ಎಲ್ಲರಿಗೂ ನಮಸ್ಕಾರ ಇವತ್ತಿನ ವಿಷಯ ಬಿಳಿ ರಕ್ತ ಕಣಗಳನ್ನು ಹೇಗೆ ಹೆಚ್ಚು ಗಳಿಸುವುದು. ರೋಗನಿರೋಧಕ ಶಕ್ತಿಗೂ ಬಿಳಿ ರಕ್ತ ಕಣಗಳಿಗೂ ಸಂಬಂಧ ಇದೆ. ದೇಹದಲ್ಲಿ ಕೆಂಪು ಮತ್ತು ಬಿಳಿ ರಕ್ತಕಣಗಳ ಬಗ್ಗೆ ನಾವು ಕೇಳಿದ್ದೇವೆ. ದೇಹದಲ್ಲಿನ ರಕ್ತದ ಕಣಗಳು ಸ್ವಲ್ಪ ಏರುಪೇರಾದರೂ ಮನುಷ್ಯನ ಆರೋಗ್ಯವು ಹದಗೆಡುವುದರಲ್ಲಿ ಅನುಮಾನವಿಲ್ಲ. ಕೆಂಪು ರಕ್ತದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಬಿಳಿ ರಕ್ತ ಕಣಗಳ ಕುರಿತಂತೆ ಮಾತನಾಡುವುದನ್ನು ಕೇಳಿರಬಹುದು.

ಮಾರಣಾಂತಿಕ ರೋಗಗಳಿಗೆ ತುತ್ತಾದವರಲ್ಲಿ ಈ ಬಿಳಿ ರಕ್ತಕಣಗಳು ಕಡಿಮೆಯಾಗಿದೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಇದಕ್ಕೆ ಆಧುನಿಕ ಯುಗದ ಆಹಾರ ವ್ಯವಸ್ಥೆಯೂ ಒಂದು ರೀತಿಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಕೆಂಪು ರಕ್ತ ಕಣಗಳು ಮನುಷ್ಯನ ಜೀವನಾಡಿ ಆಗಿ ಕೆಲಸ ಮಾಡಿದರೆ, ಬಿಳಿ ರಕ್ತ ಕಣಗಳು ಗಾಯಗಳನ್ನು ವಾಸಿ ಮಾಡುವಲ್ಲಿ ಮತ್ತು ಪರೋಕ್ಷವಾಗಿ ರೋಗನಿರೋಧಕ ಶಕ್ತಿಯ ರೀತಿ ಕೆಲಸ ಮಾಡಬಲ್ಲವು.

ಇದಕ್ಕೆ ಪ್ರಕೃತಿಯಲ್ಲಿ ಸಿಗುವಂತಹ ಪಪ್ಪಾಯಿ ಹಣ್ಣಿನ ಎಲೆಯ ಕಷಾಯ. ದಿ ಬೆಸ್ಟ್ ಮೆಡಿಸನ್. ಪಪ್ಪಾಯಿ ಎಲೆಯ ಹಣ್ಣನ್ನು ಅದರ ಕುರಿಯನ್ನು ಮುರಿದುಕೊಂಡು ಎರಡು ಲೋಟ ನೀರಿಗೆ ಆ ಒಂದಿಷ್ಟು ಸೊಪ್ಪನ್ನು ಹಾಕಿ ಕುದಿಸಿ ಕುದ್ದು ಕುದ್ದು ಎರಡು ಲೋಟ ನೀರು ಒಂದು ಲೋಟ ನೀರಿಗೆ ರೆಡ್ಯೂಸ್ ಆದ ಮೇಲೆ ಅದನ್ನು ಸೋಸಿ ಆರಿದ ಮೇಲೆ ಬೆಳಿಗ್ಗೆ ಮತ್ತೆ ಸಾಯಂಕಾಲ ಸತತವಾಗಿ ಮೂರು ತಿಂಗಳು ತೆಗೆಯುತ್ತಾ ಬಂದಲ್ಲಿ ನಿಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತವೆ.

ಅಂತಹ ಹಲವಾರು ಸಂಶೋಧನೆಯನ್ನು ಮಾಡಿ ತಿಳಿಸಿದವರನ್ನು ಮತ್ತು ಹಲವರು ಇದನ್ನು ಉಪಯೋಗ ಮಾಡಿಕೊಂಡು ಬಳಕೆ ಮಾಡಿಕೊಂಡು ಇದನ್ನು ಪ್ರಯೋಜನಕಾರಿ ಎಂದು ತಿಳಿಸಿರುವುದರಿಂದ ನಿಮ್ಮ ಮುಂದೆ ಹೇಳುತ್ತಾ ಇದ್ದೇನೆ. ಇದರಿಂದ ಯಾವುದೇ ರೀತಿಯ ಪಾಶ್ವ ಪರಿಣಾಮ ಇರುವುದಿಲ್ಲ. ಸಿಹಿಗೆಣಸಿನಲ್ಲಿ ಪೋಷಕಾಂಶ ಹಾಗೂ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

ಇದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಬಾದಾಮಿಯಲ್ಲಿ 50% ವಿಟಮಿನ್ ಇ ಅಂಶವಿದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ, ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ, ಸಿ ಸೇರಿದಂತೆ ಹಲವು ಪೌಷ್ಠಿಕಾಂಶಗಳಿದ್ದು, ಅಸಿಡಿಟಿ ಗ್ಯಾಸ್ಟಿಕ್ ತೊಂದರೆಗಳಿಗೆ ಬಹಳ ಉತ್ತಮ ಔಷಧಿಯಾಗಿದೆ.

ಬಸಳೆ ಸೊಪ್ಪನ್ನು ಪೌಷ್ಠಿಕಾಂಶದ ಸೊಪ್ಪು ಎಂತಲೂ ಕರೆಯಲಾಗುತ್ತದೆ. ಪ್ರತೀ ನಿತ್ಯ ಈ ಸೊಪ್ಪನ್ನು ತಿನ್ನುತ್ತಾ ಬಂದರೆ ದೇಹದ ಆರೋಗ್ಯ ಹೆಚ್ಚಾಗುತ್ತದೆ. ಅಣಬೆ ಅತೀ ಹೆಚ್ಚು ಪ್ರೋಟೀನ್ ಯುಕ್ತ ಆಹಾರವಾಗಿದ್ದು ಅಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *