WhatsApp Group Join Now

ಮುಸುಕಿನ ಜೋಳದ ತರಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ದೇಹಕ್ಕೆ ಪ್ರತಿದಿನ ಅಗತ್ಯವಿರುವ ನಾರಿನಾಂಶವನ್ನು ಪೂರೈಸುತ್ತದೆ. ಒಂದು ಕಪ್ ಹೋಮಿನಿಯಲ್ಲಿ 4 ಗ್ರಾಂ ನಷ್ಟು ನಾರಿನಂಶವಿದ್ದು, ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ರಕ್ತ ಸಂಚಾರವನ್ನು ನಿಯಂತ್ರಣದಲ್ಲಿರಿಸುತ್ತದೆ. ಜೊತೆಗೆ ಮಧುಮೇಹ ಹಾಗೂ ಕೊಬ್ಬನ್ನೂ ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ದೇಹ ತೂಕವನ್ನೂ ಕಾಯ್ದುಕೊಳ್ಳಬಹುದು.

ಮುಸುಕಿನ ಜೋಳದ ತರಿಯಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಬಿ, ನಮ್ಮ ದೇಹವನ್ನು ಲವಲವಿಕೆಯಿಂದ ಇರಿಸುತ್ತದೆ. ಹಾಗೂ ದೇಹದಲ್ಲಿ ಕೆಂಪು ರಕ್ತ ಕಣ ಉತ್ಪತ್ತಿಯಾಗಲು ನೆರವಾಗುತ್ತದೆ. ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗುವ ರೋಗಗಳನ್ನು ಇದು ತಡೆಯುತ್ತದೆ.ಅಲ್ಲದೇ ಇದರಲ್ಲಿ ಕ್ಯಾಲರಿ ಅಂಶ ಕಡಿಮೆಯಿದೆ ಎನ್ನುವುದು ಅತ್ಯಂತ ಗಮನಾರ್ಹ. ಆದ್ದರಿಂದ ಇದರ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಭಯ ಬೇಡ.

ಇದು ಚರ್ಮದ ಅಲರ್ಜಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಅಲರ್ಜಿ,ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡಾಗ ಇದನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿ ಹೆಚ್ಚಿಯ ಫೈಬರ್ ಅಂಶ ಇದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆಗಳನ್ನು ಸಹ ನಿವಾರಣೆ ಮಾಡುತ್ತದೆ.

ಗ್ಲುಟೆನ್ ಮುಕ್ತ ಆಹಾರ ಸೇವಿಸುವವರಿಗೆ ಮುಸುಕಿನ ಜೋಳ ಸೂಕ್ತ ಆಯ್ಕೆಯಾಗಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಕಾರ್ಬೊಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ತುಂಬುತ್ತವೆ. ವಿಟಾಮಿನ್ ಬಿ12 ಮತ್ತು ಫಾಲಿಕ್ ಆಸಿಡ್ ಕಡಿಮೆ ಆಗುವುದರಿಂದ ಅನಿಮಿಯಾ ಸಮಸ್ಯೆ ಕಾಡುತ್ತದೆ. ಈ ಸಮಯದಲ್ಲಿ ನೀವು ಜೋಳ ಸೇವನೆ ಮಾಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.

ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚುತ್ತವೆ. ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವುದರ ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂಧು ತಜ್ಞರು ಹೇಳುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *