ನಮಸ್ತೇ ಆತ್ಮೀಯ ಪ್ರಿಯ ಓದುಗರೇ ಸಿಹಿ ಗೆಣಸು ರುಚಿಕರ ಮತ್ತು ಪುಷ್ಟಿದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಸಿಹಿ ಗೆಣಸು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ ಹೇಳಲಾಗುತ್ತದೆ.
ಸಿಹಿ ಗೆಣಸು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶ ಸಂಭಂದಿಸಿದ ಮತ್ತು ಸಂಧಿವಾತ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಆದರೆ ಇದನ್ನು ಕೆಲವು ಜನರು ಸೇವನೆ ಮಾಡಬಾರದು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಇದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಯಾರೆಲ್ಲ ಸಿಹಿ ಗೆಣಸು ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.
ಸಿಹಿ ಗೆಣಸು ಅಧಿಕ ಪೌಷ್ಠಿಕ ಸತ್ವಗಳನ್ನು ಹೊಂದಿದೆ. ಇದೊಂದು ಬೇರು ತರಕಾರಿ ಆಗಿದ್ದು ಆಕ್ಸಲೇಟ್ ಹೆಚ್ಚು ಹೊಂದಿದೆ. ಇನ್ನೂ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಅಂತೂ ಅಪ್ಪಿ ತಪ್ಪಿಯೂ ಸೇವನೆ ಮಾಡಲು ಹೋಗಬಾರದು. ಅಕ್ಸಿಲೆಟ್ ಕಲ್ಲಿನ ಮೇಲೆ ಭಾರಿ ಪರಿಣಾಮ ಬೀರಿರುತ್ತದ್ದೆ. ಹೀಗಾಗಿ ನೋವು ಕೂಡ ಜಾಸ್ತಿ ಆಗುತ್ತದೆ. ತಜ್ಞರ ಸಲಹೆ ಪ್ರಕಾರ ಕಿಡ್ನಿ ಸ್ಟೋನ್ ಆದವರು ಸೇವನೆ ಮಾಡಬಾರದು ಇದು ಮತ್ತಷ್ಟು ನೋವು ಹೆಚ್ಚು ಮಾಡುತ್ತದೆ.
ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಇರುವುದರಿಂದ ಯಾವುದೇ ತೊಂದರೆ ಆಗದೇ ಇದ್ದರೂ ಹೊಟ್ಟೆಯಲ್ಲಿ ಅಸ್ವಸ್ಥತೆ ಅನ್ನು ಉಂಟು ಮಾಡುತ್ತದೆ. ಅದರಲ್ಲೂ ಹೊಟ್ಟೆ ನೋವು ಇದ್ದವರು ಅಂತೂ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ಇದು ಮತ್ತಷ್ಟು ನೋವು ಹೆಚ್ಚು ಮಾಡುತ್ತದೆ. ಈ ಹೊಟ್ಟೆ ನೋವಿನ ಸಮಸ್ಯೆ ಇದ್ದವರು ಸಿಹಿ ಗೆಣಸು ಸೇವನೆ ಮಾಡಿದರೆ ಅತಿಸಾರ ಹೊಟ್ಟೆ ನೋವು ಉಬ್ಬರ ಅಸಿಡಿಟಿ ಅನುಭವಿಸಬೇಕಾಗುತ್ತದೆ.
ಇನ್ನೂ ಸಿಹಿ ಗೆಣಸು ಸೇವನೆ ಮಾಡುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಒಟ್ಟಾರೆ ಆಗಿ ಹೇಳುವುದಾದರೆ ಸಿಹಿ ಗೆಣಸು ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಆದರೆ ಮಿತವಾಗಿ ಸೇವನೆ ಮಾಡಬೇಕು ರಕ್ತದಲ್ಲಿ ಸಕ್ಕರೆಯ ಮಟ್ಟವೂ ಹೆಚ್ಚಾಗುತ್ತದೆ. ಇದರಲ್ಲಿ ಪೊಟ್ಯಾಶಿಯಂ ಅಂಶ ಇದ್ದು ಇದು ಹೃದಯ ಸಂಭಂದಿ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
ಯಾವುದೇ ಪದಾರ್ಥವನ್ನು ನಾವು ಅತಿಯಾಗಿ ಸೇವನೆ ಮಾಡಿದರೆ ಅದರಿಂದ ನಮಗೆ ಪರಿಣಾಮ ಬೀರುವುದು ನಿಜ. ಹಾಗಾಗಿ ಮಿತವಾಗಿ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಹೈಪರ್ ಕ್ಯಾಲೋರಿ ಜಾಸ್ತಿ ಆಗಿದ್ದು ಹೃದಯಾಘಾತ ಹೆಚ್ಚು ಆಗುವ ಸಾಧ್ಯತೆ ಇರುತ್ತದೆ. ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಅಂಶ ಇರುವುದರಿಂದ ಇದು ವಿಷವಾಗಿ ಪರಿಣಮಿಸುತ್ತದೆ.
ವಿಟಮಿನ್ ಎ ಜಾಸ್ತಿ ಆದರೆ ತುಟಿಗಳು ಒಣಗುತ್ತವೆ. ಕೂದಲು ಉದುರುತ್ತದೆ ತಲೆನೋವು ಶುರು ಆಗುತ್ತದೆ. ಶುಷ್ಕ ಚರ್ಮಕ್ಕೆ ಕಾರಣ ಆಗುತ್ತದೆ. ಹಾಗೆಯೇ ಯಕೃತ್ ಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಈ ಸಮಸ್ಯೆಗಳು ಇರುವವರು ಎಂದಿಗೂ ಸಿಹಿ ಗೆಣಸು ತಿನ್ನಬೇಡಿ. ತಿಂದರೂ ಮಿತವಾಗಿ ಸೇವನೆ ಮಾಡಿ ಶುಭದಿನ.