WhatsApp Group Join Now

ಈಗಿನ ಈ ಆಧುನಿಕ ಯುಗದಲ್ಲಿ ಸಿಗರೇಟ್ ಸೇದುವುದು ಒಂದು ಪ್ರತಿಷ್ಠೆಯ ರೀತಿ ತೆಗೆದುಕೊಂಡಿದ್ದಾರೆ ಈಗಿನ ಯುವ ಸಮುದಾಯ. ಅದರಲ್ಲೂ ಟೀ ಜೊತೆ ಸಿಗರೇಟ್ ಸೇದುವುದು ರೂಡಿ ಮಾಡಿಕೊಂಡಿದ್ದಾರೆ. ಈ ಅಭ್ಯಾಸ ಒಳ್ಳೆಯದಲ್ಲ ಎಂದು ಹೇಳುತ್ತಿದೆ ಈ ಸಂಶೋಧನೆ ಯಾಕೆ ಅನ್ನೋದನ್ನ ತಿಳಿಯೋಣ ಬನ್ನಿ.

ಸಿಗರೇಟ್ ಸೇದುವುದನ್ನು ಸ್ನೇಹಿತರ ಜೊತೆ ತಮಾಷೆಗೆಂದು ಮೊದಲು ಶುರು ಮಾಡಿ, ನಂತರ ಸಿಗರೇಟ್ ಒಂದು ಚಟವಾಗಿ ಪರಿಣಮಿಸಿ ಕ್ಯಾನ್ಸರ್ನಂತಹ ದೊಡ್ಡ ಮಾರಕ ರೋಗಕ್ಕೆ ತುತ್ತಾಗುತ್ತಾರೆ. ಅಷ್ಟೇ ಅಲ್ಲದೆ ಉಸಿರಾಟದ ತೊಂದರೆಗಳು ಬರುತ್ತದೆ, ಇನ್ನು ಟೀ ಜೊತೆಗೆ ಸಿಗರೇಟ್ ಸೇದುವ ಅಭ್ಯಾಸವಿದ್ದರೆ ಆರೋಗ್ಯದ ಹಾನಿ ಅಷ್ಟಿಷ್ಟಲ್ಲ.

ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ, ಆದರೆ ಟೀ ಒಟ್ಟಿಗೆ ಸಿಗರೇಟ್ ಅಥವಾ ಬೀಡಿಯನ್ನು ಸೇದುವುದರಿಂದ ಗಂಟಲು ಮತ್ತು ಹೊಟ್ಟೆ ಎರಡಕ್ಕೂ ಸಂಬಂಧಿಸಿದ ರೋಗಗಳು ಬರುತ್ತವೆ ಎಂದು ಹೇಳುತ್ತದೆ ಸಂಶೋಧನೆ. ಕಾರಣ ಸಿಗರೇಟ್ ಜೊತೆಗೆ ಟೀ ಕುಡಿಯುವುದರಿಂದ ಎಸ್ಸೋಫೆಸಲ್ ಎಂಬುವ ಮಾರಣಾಂತಿಕ ಕ್ಯಾನ್ಸರ್ ಬಹುಬೇಗ ನಿಮ್ಮನ್ನು ಆವರಿಸುತ್ತದೆಯಂತೆ. ಅಷ್ಟೇ ಅಲ್ಲದೆ ಟೀ ಜೊತೆಗೆ ಸಿಗರೇಟ್ ಸೇದುವವರಿಗೆ ಈ ಕ್ಯಾನ್ಸರ್ ಐದು ಪಟ್ಟು ಬೇಗನೆ ಬರುತ್ತದೆಯಂತೆ.

ಅಷ್ಟೇ ಜೊತೆಯಲ್ಲಿ ಹೊಟ್ಟೆ ಹಾಗೂ ಗಂಟಲಿನ ಮೇಲೆ ನೇರ ಪರಿಣಾಮ ಬೀರುತ್ತದೆ, ಈ ಕ್ಯಾನ್ಸರ್ ಒಮ್ಮೆ ಬಂದರೆ ಜೀವ ತೆಗೆದು ಬಿಡುತ್ತದೆ, ಬಿಸಿ ಟೀ ಮತ್ತು ಸಿಗರೇಟ್ ಸೇವನೆಯಿಂದ ಟ್ಯೂಮರ್ ನಂತಹ ಸಮಸ್ಯೆಗಳು ಕಾಡುವುದುಂಟು, ಅಷ್ಟೇ ಅಲ್ಲದೆ ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಲ್ ಡೀಹೈಡ್, ಮೆಥಾನಾಲ್, ಆಸಿಟಿಲಿನೆ, ಅಮೋನಿಯಂ ರಾಸಾಯನಿಕಗಳಿರುತ್ತವೆ. ಅವುಗಳಲ್ಲಿದೆ ಧೂಮಪಾನದಲ್ಲಿ ಥಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ವಿಷಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಿ ಕ್ಯಾನ್ಸರ್, ಹೃದಯದಲ್ಲಿ ತೂತು ಇವುಗಳು ಉಂಟಾಗಿ ತುಂಬಾ ನೋವು ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುವುದು. ಎಂದು ಸಂಶೋಧನೆ ತಿಳಿಸಿದೆ.

WhatsApp Group Join Now

Leave a Reply

Your email address will not be published. Required fields are marked *