ಸ್ವಂತ ಮನೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆದರೆ ಪ್ರತಿಯೊಬ್ಬರಿಗೂ ಸ್ವಂತ ಮನೆ ಇರುವುದಿಲ್ಲ ಅದರ ಮುಖ್ಯವಾಗಿ ಮಧ್ಯ ತರಗತಿ ಕುಟುಂಬದವರಿಗೆ ಇಂತಹ ಒಂದು ಜೀವನದ ಆಶಯ ಅತಿ ದೊಡ್ಡದಾಗಿರುತ್ತದೆ. ಯಾಕೆಂದರೆ ತನ್ನ ಅತಿ ದೊಡ್ಡ ಕಾಲದಲ್ಲಿ ತನ್ನ ಸ್ವಂತ ಮನೆಯಲ್ಲಿ ಯಾರ ಅಂಗು ಇಲ್ಲದೆ ಜೀವನ ನಡೆಸಬೇಕು ಎನ್ನುವುದು. ಇನ್ನು ಬಹಳಷ್ಟು ಜನ ಸ್ವಂತ ಮನೆಗಾಗಿ ಬಹಳಷ್ಟು ಕಷ್ಟವನ್ನು ಕೊಡುತ್ತಾರೆ ಆದರೆ ಯಾವುದೇ ಲಾಭವಿಲ್ಲದೆ ಮತ್ತೆ ಬಾಡಿಗೆ ಮನೆಗೆ ಶರಣಾಗುತ್ತಾರೆ.
ಇನ್ನು ಬಾಡಿಗೆ ಮನೆ ಎಂದರೆ ಈಗಿನ ಕಾಲದಲ್ಲಿ ಅದು ಗಗನ ಕುಸುಮವಾಗಿದೆ. ಬೆಲೆಗಳು ಗಗನಕ್ಕೆ ಏರಿವೆ ನೀವು ಎಷ್ಟು ಕಷ್ಟ ಪಡುತ್ತಿರೋ ಅದರಲ್ಲಿ ಮುಕ್ಕಾಲು ಭಾಗ ಬಾಡಿಗೆ ಹೋಗುತ್ತವೆ. ಇನ್ನು ಸ್ವಂತ ಮನೆಯ ಕನಸು ಕನಸಾಗಿಯೇ ಉಳಿಯುತ್ತದೆ ಹೀಗೆ ಬಾಡಿಗೆ ಮನೆ ಬಿಟ್ಟು ಸ್ವಂತ ಮನೆ ನಮ್ಮದು ಆಗಬೇಕು ಆನಂದ ಸಂತೋಷ ನಮ್ಮದು ಆಗಬೇಕು ಎಂದರೆ ನಾವು ಏನೆಲ್ಲಾ ಕಷ್ಟ ಪಟ್ಟರು ಒಮ್ಮೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಕೂಡಿಟ್ಟ ಹಣ ಸರಿ ಹೋಗುವುದಿಲ್ಲ
ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂದು ವಿಶ್ವ ಪ್ರಯತ್ನಗಳನ್ನು ಮಾಡಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡರು ಕೂಡ ಒಮ್ಮೊಮ್ಮೆ ಅದು ಸಫಲವಾಗುವುದಿಲ್ಲ ಯಾಕೆಂದರೆ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಸ್ಥಳ ಬೇಕು ಸ್ಥಳಕ್ಕೆ ಅನ್ವೇಷಣೆ ಬೇಕು ಮತ್ತೆ ಮನೆ ನಿರ್ಮಿಸಿಕೊಳ್ಳಲು ವಸ್ತುಗಳು ಬೇಕು. ಅಗತ್ಯವಾದ ಅಂತಹ ಆ ವಸ್ತುಗಳನ್ನು ಪೂರೈಸಿಕೊಳ್ಳಲು ಹಣ ಬೇಕು. ಹೀಗೆ ಒಂದಕ್ಕೊಂದು ಕುಂಡಿ ಅಂತೆ ಸ್ವಂತ ಮನೆಯ ಕನಸು ಒಮ್ಮೊಮ್ಮೆ ಕನಸಾಗಿಯೇ ಉಳಿಯುವುದು ಬಿಡುತ್ತದೆ.
ಬಾಡಿಗೆ ಮನೆಯ ಬಾಧೆ ತಪ್ಪುವುದಿಲ್ಲ. ಇನ್ನು ಕೆಲವು ಜನ ಕೆಲವೊಂದು ಉಪಾಯಗಳನ್ನು ಪಾಲಿಸಿಕೊಳ್ಳುತ್ತಾರೆ ತಮ್ಮ ಜಾತಕ ಯಾವುದಾದರು ಪರಿಹಾರವಿದ್ದರೆ ಅವುಗಳನ್ನು ತಪ್ಪದೆ ಪ್ರಯತ್ನ ಮಾಡುತ್ತಾರೆ ಸ್ವಂತ ಮನೆಗಾಗಿ. ಇದು ಅವರ ಅವರ ಜೀವನದ ಉದ್ದೇಶವಾಗಿರುತ್ತದೆ. ಇನ್ನು ನಾನು ಈಗ ಹೇಳುತ್ತಿರುವ ಉಪಾಯ ಸ್ವಂತ ಮನೆಯ ಅಂದರೆ ನಿಮ್ಮ ಕನಸಿನ ಮನೆ ನಿಮ್ಮ ಕೈಗೂಡಲು ಬಹಳ ಸುಲಭ ಉಪಾಯ.
ಇದನ್ನು ಮಾಡುವುದರಿಂದ ಇದನ್ನು ಆಚರಿಸುವುದರಿಂದ ಗೃಹ ಯೋಗ ನಿಮಗೆ ಬಹುಬೇಗ ಕೈಯುಡುತ್ತದೆ.ಮಂಗಳವಾರ, ಮಲ್ಲಿಗೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಸಿಂಧೂರವನ್ನು ಬೆರೆಸಿ ನಂತರ ಅದನ್ನು ಹನುಮಂತನಿಗೆ ಅನ್ವಯಿಸಿ. ಆದರೆ ಪುರುಷರು ಮಾತ್ರ ಈ ಕೆಲಸವನ್ನು ಮಾಡಬೇಕೇ ಹೊರತು ಮಹಿಳೆಯರು ಮಾಡುವಂತಿಲ್ಲ. ಇದನ್ನು ಮಾಡುವುದರಿಂದ ಜೀವನದಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮಂಗಳವಾರವು ಮಂಗಳ ಗ್ರಹಕ್ಕೆ ಸಮರ್ಪಿತವಾದ ದಿನವಾಗಿದೆ. ಇದು ಶಕ್ತಿ, ಕಟ್ಟಡ-ಭೂಮಿ, ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಮದುವೆ ಕೆಲಸ, ಶೌರ್ಯ, ಸ್ಥಿರಾಸ್ತಿ ಅಥವಾ ವ್ಯಾಜ್ಯಗಳಂತಹ ಕೆಲಸಗಳನ್ನು ಮಾಡುವುದು ಈ ದಿನ ಫಲಪ್ರದವಾಗಬಹುದು ಎನ್ನುವ ನಂಬಿಕೆ ಇದರೊಂದಿಗೆ ಹೊಂದಿಕೊಂಡಿದೆ.