ನಮಸ್ತೆ ಪ್ರಿಯ ಓದುಗರೇ, ರೈತನಿಗೆ ಎಷ್ಟು ಭೂಮಿ ಇದ್ದರೂ ಸಾಲದು. ಅತಿಯಾದ ಭೂಮಿ ಇದ್ದರೆ ಒಂದು ಗೋಳಾಟ ಇನ್ನೂ ಕಡಿಮೆ ಇದ್ದರೂ ಕೂಡ ರೈತರ ಪಾಡು ಕೇಳುವವರು ಇಲ್ಲ. ಅದರಲ್ಲಿ ಮಳೆ ಇಲ್ಲದೆ ಬರಗಾಲ ಬಂದು ಹಲವಾರು ರೋಗಗಳಿಗೆ ಧಾನ್ಯಗಳು ತುತ್ತಾಗಿ ನಶಿಸಿ ಹೋಗಿ ರೈತನು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ರೈತರು ದೇಶದ ಬೆನ್ನುಲುಬು ಅಂತ ಕರೆಯುತ್ತಾರೆ. ರೈತನು ತಾನು ಕಷ್ಟ ಪಟ್ಟು ಬೆಳೆದ ದವಸ ಧಾನ್ಯಗಳಿಗೆ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಕಾರಣ ನೊಂದು ಬೆಂದು ಹೇಗೋ ಜೀವನವನ್ನು ಸಾಗಿಸುತ್ತಿದ್ದಾನೆ.
ಇನ್ನೂ ಕೆಲವರು ಹತ್ತಿರ ತುಂಬಾನೇ ಕಡಿಮೆ ಭೂಮಿ ಇರುತ್ತದೆ. ಅವರ ಪಾಡು ಕೇಳುವವರು ಯಾರಿಲ್ಲ. ಆದರೆ ನಿಮಗೆ ಗೊತ್ತೇ? ಚಿಕ್ಕ ಜಮೀನಿನಲ್ಲಿ ನಾವು ಹಲವಾರು ಬಗೆಯ ಬಿಸಿನೆಸ್ ಗಳನ್ನು ಮಾಡಬಹುದು. ಕೋಟ್ಯಾಂತರ ಹಣವನ್ನು ಗಳಿಸಬಹುದು. ಇನ್ನೂ ಕೆಲವರು ನಮ್ಮ ಹತ್ತಿರ ಜಾಸ್ತಿ ಜಮೀನು ಇಲ್ಲ. ಒಂದೆರಡು ಎಕರೆ ಜಮೀನಿನಲ್ಲಿ ಏನು ಮಾಡಬೇಕು. ಅದರಲ್ಲೂ ನೀರು ಇಲ್ಲದೆ ಏನು ಮಾಡಲು ಸಾಧ್ಯವಾಗುವುದಿಲ್ಲ.
ಆದರೆ ದುಡಿಯುವ ಛಲ ಅನ್ನುವುದೊಂದಿದ್ದರೆ ನಾವು ಯಾವ ಕೆಲಸವನ್ನು ಬೇಕಾದರೂ ಸುಲಭವಾಗಿ ಮಾಡಬಹುದು. ಉದಾಹರಣೆಗೆ, ತುಮಕೂರು ಜಿಲ್ಲೆಯಲ್ಲಿ ಒಬ್ಬ ರೈತ ಎಂಬಾತನು, ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಮೀನು, ಜೇನು, ಹೈನುಗಾರಿಕೆ, ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆ ಮಾಡಿ ಒಂದು ವರ್ಷದಲ್ಲಿ 15 ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಕಿರಿದಾದ ಭೂಮಿಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಅಂತ ಕೈ ಕಟ್ಟಿಕೊಂಡು ಕುಳಿತುಕೊಳ್ಳುವವರಿಗೆ ಇದೊಂದು ಉದಾಹರಣೆ ಸಮೇತ ತಕ್ಕ ಉತ್ತರವಾಗಿದೆ ಅಂತ ಹೇಳಬಹುದು.
ಮಿಶ್ರ ಬೇಸಾಯ ಪದ್ಧತಿಯನ್ನು ಅನುಸರಣೆ ಮಾಡಿಕೊಂಡು ಮತ್ತು ಕೃಷಿಯ ಉಪ ಕಸುಬುಗಳನ್ನು, ಮಾಡುತ್ತಾ ರೈತನು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಬಗೆಯ ಕಸುಬುಗಳನ್ನು ಮಾಡಿದರೆ ಎಷ್ಟು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಅಂತ ವಿವರವಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ. ಮೊದಲಿಗೆ, ಮೀನುಗಾರಿಕೆ, ಮೀನಿನಿಂದ ನಾವು ಲಕ್ಷ ಲಕ್ಷಗಟ್ಟಲೆ ಹಣವನ್ನು ಗಳಿಸಬಹುದು.
ಪ್ರಗತಿಪರ ಕೃಷಿ ಮಾಡುವವನು ಒಂದು ಗುಂಟೆಯಲ್ಲಿ ತಿಲಾಪಿಯಾ ಮಾಡಬಹುದು. ಇಲ್ಲಿ ಆರ್.ಎ.ಎಫ್ ತಂತ್ರಜ್ಞಾನವನ್ನು ಬಳಸಬೇಕು. ಇದರಿಂದ ಮೀನುಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಕೇವಲ ಒಂದು ಬಾರಿ ಬಳಕೆ ಮಾಡಿದ ನೀರಿನಲ್ಲಿಯೇ ಬೆಳೆ ತೆಗೆಯುತ್ತಾರೆ. ನಾಲ್ಕೂವರೆ ತಿಂಗಳ ನಂತರ ತೀಲಾಪಿಯಾ ಬೆಳೆ ಸಿಗುತ್ತದೆ. ಒಂದು ಕೆಜಿಗೆ 150 ರೂಪಾಯಿ ಆದರೆ ಒಂದು ಟನ್ ಸಾಮರ್ಥ್ಯ ಘಟಕ ನಿರ್ಮಾಣ ಮಾಡುವುದರಿಂದ ನಾಲ್ಕೂವರೆ ತಿಂಗಳಿಗೆ ಮೀನಿನಿಂದಲೆ 3 ಲಕ್ಷ ಆದಾಯವನ್ನು ಪಡೆಯಬಹುದು. ವರ್ಷಕ್ಕೆ ಎರಡು ಬೆಳೆ ಸಿಕ್ಕರೆ ನೀವು 6ಲಕ್ಷ ಹಣವನ್ನು ಗಳಿಸಬಹುದು.
ಇನ್ನೂ ಜೇನು ತುಪ್ಪದಿಂದ 3.70 ಲಕ್ಷ ಆದಾಯ ಪಡೆಯಬಹುದು.ರೈತನು ಜೇನು ಕುಟುಂಬವನ್ನು ಸಾಕುತ್ತಿದ್ದರೆ ಪ್ರತಿ ಜೇನು ಕುಟುಂಬಕ್ಕೆ ಕನಿಷ್ಠ ರೂಪಾಯಿ 4500 ಮಾರುಕಟ್ಟೆಯ ಬೆಲೆ ಆಗಿರುತ್ತದೆ. ಒಂದು ವರ್ಷಕ್ಕೆ 60 ಜೇನು ಕುಟುಂಬಗಳನ್ನು ಮಾರಾಟ ಮಾಡಿದರೆ ಸಿಗುವ ಆದಾಯ 2.70ಲಕ್ಷ. ಇನ್ನೂ ಜೇನುತುಪ್ಪವನ್ನು ಮಾರಾಟ ಮಾಡುವುದರಿಂದ 1.5 ಲಕ್ಷ ಸಂಪಾದನೆ ಮಾಡಬಹುದು. ಇನ್ನೂ ಕೋಳಿಗಳಿಂದ 2.5 ಲಕ್ಷ ಹಣ ಗಳಿಸಬಹುದು.
ಒಬ್ಬ ರೈತನು ಬ್ಯಾಚ್ ರೀತಿಯಲ್ಲಿ 300 ಕೋಳಿಗಳನ್ನು ಖರೀದಿ ಮಾಡಿ ಅವುಗಳ ಪಾಲನೆ ಪೋಷಣೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು, ಜೊತೆಗೆ ದಿನಕ್ಕೆ ಒಂದು ಕೋಳಿ ಮತ್ತು ಮೊಟ್ಟೆಗಳ ಮಾರಾಟ ಕೂಡ ಮಾಡಿ ರೈತ ಕೋಳಿ ಸಾಕಾಣಿಕೆ ಇಂದ ವರ್ಷಕ್ಕೆ 2.5ಲಕ್ಷ ಹಣವನ್ನು ಸಂಪಾದನೆ ಮಾಡಬಹುದು.ಇನ್ನೂ ಸಾಕಿರುವ ನಾಟಿ ಹಸು ಕುರಿ ಮೇಕೆಗಳಿಂದ ವರ್ಷಕ್ಕೆ ರೈತನು 3ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು.
ಪ್ರಧಾನ್ ಮಂತ್ರಿ ಮತ್ಸ್ಯ ಯೋಜನೆ ಅಡಿಯಿಂದ ನಿಮಗೆ ಸಬ್ಸಿಡಿ ಕೂಡ ದೊರೆಯುತ್ತದೆ ಈ ಬಗ್ಗೆ ಕೋರ್ಸ್ ನಲ್ಲಿ ಮಾಹಿತಿಯಿದೆ. ಎಷ್ಟು ಹಣ ಬರುತ್ತದೆ ಯಾರಿಗೆ ಅರ್ಜಿಯನ್ನು ಸಲ್ಲಿಸಬೇಕು ಈ ಎಲ್ಲ ಮಾಹಿತಿ ನಾಲ್ಕು ಗುಂಟೆ ಜಮೀನಿನಲ್ಲಿ ವರ್ಷಕ್ಕೆ 15ಲಕ್ಷ ಗಳಿಸಬಹುದು ಅನ್ನುವ ಮಾಹಿತಿ ಇದೆ.
ಆ ಕೋರ್ಸ್ ಯಾವುವು ಅಂದರೆ, ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ, ಮೀನು ಕೃಷಿ ಜೇನು ಕೃಷಿ ಸಂಪೂರ್ಣ ಮಾಹಿತಿ, ಮೀನು, ಜೇನಿಗೆ ಗೊಬ್ಬರಗಳಿಂದ ಆಗುವ ಲಾಭಗಳು, ಸವಾಲು, ಸರ್ಕಾರ ಬೆಂಬಲ, ಕೋರ್ಸ್ ಸಾರಾಂಶ. ಈ ಕೋರ್ಸ್ ಕಲಿಯಲು ಫೈನಾನ್ಸಿಯಲ್ ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಈ ಕೋರ್ಸ್ ಕಲಿತು ಯಶಸ್ವಿ ರೈತರಾಗಿ.