ಸಾಮಾನ್ಯವಾಗಿ ಎದೆನೋವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಹಾಗಾಗಿ ನಿಮಗೂ ಎದೆ ನೋವಿನ ಸಮಸ್ಯೆ ಇದ್ರೆ ಈ ಕೂಡಲೇ ಇವುಗಳನ್ನು ಪಾಲಿಸಿ ನೋಡಿ ನಿಮ್ಮ ಎದೆ ನೋವು ಕಡಿಮೆಯಾಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.
ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.
ಎಳೆಯ ಸೀಬೆಕಾಯಿಯ ಕಷಾಯವನ್ನು ಸಿದ್ಧಪಡಿಸಬೇಕು. ಇದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.
ಒಂದು ಬಟ್ಟಲು ತಣ್ಣೀರಿಗೆ ನಿಂಬೆರಸವನ್ನು ಸೇರಿಸಿ ಒಂದು ವಾರ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.
ದಾಳಿಂಬೆ ಹಣ್ಣನ್ನು ಸೇವಿಸುತ್ತಿದ್ದರೆ ಕೆಮ್ಮುಸಹಿತ ಉಂಟಾಗುವ ಎದೆನೋವು ಬರುವುದಿಲ್ಲ. ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.