ಬಸಳೆ ಸೊಪ್ಪಿನಲ್ಲಿ ಸಾಕಷ್ಟು ಆರೋಗ್ಯಕಾರಿ ಗುಣಗಳಿವೆ ಸಾಮಾನ್ಯವಾಗಿ ಹಳ್ಳಿಗಳ ಮನೆ ಹತ್ತಿರ ಈ ಸೊಪ್ಪು ಹೆಚ್ಚಾಗಿ ಸಿಗುತ್ತದೆ ಮನೆಯ ಮುಂದೆ ಚಪ್ಪರಕ್ಕೆ ಅಥವಾ ಒಂದು ಪಾಟಿನಲ್ಲಿ ಈ ಸೊಪ್ಪುನ್ನನು ಹಾಕಲಾಗಿರುತ್ತದೆ, ಇನ್ನು ಈ ಸೊಪ್ಪು ತಿನ್ನುವುದರಿಂದ ಹಲವು ರೋಗಗಳನ್ನು ಹೋಗಲಾಡಿಸಬುವುದು ಹಾಗಾದರೆ ಯಾವ ಯಾವ ರೋಗಗಳನ್ನು ನಿವಾರಣೆ ಮಾಡುತ್ತೆ ಮತ್ತು ಹೇಗೆ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.
ನಮ್ಮ ದೇಹದಲ್ಲಿ ಏನಾದರು ರಕ್ತ ಕಡಿಮೆ ಆಗಿದೆ ಅಂತ ನಿಮಗೆ ಅನಿಸಿದರೆ ಈ ಬಸಳೆ ಸೊಪ್ಪು ತಿನ್ನುವುದು ಉತ್ತಮ, ರಕ್ತ ಹೆಚ್ಚಿಸುವ ಬಸಳೆ ಸೊಪ್ಪು ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವು¨ರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ.
ಕೀವು ತುಂಬಿದ ಗುಳ್ಳೆಯಾಗಿದ್ದರೆ ಬಸಳೆ ಸೊಪ್ಪಿನ ರಸವನ್ನು ಗುಳ್ಳೆಗೆ ಹಚ್ಚಿದರೆ ಅಥವಾ ರಸವನ್ನು ಕುಡಿದರೇ ಗುಳ್ಳೆ ಬೇಗ ಮಾಯುತ್ತದೆ. ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ ಹುಣ್ಣು ಶಮನವಾಗುತ್ತದೆ. ಇನ್ನು ಸಾಮಾನ್ಯವಾಗಿ ಸುಟ್ಟ ಗಾಯಗಳಿಗೆ ಹಲವು ರೀತಿಯಾದ ಮನೆಮದ್ದುಗಳನ್ನು ಬಳಸುತ್ತರೆ ಅದರ ಬದಲು ಈ ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ ರಸವನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ.
ಇನ್ನು ಈ ಬಸಳೆ ಸೊಪ್ಪನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೆ ಬಸಳೆ ಗಿಡದ ಬೇರಿನ ಕಷಾಯ ಸೇವಿಸಿದರೆ ಭೇದಿ ನಿಲ್ಲುತ್ತದೆ. ಇನ್ನು ಸಾಮಾನ್ಯವಾಗಿ ಯಾವುದುದರು ಹುಳು ಕಚ್ಚಿದರೆ ಬಸಳೆ ಹೂವನ್ನು ಪೇಸ್ಟ್ ಮಾಡಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಗಾಯ ಗುಣವಾಗುತ್ತದೆ ಇದನ್ನು ವಾರಕ್ಕೆ ಮೂರೂ ಬಾರಿ ಮಾಡಿದರು ಸಾಕು.
ಗರ್ಭಿಣಿಯರು ಹೆರಿಗೆ ನೋವು ಬಂದಾಗ ಬಸಳೆ ಸೊಪ್ಪಿನ ಕಷಾಯ ಕುಡಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ. ಬಸಳೆ ಎಲೆಗಳ ಲೋಳೆಯನ್ನು ಹಣೆ ಮೇಲೆ ಲೇಪಿಸಿದರೆ ತಲೆನೋವು ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಬಸಳೆ ಸೊಪ್ಪು ಮತ್ತು ಅದರ ಬೇರನ್ನು ಕಷಾಯ ಮಾಡಿ ಸೇವಿಸಿದರೆ ತಾಯಿಯ ಎದೆ ಹಾಲು ಹೆಚ್ಚುತ್ತದೆ. ಅಂಗೈ ಮತ್ತು ಅಂಗಾಲು ಉರಿ ಇದ್ದರೆ ಬಸಳೆ ಸೊಪ್ಪಿನ ರಸವನ್ನು ಹಚ್ಚಿದರೆ ಉರಿ ನಿವಾರಣೆಯಾಗುತ್ತದೆ.