ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ದೊರೆಯುವ ಆರೋಗ್ಯದ ಪ್ರಯೋಜನಗಳು ಈಗಾಗಲೇ ನಮಗೆ ತಿಳಿದಿದೆ. ದ್ರಾಕ್ಷಿಯನ್ನು ತಿನ್ನುವುದರಿಂದ ಯುವಿ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ರಕ್ಷಿಸಬಹುದೆ ಎನ್ನುವುದುನ್ನು ತಿಳಿಯೋಣ.ದ್ರಾಕ್ಷಿ ಹಣ್ಣನ್ನು ಹಣ್ಣುಗಳ ರಾಣಿ ಎಂದು ಕರೆಯುತ್ತಾರೆ. ವಿಟಮಿನ್-ಸಿ ಅನ್ನು ಹೇರಳವಾಗಿ ಹೊಂದಿದೆ ಹಾಗೂ ತಕ್ಷಣ ಶಕ್ತಿಯನ್ನು ಒದಗಿಸುವ ಸಕ್ಕರೆಯ ಅಂಶವನ್ನು ಇದು ಹೊಂದಿದೆ.ದ್ರಾಕ್ಷಿಯ ಹಣ್ಣಿನಲ್ಲಿ ಉತ್ತಮ ಗುಣಮಟ್ಟದ ಆಂಟಿಆಕ್ಸಿಡೆಂಟ್ ಗಳು ಇವೆ. ದೈನಂದಿನ ಆಹಾರದಲ್ಲಿ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣಿಗೆ ಬೇಕಾಗುವ ಹೆಚ್ಚಿನ ಪ್ರಮಾಣದ ಪ್ರೋಟೀನ್ ಜೀವಕೋಶಗಳನ್ನು ಒದಗಿಸುತ್ತದೆ. ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ದ್ರಾಕ್ಷಿಯು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.
ದ್ರಾಕ್ಷಿಯನ್ನು ಸೇವಿಸುವುದರಿಂದ ಮಾನಸಿಕ ಪ್ರತಿಕ್ರಿಯೆಗಳನ್ನು ವೇಗಗೊಳಿಸಲು ಇದು ಸಹಾಯಮಾಡುತ್ತದೆ. ಮೆದುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ದ್ರಾಕ್ಷಿಹಣ್ಣು ಬೇಸಿಗೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಣ್ಣುಗಳಲ್ಲಿ ಪ್ರಮುಖವಾದ ಹಣ್ಣಾಗಿದೆ.ದ್ರಾಕ್ಷಿ ಹಣ್ಣನ್ನು ಸೇವಿಸುವುದರಿಂದ ಯುವಿ ಕಿರಣಗಳಿಂದ ಆಗುವ ಹಾನಿಯನ್ನು ತಡೆಗಟ್ಟಬಹುದು ಎಂಬುದು ಕಂಡುಬಂದಿದೆ. ಸನ್ ಸ್ಕ್ರೀನ್ ಎಂಬ ಪದವನ್ನು ನೀವು ಕೇಳಿದ್ದೀರಾ? ಫೋಟೋ ಪ್ರೋಟೆಕ್ಟಿವ್ ಎಫೆಕ್ಟ್ ಹೊಂದಿರುವ ಪದಾರ್ಥಗಳನ್ನು ಸನ್ ಸ್ಕ್ರೀನ್ ಎಂದು ಪರಿಗಣಿಸಲಾಗುತ್ತದೆ .ಏಕೆಂದರೆ ಇವುಗಳು ಹಾನಿಕಾರಕ ವಿಕಿರಣಗಳಿಂದ ಚರ್ಮವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಯವರೆಗೆ ಸಾಮಾನ್ಯವಾಗಿ ದ್ರಾಕ್ಷಿ ಹಣ್ಣನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಮಾತ್ರ ಪ್ರಯೋಜನಕಾರಿ ಎಂದು ಹೇಳಲಾಗುತ್ತಿತ್ತು.
ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ದ್ರಾಕ್ಷಿಗಳು ಫೋಟೋ ಪ್ರೊಟೆಕ್ಟಿವ್ ಗುಣವನ್ನು ಹೊಂದಿವೆ ಎಂದು ಕಂಡುಹಿಡಿಯಲಾಗಿದೆ. ಆದ್ದರಿಂದ ಅವು ಯುವಿ ಕಿರಣಗಳಿಂದ ಚರ್ಮದ ಮೇಲೆ ಆಗುವ ಹಾನಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ ಎಂಬುದು ಸಾಬೀತಾಗಿದೆ. ಈ ಲೇಖನದಲ್ಲಿ ದ್ರಾಕ್ಷಿ ಹಣ್ಣನ್ನು ಸೇವಿಸುವುದರಿಂದ ನಮ್ಮ ಚರ್ಮಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪೂರ್ಣ ಲೇಖನವನ್ನು ಓದಿರಿ.ನಮ್ಮಲ್ಲಿ ಹೆಚ್ಚಿನ ಜನರು ದ್ರಾಕ್ಷಿ ಹಣ್ಣನ್ನು ಟೇಸ್ಟಿ ಮತ್ತು ರಸಬರಿತ ಹಣ್ಣಾಗಿ ಮಾತ್ರ ನೋಡುತ್ತಾರೆ. ದ್ರಾಕ್ಷಿ ಹಣ್ಣು ಬಳ್ಳಿಯಲ್ಲಿ ಬೆಳೆಯುತ್ತದೆ. ದ್ರಾಕ್ಷಿ ಹಣ್ಣನ್ನು ಬಳಸಿ ರುಚಿಕರವಾದ ವೈನ್ ತಯಾರಿಸಬಹುದು. ಆದರೆ ದ್ರಾಕ್ಷಿಹಣ್ಣು ಹೊಂದಿರುವ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ದ್ರಾಕ್ಷಿಯಲ್ಲಿ ಉತ್ತಮವಾದ ಪ್ರಮುಖ ಜೀವಸತ್ವಗಳಾದ ಸಿ, ಕೆ ಮತ್ತು ಆಂಟಿಆಕ್ಸಿಡೆಂಟ್ ಗಳು ಇದ್ದು ಆರೋಗ್ಯವನ್ನು ಉತ್ತೇಜಿಸುವ ಇತರ ಖನಿಜಾಂಶಗಳಿಂದ ದ್ರಾಕ್ಷಿ ಕೂಡಿದೆ. ಮಧುಮೇಹ ತಡೆಗಟ್ಟುವಿಕೆ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಎಲ್ಲದರ ವಿರುದ್ಧ ಜಯ ಸಾಧಿಸಬಹುದು ಎಂದು ಹೇಳಲಾಗುತ್ತದೆ.