ಚರ್ಮದ ಕಲೆಗಳು, ತೊನ್ನು ಕಲೆಗಳು, ಮೊಡವೆ, ತುರಿಕಜ್ಜಿ, ಬೆರಳ ಸಿಪ್ಪೆ ಹಾಗೂ ತುರಿಕೆ ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಸಮಸ್ಯೆಗಳಿಂದ ಸಮಸ್ಯೆಗಳಿಂದ ಪಾರಾಗಲು ಇಲ್ಲಿದೆ ನೋಡಿ ಸುಲಭ ಮತ್ತು ಸರಳ ಉಪಾಯ.
ಈ ಚರ್ಮ ಕಾಯಿಲೆ ಯಾವುದಾದರೂ ನಿಮ್ಮನ್ನು ಕಾಡುತ್ತಿದ್ದರೆ ಆಯುರ್ವೇದದಲ್ಲಿ ನ ಒಂದು ಉತ್ತಮವಾದ ಮನೆಯಲ್ಲೇ ತಯಾರಿಸಬಹುದಾದಂತಹ ಔಷಧವನ್ನು ಮಾಡುವುದು ಹೇಗೆ ಎಂಬುದರ ಬಗ್ಗೆ ಎಂದು ತಿಳಿಸಿಕೊಡುತ್ತೇವೆ.
ಬೇಕಾಗುವ ಪದಾರ್ಥಗಳು : ಬೇವಿನ ಸೊಪ್ಪಿನ ಪುಡಿ, ಶುದ್ಧ ಅರಿಶಿನ, ಕಲ್ಲುಪ್ಪು ಹಾಗೂ ಶುದ್ಧ ನೀರು.
ಮಾಡುವ ವಿಧಾನ : ಮೇಲೆ ತಿಳಿಸಿದ ಪದಾರ್ಥಗಳನ್ನು ಒಂದೊಂದರಂತೆ ಬೇವಿನ ಸೊಪ್ಪು 2 ಟೀ ಸ್ಪೂನ್, ಅರಿಶಿಣದ ಪುಡಿ 1 ಟೀ ಸ್ಪೂನ್, ಕಲ್ಲುಪ್ಪು ಅರ್ಧ ಟೀ ಸ್ಪೂನ್ ಇಷ್ಟನ್ನು ನೀರಿನಲ್ಲಿ ಬೆರೆಸಿ ಸ್ವಲ್ಪ ಸಮಯ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ದೇಹದ ಚರ್ಮ ಯಾವ ಭಾಗದಲ್ಲಿ ಸಮಸ್ಯೆಯಿಂದ ನರಳುತ್ತಿರುವ ಅಲ್ಲಿ ಲೇಪನವನ್ನು ಹಚ್ಚಿ ಹಾಗೂ ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಈ ರೀತಿಯಲ್ಲಿ ಹತ್ತರಿಂದ ಹದಿನೈದು ದಿನಗಳವರೆಗೆ ಮಾಡಿದಲ್ಲಿ ಚರ್ಮರೋಗದ ಸಮಸ್ಯೆ ಗುಣವಾಗುತ್ತದೆ.