ನಾವು ದೇವಸ್ಥಾನಕ್ಕೆ ಹೋದಾಗ ಸಹಜವಾಗಿಯ ಗಂಟೆಯನ್ನು ಬಾರಿಸುತ್ತೇವೆ. ಇದು ಹಿರಿಯರು ಮಾಡಿಕೊಂಡು ಬಂದಿರುವ ನಿಯಮ. ಇದನ್ನು ನಾವು ಪಾಲಿಸಲೇಬೇಕು.ನಾವು ದೇವಸ್ಥಾನಕ್ಕೆ ಮೊದಲು ಹೋದಾಗ ಸಹಜವಾಗಿ ಗಂಟೆಯನ್ನು ಬಾರಿಸುತ್ತೇವೆ. ಹಾಗೆಯೇ ಆರತಿಯನ್ನು ಬೆಳಗಬೇಕಾದರೆ ಗಂಟನಾಧ ನಮ್ಮ ಕಿವಿಗಳಿಗೆ ಇಂಪನ್ನು ಕೊಡುತ್ತದೆ.ಆದರೆ ಅದರ ಹಿಂದಿನ ರಹಸ್ಯ ನಮಗೆ ಇದುವರೆಗೂ ತಿಳಿದಿರಲಿಲ್ಲ. ಕೆಲವೊಬ್ಬರಂತೂ ಪೂಜೆ ಮುಗಿದರೂ ಸಹ ಗಂಟೆಯನ್ನು ಬಾರಿಸುವುದು ಬಿಡುವುದಿಲ್ಲ ಹಾಗೆ ಒಂದು ದೇವಸ್ಥಾನ ಬಂದರೆ ಗಂಟೆ ಇರುವುದು ಸರಿಸಾಮಾನ್ಯ.ಈ ಒಂದು ಮಾಹಿತಿಯಲ್ಲಿ ಇದರ ಹಿಂದಿನ ರಹಸ್ಯವನ್ನು ನಿಮಗೆ ಹೇಳುತ್ತೇವೆ ನೋಡಿ.
ಗಂಟೆಯ ಹಿತ್ತಾಳೆಯಿಂದ ಮಾಡಲಾಗುತ್ತದೆ. ಅದನ್ನು ಬಾರಿಸಿದಾಗ ಭಕ್ತಾದಿಗಳ ಮನಸ್ಸಿನಲ್ಲಿ ಅಭಿಮಾನಿಯ ಭಾವ ಉಂಟಾಗುತ್ತದೆ. ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿಭಾವ ಮೂಡುತ್ತದೆಯಲ್ಲದೇ, ಭಕ್ತರ ಮನಸ್ಸಿನಲ್ಲಿ ಒಂದು ರೀತಿಯ ಶಾಂತತೆ ನೆಲೆಸುವಂತೆ ಮಾಡಲು ಇದು ಸಹಕಾರಿಯಾಗುತ್ತೆ. ಹೀಗಾಗೇ ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಹಿಂದೆಯೂ ಅದರದ್ದೇ ಆದ ಮಹತ್ವ ಇದೆ ಎನ್ನಲಾಗುತ್ತೆ. ಸ್ಕಂದ ಪುರಾಣದ ಪ್ರಕಾರ, ಗಂಟೆ ಬಾರಿಸಿದಾಗ ಹೊರಬರುವ ಶಬ್ದವು ಓಂನ ಶಬ್ದಕ್ಕೆ ಹೋಲುತ್ತದೆ.
ಈ ಒಂದೇ ಒಂದು ಓಂ ಶಬ್ದ ನಮ್ಮ ಮನಸ್ಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಗಂಟೆ ಬಾರಿಸಿದಾಗ ಅದರಿಂದ ಹೊರ ಬರುವ ಸದ್ದು ಓಂಕಾರಕ್ಕೆ ಸಮನಾಗಿರುತ್ತದೆ.ಇನ್ನ ಶಾಸ್ತ್ರ ಪ್ರಕಾರ ಹೇಳಬೇಕಾದರೆ ಈ ಘಂಟೆ ಶಬ್ದವು ನಮ್ಮ ಆಸು ಪಾಸು ಇರುವ ದುಷ್ಟಶಕ್ತಿಗಳಿಂದ ನಮ್ಮನ್ನು ದೂರ ಓಡಿಸುತ್ತದೆ ಎಂದು ತಿಳಿದು ಬಂದಿದೆ. ಇನ್ನ ಗಂಟೆ ಬಾರ್ಸಿದ್ರೆ ಕೇವಲ ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ ಸಕಲ ಶುಭ ಸಿದ್ಧತೆ ಹಾಗೂ ಶುಭ ಸುದ್ದಿಗಳನ್ನು ನೀಡುವ ಮುನ್ಸೂಚನೆಯಾಗಿರುತ್ತದೆಯಂತೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಘಂಟಾನಾದ ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತೆ.
ಇನ್ನು ಕೆಲವೊಂದಿಷ್ಟು ಪುರಾತನ ಗ್ರಂಥದ ಪ್ರಕಾರ ನಾವು ದೇವಸ್ಥಾನಕ್ಕೆ ಹೋಗುವ ಮುಂಚೆ ದೇವರ ಒಂದು ಅನುಮತಿಯನ್ನು ಕೇಳಬೇಕಾಗುತ್ತದೆ ಅಂತೆ. ಹೀಗಾಗಿ ನಾವು ಗಂಟೆ ಬಾರಿಸುವ ಮೂಲಕ ದೇವರ ಹತ್ತಿರ ಗರ್ಭಗುಡಿಯನ್ನು ಪ್ರವೇಶಿಸಲು ಅನುಮತಿಯನ್ನು ಕೇಳುತ್ತೇವೆ ಎಂದು ಬಿಂಬಲಿಸಲಾಗಿದೆ. ಇನ್ನ ಇದು ನಮ್ಮ ಸುತ್ತಮುತ್ತ ಇರುವ ಪರಿಸರಕ್ಕೂ ತುಂಬಾನೇ ಉಪಯೋಗ ಮಾಡುತ್ತದೆಯಂತೆ ಈ ಒಂದು ಗಂಟೆಯ ಶಬ್ದದಿಂದ ಹರಡುವ ಶಬ್ದದ ಅಲೆಗಳು ಪ್ರತಿ ಗಿಡ ಹಣ್ಣು ಹೂಗಳನ್ನು ಮುಟ್ಟಿತಮ್ಮಲ್ಲಿರುವ ಒಂದು ಸಕಾರಾತ್ಮಕ ಶಕ್ತಿಯನ್ನು ಮುಟ್ಟಿಸುತ್ತೇವೆ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ನೀವೇನಂತೀರಿ.