ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧ ವಾಗಿಟ್ಟುಕೊಳ್ಳುವುದು ತುಂಬಾ ಅವಶ್ಯಕ. ಏಕೆಂದರೆ ಇಡೀ ನಮ್ಮ ದೇಹದ ಕ್ರಿಯೆಗಳು ರಕ್ತ ಚಲನೆಯನ್ನು ಅವಲಂಬಿಸಿರುತ್ತದೆ. ವಿಷಾದ ಅಂಶ ಹೆಚ್ಚಾದಂತೆಲ್ಲಾ ದೇಹದ ಅಂಗಗಳಿಗೆ ನಿಧಾನವಾಗಿ ಹಾನಿಯಾಗುತ್ತ ಹೋಗುತ್ತದೆ. ಮತ್ತು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರ ತಲೆನೋವು, ಆಯಾಸ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಮೊಡವೆ, ಕಪ್ಪು ಕಲೆ ಇವುಗಳು ದೇಹದಲ್ಲಿರುವ ಕೆಟ್ಟ ರಕ್ತದಿಂದ ಬರುತ್ತವೆ. ಈಗ ಮಾರುಕಟ್ಟೆಯಲ್ಲಿ ಹಲವಾರು ರಕ್ತ ಶುದ್ಧಿ ಮಾಡುವಂಥ ಟಾನಿಕ್ ಮತ್ತು ಔಷಧಿಗಳು ಸಿಗುತ್ತದೆ. ಆದರೂ ಕೂಡ ಇವುಗಳು ನೂರಕ್ಕೆ ನೂರು ಫಲಿತಾಂಶವನ್ನೂ ನೀಡುವುದಿಲ್ಲ. ಇದಕ್ಕೆ ಕಾರಣ ಕೇವಲ ಔಷಧಿ ಹಾಗೂ ಟಾನಿಕ್ ಗಳು ಸಾಕಾಗುವುದಿಲ್ಲ. ನೀವು ರಕ್ತವನ್ನು ಶುದ್ಧೀಕರಿಸುವ ಆಹಾರದ ಮೇಲೆ ಸಹ ಗಮನವನ್ನು ನೀಡಬೇಕಾಗುತ್ತದೆ. ಲಿವರ್, ಮೂತ್ರ ಪಿಂಡಗಳು ಸಹ ರಕ್ತವನ್ನು ಶುದ್ಧೀಕರಿಸುವ ಮತ್ತು ನಮ್ಮ ದೇಹದಿಂದ ಕಲ್ಮಶ ಮತ್ತು ವಿಷ ಅಂಶಗಳನ್ನು ಹೊರಕ್ಕೆ ತೊಲಗಿಸುವ ಕೆಲಸವನ್ನು ಮಾಡುತ್ತವೆ. ಒಂದುವೇಳೆ ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದರೆ ಇಡೀ ದೇಹ ಕಲ್ಮಶ ರಕ್ತದ ಚಲನೆಯಿಂದ ಚರ್ಮ ಕಾಯಿಲೆಗಳು ಕಾಡುತ್ತವೆ. ಆದ್ದರಿಂದ ರಕ್ತ ಶುದ್ಧೀಕರಣ ಮಾಡುವುದು ತುಂಬಾ ಮುಖ್ಯ.
ಇಂದಿನ ಈ ಲೇಖನದಲ್ಲಿ ರಕ್ತವನ್ನು ಶುದ್ಧೀಕರಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಸ್ನೇಹಿತರೆ. ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧೀಗೊಳಿಸುವ ಮತ್ತು ಮೂತ್ರಪಿಂಡ ಹಾಗೂ ಲಿವರ್ ಗಳು ಸರಿಯಾಗಿ ಕೆಲಸ ಮಾಡಲು ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ. ಆ ಆಹಾರಗಳು ಯಾವುವು ಎಂದರೆ ಹೂಕೋಸು ಹಾಗೂ ಬ್ರೋಕಲಿ ರಕ್ತ ಶುದ್ಧಿ ಕರಣಕ್ಕೆ ಒಳ್ಳೆಯ ಆಹಾರ ವಾಗಿದೆ. ಹೌದು! ಹೂಕೋಸು ಇದರಲ್ಲಿ ಕ್ಲೋರೊಫಿಲ್ ಅಂಶ ರಕ್ತದಲ್ಲಿರುವ ಕಲ್ಮಶವನ್ನು ತೆಗೆಯುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಇನ್ನೂ ಬ್ರೋಕಲಿಯಲ್ಲಿ ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ ಗಳು ಒಳಗೊಂಡಿರುತ್ತವೆ. ಅದು ರಕ್ತವನ್ನು ಶುದ್ಧೀಕರಿಸಿ ದೇಹಕ್ಕೆ ಹಾನಿ ಉಂಟು ಮಾಡುವ ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದು ಹಾಕುತ್ತವೆ. ಇನ್ನೂ ಹಾಗಲಕಾಯಿ ಕೂಡ ರಕ್ತವನ್ನು ಶುದ್ಧೀಕರಿಸುವ ಲ್ಲಿ ಸಹಾಯ ಮಾಡುತ್ತದೆ. ಹಾಗಲಕಾಯಿ ರುಚಿಯಲ್ಲಿ ಕಹಿ ಇರುತ್ತದೆ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಈ ಹಾಗಲಕಾಯಿ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಿರುವ ಪ್ರೊಟೀನ್, ವಿಟಮಿನ್ ಏ ಮತ್ತು ವಿಟಮಿನ್ಸ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಕ್ಯಾರೋಟಿನ್ ಇತರೆ ಅಂಶಗಳು ಹೇರಳವಾಗಿದ್ದು, ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲಕಾಯಿ ಸಹಾಯ ಮಾಡುತ್ತದೆ.
ಇನ್ನು ಕಹಿ ಬೇವು ಸಹ ರಕ್ತವನ್ನು ಶುದ್ಧೀಕರಿಸುವ ಲ್ಲಿ ಒಂದು ಅತ್ಯಂತ ಜನಪ್ರಿಯ ಹಾಗೂ ನೈಸರ್ಗಿಕ ಉಪಾಯವಾಗಿದೆ. ಇದರ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಹೊರದಬ್ಬಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಮತ್ತು ಬೆಳ್ಳುಳ್ಳಿ ಒಂದು ನೈಸರ್ಗಿಕ ಸೂಕ್ಷ್ಮ ಜೀವಿ ನಿವಾರಕವಾಗಿದ್ದು ಉತ್ತಮ ರಕ್ತ ಶುದ್ಧೀಕರವಾಗಿದೆ. ನಮ್ಮ ಆಹಾರದಲ್ಲಿ ಕೇವಲ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನ ಸೇರಿಸಿಕೊಳ್ಳುವ ಮೂಲಕ ದೇಹದಲ್ಲಿನ ರಕ್ತದಲ್ಲಿನ ಕೊಲಸ್ಟ್ರಾಲ್ ನ್ನೂ ಹೊರಹಾಕಲು ತುಂಬಾ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ದೇಹದಲ್ಲಿನ ಸ್ವತಂತ್ರ ರೆಡಿಕಲ್ಸ್ ಗಳನ್ನು ಹೊರ ಹಾಕುತ್ತದೆ. ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುತ್ತದೆ. ಇನ್ನು ರಕ್ತ ಶುದ್ಧೀಕರಿಸುವ ಹಣ್ಣುಗಳು ಯಾವುದು ಎಂದು ನೋಡುವುದಾದರೆ ವಿಟಮಿನ್ ಸಿ ಹೇರಳವಾಗಿ ಇರುವ ಹಣ್ಣುಗಳಾದ ಕರ್ಬೋಜ, ಕಿತ್ತಳೆ, ಸ್ಟ್ರಾಬೆರಿ, ಸೇಬು, ಪೈನಾಪಲ್, ದಾಳಂಬಿ ಮುಂತಾದ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತವನ್ನು ಶುದ್ಧೀಕರಿಸಬಹುದು. ನೋಡಿದ್ರಲ್ಲ ಸ್ನೇಹಿತರೆ ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಆಹಾರಗಳು ಯಾವುವು ಎಂದು. ಇಂದಿನ ಮಾಹಿತಿ ಇಷ್ಟವಾಗಿದ್ದರೇ ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.