ನಿದ್ರಾಹೀನತೆ ಸಮಸ್ಯೆ ಎಂದರೆ ನಿದ್ದೆ ಬರದೇ ಇರುವುದು. ನಿದ್ದೆ ಬರದಿದ್ದರೆ ಅಥವಾ ಸರಿಯಾದ ಸಮಯಕ್ಕೆ ನಿದ್ದೆಯಾಗದಿದ್ದರೆ ಅನೇಕ ಆರೋಗ್ಯಕ್ಕೆ ತೊಂದರೆಗಳು ಅಥವಾ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಕೆಲವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು, ನಿದ್ರೆ ಬರಲು ಪ್ರತಿದಿನ ನಿದ್ದೆ ಮಾತ್ರೆಗಳನ್ನು ನುಂಗುತ್ತಾರೆ ಇದರಿಂದ ದೇಹಕ್ಕೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಇಂಗ್ಲಿಷ್ ಮಾತ್ರೆಗನ್ನು ನುಂಗುವ ಬದಲು ಈ ನೈಸರ್ಗಿಕ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ನಿಮ್ಮ ಮನೆಯಲ್ಲೇ ಈ ರೀತಿಯಾದ ಕ್ರಮಗಳನ್ನು ಅನುಸರಿಸಿದರೆ ದೇಹಕ್ಕೆ ಒತ್ತಡ ಖಿನ್ನತೆ ಕಡಿಮೆ ಮಾಡಿಕೊಳ್ಳಬಹುದು ಹಾಗು ಸುಖವಾದ ನಿದ್ರೆ ಮಾಡಲು ಅನುಕೂಲವಾಗುತ್ತದೆ.
ಈ ನಿದ್ರಾಹೀನ ಕಾಯಿಲೆಗೆ ಪರಿಹಾರ ನೀಡುವ ಸುಲಭ ಮಾರ್ಗಗಳಿವು: ಪ್ರತಿದಿನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಮಲಗುವುದರಿಂದ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ, ದೈಹಿಕ ಒತ್ತಡ ಹಾಗು ಮಾನಸಿಕ ಒತ್ತಡ ಕಡಿಮೆಯಾಗುವುದರಿಂದ ರಾತ್ರಿ ನೀವು ಮಲಗುವಾಗ ನಿದ್ದೆ ಚೆನ್ನಾಗಿ ಬರುತ್ತದೆ. ನಿದ್ದೆ ಮಾಡುವುದಕ್ಕೂ ಎರಡು ಗಂಟೆ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಉತ್ತಮ.
ಮಲಗುವ ಮುನ್ನ ಕಾಲಿನ ಪಾದಗಳಿಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ 10 ರಿಂದ 20 ನಿಮಿಷ ಮಸಾಜ್ ಮಾಡಿ ನಂತರ ಮಲಗುವುದರಿಂದ ಒತ್ತಡ ನಿವಾರಣೆಯಾಗಿ ದೇಹ ಹಾಗು ಮನಸ್ಸು ಎರಡು ಕೂಡ ಶಾಂತ ರೀತಿಯಲ್ಲಿರುತ್ತದೆ. ಹಾಗಾಗಿ ಈ ವಿಧಾನ ಕೂಡ ನಿದ್ರಾ ಹೀನತೆಯನ್ನು ದೂರ ಮಾಡಿ ಒಳ್ಳೆಯ ನಿದ್ರೆಯನ್ನು ಕೊಡುತ್ತದೆ.
ನಿದ್ರಾಹೀನತೆ ನಿವಾರಿಸುವ ಮತ್ತೊಂದು ಮನೆ ಮದ್ದು: ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಹಾಲು-ಜೇನುತುಪ್ಪದ ಮಿಶ್ರಣ ನಿದ್ದೆ ಬರಲು ಉತ್ತಮ ಸಂಯೋಜನೆ ಆಗಿದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆ್ಯಸಿಡ್ ನೈಸರ್ಗಿಕವಾಗಿ ನಿದ್ದೆ ಬರಿಸುವ ಮನೆಮದ್ದಾಗಿ ಕೆಲಸ ಮಾಡುತ್ತದೆ.