ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ವಿಟಮಿನ್ ಏ ಯಾಕೆ ನಮಗೆ ಅವಶ್ಯಕ, ವಿಟಮಿನ್ ಏ ಕೊರತೆಯಿಂದ ಯಾವ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಹಾಗೂ ವಿಟಮಿನ್ ಏ ಯಾವ ಆಹಾರದಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ವಿಟಮಿನ್ಗಳು ನಮ್ಮ ದೇಹದಲ್ಲಿ ಅತೀ ಅಗತ್ಯವಾದ ಕೆಲಸವನ್ನು ಪೂರೈಸುತ್ತವೆ. ಇಂದಿನ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ಕೂಡ ಅರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶಗಳು ಇರುವ ಆಹಾರ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕ ಅದ್ರಲ್ಲಿ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಏ ತುಂಬಾ ಅವಶ್ಯಕ. ದೇಹದಲ್ಲಿ ವಿಟಮಿನ್ ಏ ಸರಿಯಾಗಿದ್ದರೆ, ಕಣ್ಣಿನ ಯಾವುದೇ ಕಾಯಿಲೆಗಳು ಬಾರದಂತೆ ತಡೆಯಬಹುದು. ಹಾಗೆ ನಮ್ಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ವಿಟಮಿನ್ ಏ ಆಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ.
ನಮ್ಮ ಮೂಳೆಗಳನ್ನು ಆರೋಗ್ಯವಾಗಿ ಇಡಲು ಬಲಪಡಿಸಲು ವಿಟಮಿನ್ ಏ ಸಹಾಯವಾಗುತ್ತದೆ. ವಿಟಮಿನ್ ಏ ನಮ್ಮ ದೇಹಕ್ಕೆ ಸರಿಯಾಗಿ ಸಿಗದೇ ಇದ್ದರೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ನೋಡೋಣ. ಮುಖ್ಯವಾಗಿ ಕಣ್ಣಿನ ಸಮಸ್ಯೆ ಕಂಡು ಬರುತ್ತದೆ. ರಾತ್ರಿ ಕುರುಡುತನ ಅಂದ್ರೆ ಕಡಿಮೆ ಬೆಳಕಿನಲ್ಲಿ ಕಣ್ಣು ಸರಿಯಾಗಿ ಕಾಣುವುದಿಲ್ಲ. ಕಣ್ಣು ಒಣಗುವುದು, ಕಣ್ಣಿಗೆ ಸಂಭಂದಿಸಿದ ಲಕ್ರಿಮಿನ್ ಕಾರಣದಿಂದ ಕಣ್ಣೀರು ಬರುವುದು ನಿಂತು ಕಣ್ಣು ಒಣಗುತ್ತದೆ. ಹಾಗೆಯೇ ರಾತ್ರಿ ಕುರುಡುತನ ವಿಟಮಿನ್ ಏ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಇನ್ನು ಗರ್ಭಾವಸ್ಥೆ ಸಂದರ್ಭದಲ್ಲಿ ತಾಯಿಯು ತನಗೆ ಹುಟ್ಟುವ ಮಗು ಆರೋಗ್ಯವಾಗಿ, ದಷ್ಟ ಪುಷ್ಟವಾಗಿ ಇರಬೇಕು ಎಂದು ಕನಸು ಕಾಣುತ್ತಾಳೆ. ಆದ್ರೆ ಇದಕ್ಕಾಗಿ ಬರಿ ಕನಸು ಕಂಡರೆ ಸಾಲದು, ತಾಯಿ ಆದವಳು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು ಮತ್ತು ಜಾಗರೂಕತೆಯಿಂದ ತನ್ನ ದೇಹದ ಕಾಳಜಿ ವಹಿಸಬೇಕು. ಗರ್ಭಿಣಿಯರು ವೈದ್ಯರು ಸೂಚಿಸಿದ ಎಲ್ಲಾ ರೀತಿಯ ಆಹಾರ ಸೇವಿಸಬೇಕು. ಏಕೆಂದ್ರೆ ಹುಟ್ಟುವ ಮಗುವಿನ ದೃಷ್ಟಿ ಚೆನ್ನಾಗಿ ಇರುತ್ತದೆ. ಸಾವಿರಾರು ಮಕ್ಕಳು ಹುಟ್ಟುವಾಗ ಕಣ್ಣಿನ ಸಮಸ್ಯೆ ಇಂದ ಹುಟ್ಟುತ್ತಾರೆ. ಇದಕ್ಕೆ ಕಾರಣ ವಿಟಮಿನ್ ಏ ಕೊರತೆ. ಗರ್ಭಾವಸ್ಥೆಯಲ್ಲಿ ಸರಿಯಾಗಿ ವಿಟಮಿನ್ ಏ ಇರುವಂಥ ಆಹಾರ ಪದಾರ್ಥಗಳು ಸೇವಿಸದೇ ಇರುವುದು. ಹಾಗಾಗಿ ವೈದ್ಯರು ಸೂಚಿಸಿದ ಎಲ್ಲಾ ವಿಟಮಿನ್ ಇರುವಂಥ ಆಹಾರಗಳನ್ನು ಗರ್ಭಾವಸ್ಥೆ ಸಂದರ್ಭದಲ್ಲಿ ಸೇವನೆ ಮಾಡಬೇಕು. ಇನ್ನೂ ಈ ವಿಟಮಿನ್ ಏ ಕೇವಲ ಕಣ್ಣಿನ ಸಮಸ್ಯೆಗೆ ಮಾತ್ರವಲ್ಲದೆ ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕ ಆಗಿದೆ. ಹಾಗಿದ್ರೆ ವಿಟಮಿನ್ ಏ ಯಾವ ಆಹಾರದಲ್ಲಿ ಸಿಗುತ್ತದೆ ಎಂದು ನೋಡಿದರೆ, ವಿಟಮಿನ್ ಏ ಮುಖ್ಯವಾಗಿ ನಮ್ಮ ಸಸ್ಯಾಹಾರದಲ್ಲಿ ಸಿಗುತ್ತದೆ ಹಾಗೂ ಮಾಂಸಾಹಾರದಲ್ಲಿ ಸಿಗುತ್ತದೆ. ಮೊದಲನೆಯದಾಗಿ ಸಸ್ಯಾಹಾರದಲ್ಲಿ ಯಾವೆಲ್ಲ ಆಹಾರದಲ್ಲಿ ಸಿಗುತ್ತದೆ ಎಂದು ನೋಡುವುದಾದರೆ, ಕ್ಯಾರೆಟ್ ನಲ್ಲಿ ವಿಟಮಿನ್ ಏ ಉತ್ತಮವಾಗಿದೆ ಇದು ಕಣ್ಣಿನ ಹಾಗೂ ತ್ವಚೆಯ ಆರೋಗ್ಯ ಕಾಪಾಡುತ್ತದೆ. ಇನ್ನೂ ಸಿಹಿ ಆಲೂಗಡ್ಡೆಯನ್ನು ವಿಟಮಿನ್ ಏ ಹಾಗೂ ಬೀಟಾ ಕೆರೋಟಿನ್ ಉತ್ತಮವಾಗಿದೆ.
ಇದು ದೇಹದೊಳಗೆ ವಿಟಮಿನ್ ಏ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಜೀವಕೋಶ ಹಾಗೂ ಅಂಗಗಳ ಬೆಳವಣಿಗೆಗೆ ಅವಶ್ಯಕ ಆಗಿದೆ. ಇನ್ನೂ ಕಾಡ್ ಲಿವರ್ ಎಣ್ಣೆ ಹಾಗೂ ದೊಣ್ಣೆ ಮೆಣಸಿನಕಾಯಿ, ಗೆಣಸು ಹಾಗೂ ಬೆಣ್ಣೆಯಲ್ಲಿ ವಿಟಮಿನ್ ಏ ಹೇರಳವಾಗಿ ಇದೆ. ಇನ್ನೂ ಯಾವೆಲ್ಲ ಸೊಪ್ಪಿನಲ್ಲಿ ವಿಟಮಿನ್ ಏ ಇದೆ ಎಂದು ನೋಡುವುದಾದರೆ, ಎಲ್ಲಾ ಹಸಿರು ತರಕಾರಿಗಳಲ್ಲಿ ವಿಟಮಿನ್ ಏ ಇರುತ್ತದೆ. ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪಿನಲ್ಲಿ ನಿಮಗೆ ಬೇಕಾದಷ್ಟು ವಿಟಮಿನ್ ಏ ಸಿಗುತ್ತದೆ. ಸೊಪ್ಪಿನಲ್ಲಿ ಬರಿ ವಿಟಮಿನ್ ಏ ಅಲ್ಲದೆ ಇತರೆ ಬೇರೆ ವಿಟಮಿನ್ಗಳು ಖನಿಜಾಂಶಗಳ ಇರುತ್ತವೆ. ಇನ್ನೂ ಯಾವೆಲ್ಲ ವಿಟಮಿನ್ ಏ ಅಂಶ ಇದೆ ಎಂದು ನೋಡುವುದಾದರೆ, ಕರ್ಭೋಜ, ಬೆಣ್ಣೆ ಹಣ್ಣು, ಪಪಾಯ ಹಣ್ಣು, ಮಾವಿನ ಹಣ್ಣು, ಕುಂಬಳಕಾಯಿ, ಸೀಬೆ ಕಾಯಿ, ಟೊಮೆಟೊ, ಕಲ್ಲಂಗಡಿ, ಗೋಡಂಬಿ ಹಣ್ಣು, ಬಾಳೆಹಣ್ಣು, ಹಲಸಿನ ಹಣ್ಣು, ಕೇಸರಿ ಮತ್ತು ಹಳದಿ ಬಣ್ಣದ ಎಲ್ಲಾ ಹಣ್ಣುಗಳಲ್ಲಿ ವಿಟಮಿನ್ ಏ ಇರುತ್ತದೆ. ಇನ್ನೂ ಯಾವೆಲ್ಲ ಮಾಂಸಾಹಾರದಲ್ಲಿ ವಿಟಮಿನ್ ಏ ಸಿಗುತ್ತದೆ ಎಂದ್ರೆ, ಮೊಟ್ಟೆ ಹಳದಿ ಭಾಗದಲ್ಲಿ ಕೊಬ್ಬಿನ ಅಂಶ ಮಾತ್ರವಲ್ಲದೆ ವಿಟಮಿನ್ ಏ ಇದೆ. ಚಿಕನ್ ಮಟನ್ ಗಳಲ್ಲಿ ಈ ವಿಟಮಿನ್ ಅಧಿಕವಾಗಿ ಇರುತ್ತದೆ. ಹಾಗೂ ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಅಂಶ ಜೊತೆಗೆ ವಿಟಮಿನ್ ಏ ಕೂಡ ದೊರಕುತ್ತದೆ. ನೋಡಿದ್ರಲ್ವಾ ಫ್ರೆಂಡ್ಸ್ ವಿಟಮಿನ್ ಏ ಅಂಶ ನಮ್ಮ ಆರೋಗ್ಯಕ್ಕೆ ಎಷ್ಟು ಅವಶ್ಯಕ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.