ನಮಸ್ತೆ ಪ್ರಿಯ ಓದುಗರೇ, ಹಿಂದೆ ಹೆಣ್ಣು ಮಗು ಹುಟ್ಟಿದರೆ ಯಾಕಾದ್ರೂ ಹೆಣ್ಣು ಹುಟ್ಟಿತೋ ಅಂತ ಗೋಗರಿತ ಇದ್ರು, ಆದರೆ ಇಂದಿನ ಕೇಂದ್ರ ಸರ್ಕಾರ ಹೆಣ್ಣು ಮಗುವಿನ ಭ್ರೂಣ ಹತ್ಯೆ ತಡೆಯಲು ವಿಶೇಷವಾಗಿ ಹೆಣ್ಣು ಮಗುವಿನ ಜನನದಿಂದ ಲೇ ಆಕೆಯನ್ನು ಸಬಲಗೊಳಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇಂದಿನ ಲೇಖನದಲ್ಲಿ ಹೆಣ್ಣು ಮಗುವಿನ ಪರವಾಗಿರುವ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ಈ ಯೋಜನೆಯು 2015 ಜನವರಿ 22 ರಂದು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯು ತಮ್ಮ ಹೆಣ್ಣು ಮಗುವಿನ ಭವಿಷ್ಯದ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ನಿಧಿಯನ್ನು ನಿರ್ಮಿಸಲು ಸಿದ್ಧಪಡಿಸಿದ ಯೋಜನೆ ಇದಾಗಿದೆ. ಹಾಗೆ ಪೋಷಕರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ನೀವು ಯಾವುದೇ ಅಧಿಕೃತ ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್ ಶಾಖೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಯಾರು ತೆರೆಯಬಹುದು ಎಂದು ನೋಡುವುದಾದರೆ, ಹೆಣ್ಣು ಮಗುವಿನ ಜನನದಿಂದ ಹತ್ತು ವರ್ಷದ ವಯಸ್ಸಿನ ವರೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಅಥವಾ ಕಾನೂನು ಬದ್ಧ ಪಾಲಕರು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಠೇವಣಿದಾರರು, ಹೆಣ್ಣು ಮಗುವಿನ ಹೆಸರಿನಲ್ಲಿ ಮಾತ್ರ ತೆರೆಯಬಹುದು.
ಹೆಣ್ಣು ಮಗುವಿನ ಪೋಷಕರು ಅಥವಾ ಕಾನೂನು ಬದ್ಧ ಪಾಲಕರಿಗೆ ಎರೆಡು ಹೆಣ್ಣು ಮಕ್ಕಳಿಗೆ ಎರೆಡು ಖಾತೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅವಳಿ ಹೆಣ್ಣು ಮಕ್ಕಳ ಜನನದ ಸನ್ನಿವೇಶದಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಮೂರನೆಯ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯ ಪ್ರಮುಖ ಲಕ್ಷಣಗಳನ್ನು ಹೇಳುವುದಾದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಟ ಠೇವಣಿ ಅಂದರೆ ಡೆಪಾಸಿಟ್ ರೂಪಾಯಿ 250 ಇರಬೇಕು. ಒಂದು ವರ್ಷದಲ್ಲಿ ಠೇವಣಿ ಅಂದರೆ ಡೆಪಾಸಿಟ್ ಇಡಬಹುದಾದ ಗರಿಷ್ಟ ರೂಪಾಯಿ ಪ್ರತಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಒಂದು ವರೆ ಲಕ್ಷ ರೂಪಾಯಿ ಅಂದರೆ 150000/- . ಒಂದು ತಿಂಗಳು ಅಥವಾ ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. ಖಾತೆಯನ್ನು ತೆರೆಯುವ ದಿನಾಂಕದಿಂದ ಪ್ರಾರಂಭಿಸಿ 15 ವರ್ಷ ಪೂರ್ಣಗೊಳ್ಳುವವರೆಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಡೆಪಾಸಿಟ್ ಇಡುವುದನ್ನು ಮುಂದುವರೆಸಬಹುದು. 21 ವರ್ಷಗಳ ಅವಧಿ ಮುಕ್ತಾಯ ಆದ ನಂತರ ಖಾತೆಯ ಮೇಚುರಿಟಿ ಮುಗಿಯುತ್ತೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಾಕಿ ಬಡ್ಡಿ ಸೇರಿದಂತೆ ಹೆಣ್ಣು ಮಗುವಿಗೆ ಅರ್ಜಿ ಮತ್ತು ಗುರುತಿನ ಪುರಾವೆ, ನಿವಾಸ ಮತ್ತು ಪೌರತ್ವದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಅಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳನ್ನು ನೋಡುವುದಾದರೆ, ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಹಾಗೆ ಪೋಷಕರ ಅಥವಾ ಕಾನೂನು ಬದ್ಧ ಪಾಲಕರ ಫೋಟೋ ಐಡಿ, ಪೋಷಕರು ಅಥವಾ ಕಾನೂನು ಬದ್ಧ ಪಾಲಕರ ಅಡ್ರೆಸ್ಸ್ ಪ್ರೂಫ್, ಮಗು ಮತ್ತು ಪೋಷಕರ ಛಾಯಾಚಿತ್ರ. ನಂತರ ಫಾರ್ಮಾಗಳನ್ನು ಭರ್ತಿ ಮಾಡಿ, ಫೋಟೋಗಳೊಂದಿಗೆ, ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸಿ. ಅಷ್ಟೇ, ನಿಮ್ಮ ಹೆಣ್ಣು ಮಗು 21 ವರ್ಷ ಆಗುವಷ್ಟಾರಲ್ಲಿ ಹಣ ನಿಮ್ಮ ಕೈಗೆ ಸಿಗುತ್ತೆ, ಆ ಹಣದಿಂದ ನಿಮ್ಮ ಹೆಣ್ಣು ಮಗುವನ್ನು ಮುಂದಿನ ಉನ್ನತ ವ್ಯಾಸಂಗಕ್ಕೆ ಅಥವಾ ಅವಳ ಮದುವೆಯ ಸಲುವಾಗಿ ಬಳಸಿಕೊಳ್ಳಬಹುದು. ನೋಡಿದಿರಲ್ಲಾ ಸ್ನೇಹಿತರೆ ಈ ಯೋಜನೆ ಹೆಣ್ಣು ಮಕ್ಕಳನ್ನು ಯಾವ ರೀತಿ ಆರ್ಥಿಕವಾಗಿ ಸದೃಢಗೊಳಿಸುತ್ತೆ ಅಂತ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.