ಧರ್ಮ ಎಂಬುದು ಎಲ್ಲರೂ ಕೇಳಿರುವ ಪದವೇ. ಆದರೆ ಯಾರಾದರೂ ಧರ್ಮ ಎಂದರೇನು ಹೇಳುವಿರಾ? ಎಂದು ಕೇಳಿದರೆ, ಉತ್ತರಕ್ಕಾಗಿ ತಡಕಾಡುವಂತೆ ಆಗುತ್ತದೆ. ಪುಟ್ಟದಾದ ಪದ, ದಟ್ಟವಾದ ಅರ್ಥ. ಕ್ಲಿಷ್ಟ ಪದಗಳಿಲ್ಲದೆ ಅರ್ಥವಾಗುವಂತೆ ತೋರುತ್ತದೆ; ಸ್ಪಷ್ಟತೆಯಿಲ್ಲ. ಹೇಳಿದರೂ, ಕೇಳಿದವರಿಗಿರಲಿ, ಹೇಳಿದವರಿಗೂ ತೃಪ್ತಿಯಿರದು! ವಾಸ್ತವವಾಗಿ, ಧರ್ಮೋ ರಕ್ಷತಿ ರಕ್ಷೀತಃ (ರಕ್ಷಿಸಲಾದ ಧರ್ಮವು ರಕ್ಷಿಸುತ್ತದೆ) ಎಂಬುದರ ಅರ್ಥವೂ ತಿಳಿದರೆ ಧರ್ಮದ ಸ್ವರೂಪವೂ ತಿಳಿದಂತೆಯೇ ಸರಿ. ಇದಂತೂ ಪರಿಸರಪ್ರಜ್ಞೆ ಅತಿಮುಖ್ಯವಲ್ಲವೇ? ಮರಗಳನ್ನು ಕಾಪಾಡಿ, ಅವು ನಮ್ಮನ್ನು ಕಾಪಾಡುತ್ತವೆ ಎಂದೀ ಮಾದರಿಯಲ್ಲೇ ವೃಕ್ಷೋ ರಕ್ಷತಿ ರಕ್ಷಿತಹ ಎನ್ನಲಾಗುತ್ತಿದೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ಶೀರ್ಷಿಕೆ ಎಂಟೇ ಅಕ್ಷರಗಳ ಕಿರಿದಾದ ನುಡಿ; ಅರ್ಥ ಹಿರಿದು. ಮಾತು ಮಿತವಾಗಿರಾಬೇಕು, ಒಳಗೆ ಅರ್ಥವೂ ಅಮಿತವಾಗಿರಬೇಕು. ಅದಲ್ಲದೇ ವಾಕ್ ಪಟುತ್ವ? ಮಿತಂ ಚ ಸಾರಂ ಚ. ತನ್ನ ಗರ್ಭದಲ್ಲಿ ದೊಡ್ಡ ಅರ್ಥವನ್ನಿಟ್ಟುಕೊಂಡಿರುವ ಮಾತನ್ನೇ ಅರ್ಥ ಗರ್ಭಿತ ಎನ್ನುವರು. ಹಾಗೆ ಅತ್ಯಂತ ಅರ್ಥಗರ್ಭಿತವಾದ ಉಕ್ತಿಯಿದು. ಇಷ್ಟು ಹೇಳಿ ಪುಟ್ಟ ಸೂಕ್ತಿಯನ್ನು ದೊಡ್ಡದಾಗಿ ಕೊಂದಾಡಿದಂತಾಯಿತೀ ವಿನಾ, ಆ ಉಕ್ತಿಯ ಅರ್ಥ ಹೊರಬರಲಿಲ್ಲ, ಮುಖ್ಯವಾಗಿ ಧರ್ಮವೆಂದರೆ ಏನೆಂದು ತಿಳಿದು ಬರಲಿಲ್ಲಾಲ್ಲವೇ? ಹಿಂದೆಲ್ಲಾ ಭಿಕ್ಷುಕರು ಈ ಪದವನ್ನು ಸರಿಯಾಗಿ ಬಳಸುತ್ತಿದ್ದರು!. ಧರ್ಮ ಮಾಡಿ ಸ್ವಾಮೀ ಎನ್ನುತ್ತಿದ್ದರು. ಅವರ ಕೈಗೆ ಪುಡಿಗಾಸನ್ನು ಹಾಕುವುದು ಧರ್ಮವೆಂದಾಯಿತು. ಅಲ್ಲಿಗೆ, ಈ ಪುಡಿಗಾಸು ಹಾಕುವುದನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸೀತೆಂಬ ಆಶಯವೇ?. ಇದೂ ತೃಪ್ತಿಕರ ವಲ್ಲ. ಹಾಗಾದರೆ ಧರ್ಮವೆಂದರೆ ಏನಲ್ಲ? ಎಂಬುದು ಸ್ವಲ್ಪಸಾಲ್ಪವಾ ಗಿ ಅರ್ಥವಾಗುತ್ತಿದೆ ಎನ್ನಬಹುದು. ಆದರೂ ಈ ಪದದ ಉದ್ದೇಶ ಏನೆಂಬುದು ಸ್ಫುಟವಾಗಲಿಲ್ಲ. ಸರಿ, ಈ ಸೂಕ್ತಿಯು ಎಲ್ಲಿದೆಂದು ನೋಡೋಣವೇ?
ಮನುಸ್ಮೃತಿಯ ಮಾತಿದು, ಮಹಾಭಾರತದಲ್ಲಿ ಉಂಟು: ಧರ್ಮವನ್ನು ಕೊಂದರೆ ಅದು ನಮ್ಮನ್ನು ಕೊಲ್ಲುವುದು; ರಕ್ಷಿಸಿದರೆ ರಕ್ಷಿಸುವುದು ಎಂಬುದು ಪೂರ್ಣೂಕ್ತಿ. ಈಗಿನ್ನೂ ಸಮಸ್ಯೆ ಆಯಿತು. ನಾನೊಂದು ಸಿಂಹವನ್ನು ಕೊಲ್ಲುತೇನೆನ್ನಿ ಸತ್ತ ಸಿಂಹವು ಬಂದು ನನ್ನನ್ನು ಕೊಲ್ಲುವುದೇ? ಸತ್ತ ಧರ್ಮವು ನಮ್ಮನ್ನು ಸಾಗಿಸುವುದೇ? ಎಲ್ಲೋ ಹುಚ್ಚರ ಮಾತಿರಬೇಕಿದು ಎಣ್ಣಿಸುವುದಲ್ಲವೇ? ಅತ್ತ, ಧರ್ಮವೆಂದರೆ ಎಷ್ಟು ದೊಡ್ಡದು! ಅದನ್ನು ನಾವು ಕಾಪಾಡುವುದೇ? ಎಂದೂ ಪ್ರಶ್ನೆ ಬರುವುದು. ಹೇಗೂ ಗೋಜಲೇ! ಸುಡುವುದು ಬೆಂಕಿಯ ಧರ್ಮ, ಬೋಧಿಸುವುದು ಶಿಕ್ಷಕರ ಧರ್ಮ ಎಂಬ ಈ ಯುಕ್ತ ಪ್ರಯೋಗಗಳನ್ನು ನೋಡಿ: ಧರ್ಮ ಎಂಬುದು ಅಲ್ಲಲ್ಲಿಯ ಸಹಜಕರ್ಮ ಹೇಳುತ್ತದೆಯಲ್ಲವೇ? ಹಾಗಾದರಿದೂ ಹೀಗೂ ಪ್ರಯೋಗ ಮಾಡಬಹುದು. ಕಂಪ್ಯೂಟರಿನ ಕೀಬೋರ್ಡ್ ಮೇಲೆ ಚಪ್ಪಡಿಕಲ್ಲು ತಳ್ಳಿ. ಅಕ್ಷರಗಳನ್ನು ತಂಕಿಸುವ ಟ ಧರ್ಮವನ್ನಯಾವುದಕ್ಕಾಗಿ ಸೃಷ್ಟವಾಗಿದೆಯೂ ಅ ಶಕ್ತಿ ಸ್ವಭಾವಗಳನ್ನು ಒಂದು ವಸ್ತು ಹಾಗೆಯೇ ಉಳಿಸಿಕೊಂಡರೆ ಅದು ತನ್ನ ಧರ್ಮದಲ್ಲಿದೆ ಎನ್ನುತ್ತೇವೆ. ಹಾಲಿಗೆನದರೂ ಮೊಸರು ಸೋಕಿಬಿಟ್ಟರೆ, ಹಾಲಿನ ಧರ್ಮ ಹೋಗುವುದೇ? ಹಾಲಿನ ಧರ್ಮವನ್ನು ನಾವು ಕಾಪಾಡುವುದು ಎಂದರೇನು? ಹಾಲು ಹಾಲಗಿರುವಂತೆ ಉಳಿದಿರುವುದು. ಉದಾಹರಣೆಗೆ ಹುಳಿ ಹಿಂಡದಿರುವುದು,ಹಾಲಿನ ಧರ್ಮ ಕೆಡದಂತೆ ನಾವು ಕಾಪಾಡಿದಲ್ಲಿ, ಅದು ನಮ್ಮನ್ನು ಕಾಪಾಡುವುದು, ಹಾಗೆಂದರೇನು? ಅದನ್ನು ಸೇವಿಸಿದರೆ ನಮಗೆ ತುಷ್ಟಿ ಪುಷ್ಟಿ ಲಾಭ. ಹುಳಿ ಹಿಂಡಿಟ್ಟಲ್ಲಿ ಅತ್ತ ಹಾಲಲ್ಲ, ಇತ್ತ ಮೊಸರಲ್ಲ,ಹಾಲು ಹಾಳು!
ಬೀಜಕ್ಕೆ ಬೆಳೆಯುವುದು ಧರ್ಮ; ಅದಕ್ಕೆ ಪೋಷಕವಾದ ನೀರೆರೆಯುವ ಕ್ರಿಯೆಯೂ ಧರ್ಮವೇ ಎಂಬ ಸೂತ್ರ ರೂಪವಾದ ಭವ್ಯೋದಾಹರಣವನ್ನಿತ್ತು ಶ್ರೀರಂಗ ಮಹಾಗುರುಗಳು ಧರ್ಮಪದದ ಮರ್ಮವನ್ನು ಬಿಡಿಸಿಟ್ಟಿದ್ದಾರೆ. ಸ್ಥಿತಿ ಮತ್ತು ಕ್ರಿಯೆ. ರೋಗ ಬಂದಾಗ ಬೇಕಾದುದು ಆರೋಗ್ಯ ಎಂಬ ಧರ್ಮ. ಆ ಧರ್ಮದ ಪುನಸ್ಸಂಪಾದನೆ ರಕ್ಷಣೆಗಳಿಗಾಗಿ ಪಾಲಿಸಬೇಕಾದುದು ಚಿಕಿತ್ಸಾ ಕ್ರಿಯೆಯೆಂಬ ಧರ್ಮ. ಜೀವನಿಗೆ ದೇವನೊಂದಿಗಿನ ಯೋಗವು ಮೂಲಸ್ಥಿತಿ, ನಷ್ಟವಾಗಿದ್ದರೂ ಪುನಃ ಸಂಪಾದ್ಯವಾದ ಅದಕ್ಕಾಗಿನ ದಾನ ಪೂಜಾದಿಕ್ರಿಯೆಗಳು ಧರ್ಮವೇ. ನಾವು ಧರ್ಮವನ್ನು ರಕ್ಷಿಸಿಕೊಳ್ಳುವುದು ಎಂದರೆ ಇದುವೇ; ಇದರ ಫಲವೇ ನೆಮ್ಮದಿಯ ಮೂಲಧರ್ಮಪ್ರಾಪ್ತಿ, ಅತ್ಮರಕ್ಷಣೆ. ವ್ಯಕ್ತಿಧರ್ಮರಕ್ಷಣೆ ಅಂತೆಯೇ ಸಾಮಾಜ ಧರ್ಮ ರಕ್ಷಣೆಯೂ. ನಾವೇ ಸಾಯಿಸಿದೆವು, ಎಂದರೆ, ಹಾಳುಗೆಡವಿದೆವು.