ಕೊರೋನಾ ಹಾವಳಿಯಿಂದ ಇಂದು ಇಡಿ ದೇಶದ ಜನ ಸಂಕಷ್ಟ ದಲ್ಲಿ ಸಿಲುಕ್ಕಿದ್ದಾರೆ. ಕೊರೋನಾ ಅಟ್ಟಹಾಸ ದಿಂದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಸರ್ಕಾರ ಕೆಲ ವೊಂದು ನಿಧಾನಗತಿಯ ನಿರ್ಧಾರಗಳು ಜನರ ಅಕ್ರೋಶಕ್ಕೆ ಕಾರಣವಾಗುತ್ತಿದೆ. ಜನರು ತಮ್ಮ ಕುಟುಂಬದ ಆಧಾರ ಸ್ಥಂಬಗಳನ್ನ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಇಂತಹ ಕಾಲದಲ್ಲಿ ಅನೇಕ ವ್ಯಕ್ತಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ.ಸಹಾಯ ಹಸ್ತ ಚಾಚುವುದರಲ್ಲಿ ಕನ್ನಡ ಸಿನೆಮಾ ರಂಗದ ಗಣ್ಯರು ಕೂಡ ಹಿಂದೆ ಬಿದ್ದಿಲ್ಲ.
ಇದರಲ್ಲಿ ಮುಖ್ಯವಾಗಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಜನರ ಕಷ್ಟಗಳಿಗೆ ತಮ್ಮ ಪಕ್ಷದ ಮುಖಾಂತರ ಸಹಾಯ ಹಸ್ತ ಚಾಚುತ್ತಿದ್ದಾರೆ. ರೈತರಿಂದ ನೇರವಾಗಿ ಅಗತ್ಯ ವಸ್ತುಗಳಾದ ತರಕಾರಿಯನ್ನ ಖರೀದಿ ಮಾಡಿ,ಅಗತ್ಯವಿರುವ ಕುಟುಂಬಗಳಿಗೆ ತಲುಪಿಸುತ್ತಿದ್ದಾರೆ. ಇವರ ಕಾರ್ಯಗಳನ್ನ ಜನರು ಮೆಚ್ಚಿ,ಉಪೇಂದ್ರ ಅವರನ್ನ ಶ್ಲಾಘಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಜನ, ಆಂಧ್ರಪ್ರದೇಶ,ತಮಿಳುನಾಡು ಮತ್ತು ಕೇರಳ ಮಾದರಿಯಲ್ಲೆ ಪ್ರಾದೇಶಿಕ ಪಕ್ಷದ ಅಗತ್ಯ ಕರ್ನಾಟಕಕ್ಕು ಬೇಕು ಎನ್ನುವ ಅಭಿಪ್ರಾಯವನ್ನ ಜನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತ ಪಡಿಸುತ್ತಿದ್ದಿದ್ದಾರೆ.
ಉಪೇಂದ್ರಾ ಅವರನ್ನ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ಅವರ ಅನೇಕ ಅಭಿಮಾನಿಗಳು ಹಂಬಲಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಉಪೇಂದ್ರಾ ಅವರ ಹೇಳಿಕೆಯೊಂದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಉಪೇಂದ್ರ ಅವರು ತಾನು ಎಲೆಕ್ಷನ್ ಗೆ ನಿಲ್ಲುವುದಿಲ್ಲ ಮತ್ತು ತಾನು ಸಿ.ಎಮ್(CM)Common Man ಕಾಮನ್ ಮೆನ್ ಆಗಿ ಇರುತ್ತೇನೆ ಎಂದು ಘೋಷಿಸಿಕೊಂಡಿದ್ದಾರೆ. ನೀವು ನಮ್ಮ ಪ್ರಜಾಕೀಯ ಪಕ್ಷದ ಮೇಲೆ ಭರವಸೆ ಇಟ್ಟು,ಆಯ್ಕೆ ಮಾಡಿದಲ್ಲಿ , ಪ್ರಜಾಕೀಯದ ತತ್ವದಂತೆ ಪ್ರತಿನಿದಿಗಳು ಕಾರ್ಯ ನಿರ್ವಹಿಸುತ್ತಾರೆ ಹಾಗೆ ಹಣದ ಆಸೆಗೆ ಬೇರೆ ಪಕ್ಷಕ್ಕೆ ಪಕ್ಷಾಂತರ ಆಗಿದಲ್ಲಿ ಅಥವಾ ನಿಮಗೆ ಅವರ ಕೆಲಸ ಇಷ್ಟ ಆಗದಿದ್ದಲ್ಲಿ ಅವರಿಂದ ರಾಜಿನಾಮೆ ಕೊಡಿಸುತ್ತೇನೆಂದು ಭರವಸೆ ನೀಡಿದ್ದಾರೆ.
ಆದರೆ ಈ ವಿಷಯ ಉಪ್ಪಿ ಅಭಿಮಾನಿಗಳಲ್ಲಿ ಮತ್ತು ಪ್ರಜಾಕೀಯ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ಮೂಡುವಂತೆ ಮಾಡಿದೆ. ಉಪ್ಪಿ ಅವರ ತೀರ್ಮಾನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.