ನಾವು ನಿಂತು ನೀರು ಕುಡಿಯುವಾಗ ಮನೆಯಲ್ಲಿ ಹಿರಿಯರಿದ್ದರೆ ‘ಆಯಾಸವಾಗಿದ್ದೀಯಾ ಒಂದು ಕಡೆ ಕೂತು ಆರಾಮವಾಗಿ ಕುಡಿ’ ಎಂದು ಹೇಳುವುದನ್ನು ಕೇಳಿರಬಹುದು.
ಆಯುರ್ವೇದದಲ್ಲಿ ಕೂಡ ನಿಂತು ಕಂಡು ನೀರು ಕುಡಿಯುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ. ನಿಂತುಕೊಂಡು ಏಕೆ ನೀರು ಕುಡಿಯಬಾರದು ಎಂದು ನೋಡೋಣ ಬನ್ನಿ
ಆಯುರ್ವೇದದ ಪ್ರಕಾರ ನಿಂತುಕೊಂಡು ನೀರು ಕುಡಿಯುವಾಗ ನಮ್ಮ ನರಗಳು ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದಾಗಿ ಸಂಧಿವಾತದ ಸಮಸ್ಯೆ ಬರುವುದು. ಸಂಧಿವಾತ ಇರುವವರೆಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
ಅಲ್ಲದೆ ನಿಂತುಕೊಂಡು ನೀರು ಕುಡಿಯುವುದು ಹೃದಯ ಹಾಗೂ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದಲ್ಲ.
ನಿಂತುಕೊಂಡು ನೀರು ಕುಡಿಯಬಾರದೆಂದು ವಿಜ್ಞಾನ ಲೋಕವೂ ಒಪ್ಪುತ್ತದೆ. ಆದ್ದರಿಂದ ಬಾಯಾರಿಕೆಯಾದಾಗ ಒಂದು ಕಡೆ ಕೂತು ನೀರು ಕುಡಿದು ನಿಮ್ಮ ದಣಿವಾರಿಸಿಕೊಳ್ಳಿ.