ಹೌದು ಇಲ್ಲಿ ಮೊದಲಿಂದಲೂ ಇರುವ ಒಂದು ನಂಬಿಕೆ ಅಂದ್ರೆ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ದೇವಾಲಯವಿದು. ಈ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಕ್ಷೇತ್ರದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ನಾರು ಸಮರ್ಪಣೆ: ಉತ್ಸವ ಮೂರ್ತಿ ಇರಿಸದ ಪಲ್ಲಕ್ಕಿ, ರಥಕ್ಕೆ ಭಕ್ತರು ನಾರಿನ ಕತ್ತಾಳೆ ನಾರು ಕಟ್ಟು ಎಸೆದು ಹರಕೆ ತೀರಿಸುತ್ತಾರೆ. ಎಲ್ಲೆಡೆ ಉತ್ತತ್ತಿ, ಬೆಲ್ಲ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, ನಾರನ್ಮುನಿಗೆ ನಾರನ್ನು ಸಮರ್ಪಿಸುವುದು ರಾಜ್ಯದಲ್ಲೇ ವಿಶಿಷ್ಟವಾದುದು.
ಎಡೆ: ಅಕ್ಕಿ, ಬಾಳೆಹಣ್ಣು, ಬೆಲ್ಲ, ಹಾಲು, ತುಪ್ಪದಿಂದ ತಯಾರಿಸಿದ `ಅಕ್ಕಿಹುಗ್ಗಿ’ಯನ್ನು ಮಾತ್ರ ಮುನಿಗೆ ನೈವೇದ್ಯ ಮಾಡಲಾಗುತ್ತದೆ. ಅದು ಮಣ್ಣಿನ ಮಡಕೆಯಲ್ಲೇ ಬೇಯಿಸಬೇಕು. ಸುಡುವ ಗಡಿಗೆಯನ್ನೇ ಮಡಿಯಲ್ಲಿ ಹೆಗಲ ಮೇಲೆ ಹೊತ್ತು ದೇವಸ್ಥಾನ ಪ್ರದಕ್ಷಿಣೆ ಮಾಡಿ ನೈವೇದ್ಯ ಸಲ್ಲಿಸಿ, ಪ್ರಸಾದ ಹಂಚುವ ಪದ್ಧತಿ ಇದೆ. 60ಕ್ಕೂ ಹೆಚ್ಚು ಬೆಡಗಿನವರು ಪ್ರತ್ಯೇಕವಾಗಿ ಎಡೆ ಸೇವೆ ಸಲ್ಲಿಸಲಾಗುತ್ತದೆ.
ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಕ್ಷೇತ್ರ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿದೆ.