ಯೋಧರಿಗೆ ಹಾಗು ಅವರ ಕುಟುಂಬಕ್ಕೆ ಉಚಿತ ಚಿಕಿತ್ಸಾ ಸೇವೆಯನ್ನು ಮಾಡುತ್ತು ಬರುತ್ತಿದ್ದಾರೆ ಈ ವೈದ್ಯ ಹಾಗಾಗಿ ಇವರಿಗೆ ಯೋಧರ ವೈದ್ಯ ಎಂಬುದಾಗಿ ಕರೆಯಲಾಗುತ್ತದೆ.
ಚಿಕ್ಕವನಿದ್ದಾಗ ಸೈನ್ಯಕ್ಕೆ ಸೇರಬೇಕೆಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗದೆ ವೈದ್ಯನಾದೆ. ಆದರೂ ನನ್ನಲ್ಲಿನ ಸೈನಿಕನಾಗಬೇಕೆಂಬ ಇಚ್ಛೆ ಕಡಿಮೆಯಾಗಲಿಲ್ಲ. ಇದೀಗ ಯೋಧರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸೈನಿಕರಿಗೆ ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇನೆ ಎಂಬುದಾಗಿ ಈ ವೈದ್ಯರು ಹೇಳುತ್ತಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದ ಡಾ. ರಾಮಚಂದ್ರ ಕಾರಟಗಿ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರಾಮಚಂದ್ರ ಕಾರಟಗಿ ಪ್ರಸಿದ್ಧರಾಗಿರುವುದು ಯೋಧರು ಮತ್ತು ಅವರ ಕುಟುಂಬಕ್ಕೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿರುವುದರಿಂದ.
ವೈದ್ಯ ರಾಮಚಂದ್ರಪ್ಪನವರು 1993- 94ರಲ್ಲಿ ದಾವಣಗೆರೆಯ ವೈದ್ಯಕೀಯ ಕಾಲೇಜ್‌ನಲ್ಲಿ ಎಂಬಿಬಿಎಸ್ ಮುಗಿಸಿ ಸದ್ಯ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಇಲ್ಲಿನ ರಾಜಧಾನಿ ಕಾಲನಿಯಲ್ಲಿ ಕಾರಟಗಿ ಹಾಸ್ಪಿಟಲ್ ಶುರು ಮಾಡಿ, ಯೋಧರು, ನಿವೃತ್ತ ಯೋಧರು, ಅವರ ಅವಲಂಬಿತರಿಗೆ ಉಚಿತ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.
ಈ ಸೇವೆಯನ್ನು ಮಾಡಲು ತಮ್ಮ ತಾಯಿಯೇ ಕರಣ ಅನ್ನೋದನ್ನ ಈ ವೈದ್ಯರು ಹೇಳುತ್ತಾರೆ, ನೀನು ಸೇನೆಗೆ ಸೇರದಿದ್ದರು ಪರವಾಗಿಲ್ಲ ಆದ್ರೆ ಅಲ್ಲಿ ಮಾಡುವ ದೇಶ ಸೇವೆಯೇ ಇಲ್ಲಿ ಬಡವರಿಗೆ ಕೈಲಾಗದವರಿಗೆ ಅನಾಥರಿಗೆ ಗ್ರಾಮೀಣ ಜನರಿಗೆ ಉಚಿತ ಚಿಕಿತ್ಸೆಯನ್ನು ಕೊಡು ಅನ್ನೋದನ್ನ ತಮ್ಮ ತಾಯಿ ಹೇಳಿದ್ದರೇನಂತೆ ಹಾಗಾಗಿ ಈ ಸೇವೆಯನ್ನು ಮಾಡಲು ಮುಂದಾಗಿದ್ದಾರೆ ಈ ವೈದ್ಯ.
ಅಷ್ಟೇ ಅಲ್ಲದೆ ಅನಾಥ ಆಶ್ರಮ, ವೃದ್ದಾಶ್ರಮ, ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಅಂತಲೇ ಒಂದೊಂದು ವಾರ ಇವರ ಸೇವೆಗೆ ಮೀಸಲಿಟ್ಟಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೆ ಈ ಸೇವೆಯನ್ನು ಮಾಡುತ್ತಿರುವ ಈ ವೈದ್ಯ ದೇವರಿಗೆ ನಮ್ಮ ಕಡೆಯಿಂದ ಒಂದು ಬಿಗ್ ಸಲ್ಯೂಟ್.