ನೀವು ನಿತ್ಯ ಬಳಸುವ ಸೋಪಿನ ಪ್ಯಾಕೆಟ್ ಮೇಲಿರುವ ವಿಷಯವನ್ನು ಯಾರಾದರೂ ಒಮ್ಮೆಯಾದ್ರೂ ಓದಿದ್ದೀರಾ ಖಂಡಿತ ಈ ವಿಚಾರ ನೀವು ತಿಳಿದುಕೊಳ್ಳಬೇಕು. ಯಾಕೆ ಏನು ಅನ್ನೋದು ಇಲ್ಲಿದೆ ನೋಡಿ.
ನಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಶುಭೋದಯ ಮೊರೆ ಹೋಗಲೇಬೇಕು, ಮೊದಲೆಲ್ಲ ಶುಭ್ರತೆ ಗಾಗಿ ಕಡಲೆಹಿಟ್ಟು ಗಳಂತಹ ಆಯುರ್ವೇದದ ಮೊರೆ ಹೋಗುತ್ತಿದ್ದರು.
ಆದರೆ ಈಗ ಸಂಪೂರ್ಣ ಕಾಲ ಬದಲಾಗಿರುವುದರಿಂದ ರಾಸಾಯನಿಕಗಳ ಮರೆತು ಹೋಗುತ್ತಾರೆ, ಇನ್ನು ನೀವು ಬಳಸುವ ಸೋಪ್ ನಲ್ಲಿ ಎಷ್ಟು ಪ್ರಮಾಣದ ರಾಸಾಯನಿಕ ಅಂಶಗಳನ್ನು ಬಳಸಲಾಗಿದೆ ಎಂದು ನಿಮ್ಮ ಸೋಪಿನ ಪ್ಯಾಕೆಟ್ ಮೇಲೆ ಬರೆದಿರುತ್ತಾರೆ, ಅದನ್ನು ಹೇಗೆ ಗುರುತಿಸುವುದು ಮತ್ತು ಅಲ್ಲಿ ಬರೆದಿರುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಭಾರತೀಯ ಪ್ರಮಾಣ ಮೂರು ರೂಪಗಳ ಗುಣಮಟ್ಟಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ ಅವುಗಳೆಂದರೆ ಗ್ರೇಡ್ 1, ಗ್ರೇಡ್ 2, ಗ್ರೇಡ್ 3, ನೀವು ಬಳಸುವ ಸೋಪ ಪ್ಯಾಕೆಟ್ ಅನ್ನು ಒಮ್ಮೆ ಗಮನಿಸಿ ನೋಡಿ ಅದರಲ್ಲಿ ಟಿ ಎಫ್ ಎಂ ಎಂದು ಬರೆದಿರುತ್ತದೆ, ಕೆಲವು ಸೋಪಿನಲ್ಲಿ ಶೇಕಡಾ 70 ಇದ್ದರೆ ಇನ್ನೂ ಕೆಲವು ಸೋಪೀನಲ್ಲಿ ಶೇಕಡ 67 ಅಥವಾ ಶೇಕಡಾ 82 ಎಂದು ಬರೆದಿರುತ್ತದೆ,ಇದು ಸೋಪಿನ ಗುಣ ಮಟ್ಟವನ್ನು ತಿಳಿಸುತ್ತದೆ.
ಟಿ ಎಫ್ ಎಂ ಎಂದರೆ ಟೋಟಲ್ ಫ್ಯಾಟಿ ಮ್ಯಾಟರ್ ಎಂದರ್ಥ, ಯಾವ ಸೋಪಿನ ಮೇಲೆ ಟಿ ಎಫ್ ಎಂ ಪ್ರಮಾಣ ಕಡಿಮೆ ಇರುತ್ತದೆಯೋ ಅಂತಹ ಸಾಬೂನುಗಳ ಗುಣಮಟ್ಟ ಕಡಿಮೆ ಇರುತ್ತದೆ, ಹಾಗೂ ಗುಣಮಟ್ಟ ಕಡಿಮೆ ಇರುವ ಸಾಬೂನುಗಳು ನಿಮ್ಮ ತ್ವಚೆಗೆ ಹಾನಿ ಯನ್ನು ಸಹ ಉಂಟು ಮಾಡಬಹುದು, ಹಾಗಾದರೆ ಈ ಗುಣಮಟ್ಟವನ್ನು ಕಂಡು ಹಿಡಿಯುವುದು ಹೇಗೆ.
ಟಿಎಂಎಫ್ ಶೇಕಡಾ 76 ಕ್ಕಿಂತ ಅಧಿಕ ಇದ್ದರೆ ಅದು ಗ್ರೇಟ್ ಒನ್ ಪಟ್ಟಕ್ಕೆ ಸೇರುತ್ತದೆ, 70 ರಿಂದ 75 ಶೇಕಡ ಟಿಎಫ್ಎಂ ಇದ್ದರೆ ಅದು ಗ್ರೇಡ್ 2 ಸೋಪು ಗಳು, ಇನ್ನು ಟಿ ಎಂ ಎಫ್ ಶೇಕಡಾ 60 ರಿಂದ 70 ರ ಮಧ್ಯದಲ್ಲಿ ಇದ್ದರೆ ಅವುಗಳನ್ನು ಗ್ರೇಟ್ 3 ಸೋಪು ಗಳು ಎಂದು ಗುರುತಿಸಲಾಗುತ್ತದೆ.
ಇನ್ನು ಮುಂದೆ ನೀವು ನಿಮ್ಮ ಆಯ್ಕೆಯ ಸೋಪುಗಳನ್ನು ಖರೀದಿಸುವ ಮುನ್ನ ದಯಮಾಡಿ ಆ ಸೋಪಿನ ಪ್ಯಾಕೆಟ್ ಮೇಲೆ ಬರೆದಿರುವ ಅದರ ವಿವರಗಳನ್ನು ಒಮ್ಮೆ ಓದಿ ನಂತರ ಆಯ್ಕೆ ಮಾಡಿಕೊಳ್ಳಿ.