೂ ಇರುವಂತೆ ನೋಡಿಕೊಂಡು ಮನೆಯನ್ನು ಕಟ್ಟಬಹುದು. ಎಷ್ಟು ದೇವಸ್ಥಾನದ ಹಿಂದೆ ಮನೆಯನ್ನು ಕಟ್ಟಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ ಹಾಗೆ ದೇವಸ್ಥಾನದ ಹಿಂದೆ ಮನೆಯನ್ನು ನಿರ್ಮಿಸಲೇಬೇಕು ಬೇರೆ ದಾರಿಯೇ ಇಲ್ಲ ಎಂದಾದರೆ ಕನಿಷ್ಠ ಪಕ್ಷ 20 ಅಡಿ ದೂರವಾದರೂ ಇರುವಂತೆ ನೋಡಿಕೊಂಡು ಮನೆಯನ್ನು ಕಟ್ಟಬಹುದು.
ಇನ್ನು ಶಕ್ತಿ ದೇವಸ್ಥಾನದ ಸ್ಥಾಪಕದಲ್ಲಿ ಮನೆಯನ್ನು ನಿರ್ಮಿಸಲೇಬಾರದು ಒಂದು ವೇಳೆ ಇಂಥ ಪರಿಸ್ಥಿತಿಯಲ್ಲಿ ಮನೆಯನ್ನು ಕಟ್ಟಲೇ ಬೇಕೆಂದರೆ ಕನಿಷ್ಠ ಪಕ್ಷ 120 ಅಡಿ ದೂರವಾದರೂ ಇರುವಂತೆ ನೋಡಿಕೊಳ್ಳಬೇಕು ಈಗಾಗಲೇ ಒಂದು ವೇಳೆ ತಿಳಿಯದೆ ಮನೆಯನ್ನು ನಿರ್ಮಿಸಿಕೊಂಡಿದ್ದೇವೆ ಏನು ಮಾಡಲು ಆಗುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ನೀವು ಇದ್ದರೆ ಮನೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಮರಗಳನ್ನು ಬೆಳೆಸಿದರೆ ಅದರ ಸಕಾರಾತ್ಮಕ ಪ್ರವಾಹ ಸ್ವಲ್ಪವಾದರೂ ಕಡಿಮೆ ಆಗಬಹುದು. ವಾಸ್ತು ಪ್ರಕಾರ ನಿಮ್ಮ ಮನೆ ಕಟ್ಟಿದರೆ ನೀವು ನಿಶ್ಚಿಂತೆಯಿಂದ ಜೀವನಪೂರ್ತಿ ಕಳೆಯಬಹುದು ಇಲ್ಲವಾದರೆ ನಿಮ್ಮ ಮನಸ್ಸಿನಲ್ಲಿ ಒಂದು ಪುಟ್ಟ ಪ್ರಶ್ನೆಯು ನಿಮ್ಮನ್ನು ಸದಾ ಕಾಡುತ್ತಿರುತ್ತದೆ.