ಬೆಟ್ಟದ ನೆಲ್ಲಿಕಾಯಿಯಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ, ಆದರೆ ಈ ನೆಲ್ಲಿಕಾಯಿ ಕೆಲವರಿ ಇಷ್ಟ ಆದರೆ ಅದರ ಹುಳಿಗೆ ಕೆಲವರು ತಿನ್ನದೇ ಅಥವಾ ಬಳಸದೆ ದೊರವಿಡುತ್ತಾರೆ, ಆದರೆ ಈ ಕೆಳಕಂಡ ಆರೋಗ್ಯಕಾರಿ ಗುಣಗಳು ತಿಳಿದರೆ ನೀವು ಖಂಡಿತ ಬಳಕೆ ಮಾಡುತ್ತೀರ.

ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಹಲವಾರು ಆರೋಗ್ಯಕಾರಿ ಲಾಭಗಳೆಂದರೆ: ಬೆಟ್ಟದ ನೆಲ್ಲಿಕಾಯಿಗಳನ್ನು ನೀರಲ್ಲಿ ಚೆನ್ನಾಗಿ ಕುದಿಸಿ, ಸೋಸಿದ ಮೇಲೆ ಆ ನೀರನ್ನು ಕಣ್ಣಿನ ಮೇಲೆ ಹಚ್ಚಿದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ.

ನಮಗೆ ಗಂಟಲು ಕಟ್ಟಿ ಧ್ವನಿ ಬರದ ಸಮಸ್ಯೆ ಇದ್ದರೆ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಹಸುವಿನ ಹಾಲು ಮತ್ತು ಕಲ್ಲು ಸಕ್ಕರೆ ಜೊತೆ ಕುಡಿದರೆ ಧ್ವನಿ ಮತ್ತು ಗಂಟಲು ಸಮಸ್ಯೆ ನಿವಾರಣೆಯಾಗುತ್ತದೆ.

ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಬೆಟ್ಟದ ನೆಲ್ಲಿಕಾಯಿ, ಮಾವು ಮತ್ತು ನೇರಳೆಯನ್ನು ಪೇಸ್ಟ್‌ ಮಾಡಿ ಹಣೆಗೆ ಲೇಪಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

ದೇಹದಲ್ಲಿ ದೊಡ್ಡ ಗಾಯವಾಗಿದ್ದರೆ. ಬೆಟ್ಟದ ನೆಲ್ಲಿಕಾಯಿಯನ್ನು ಸುಟ್ಟು ಕರಕಲು ಮಾಡಿದ ಪುಡಿಗೆ ಕರ್ಪೂರ ಮತ್ತು ಜೇನುತುಪ್ಪ ಕಲಸಿ ಗಾಯದ ಮೇಲೆ ಲೇಪಿಸಿದರೆ ಗಾಯ ಬೇಗ ಗುಣವಾಗುತ್ತದೆ.

ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ರಾತ್ರಿ ನೀರಲ್ಲಿ ನೆನೆಸಿ, ಸೋಸಿ ಆ ನೀರನ್ನು ಬೆಳಗಿನ ಸಂದರ್ಭದಲ್ಲಿ ಕುಡಿದರೆ ಕಟ್ಟಿಕೊಂಡಿರುವ ಮೂತ್ರ ಸರಾಗವಾಗಿ ಹೋಗುತ್ತದೆ.

ಬಿಕ್ಕಳಿಕೆ ಸಮಸ್ಯೆ ಇದ್ದರೆ ಬೆಟ್ಟದ ನೆಲ್ಲಿಕಾಯಿಯ ರಸಕ್ಕೆ ಕರಿಮೆಣಸಿನ ಪುಡಿ ಮತ್ತು ಅದರ ಜೊತೆಗೆ ಜೇನುತುಪ್ಪ ಸೇರಿಸಿ ಸೇವಿಸಿದರೆ

Leave a Reply

Your email address will not be published. Required fields are marked *