WhatsApp Group Join Now

ಕನಸುಗಳು ಬಿದ್ರೆ ಅವು ಶುಭ ಅಶುಭವನ್ನು ಸೂಚಿಸುತ್ತದೆ ಎಂಬುದಾಗಿ ಶಾಸ್ತ್ರಗಳು ಹಾಗು ಹಿರಿಯರು ಹೇಳುತ್ತಾರೆ. ನಿಮ್ಮ ಕನಸಿನಲ್ಲಿ ಹಸು ಕಾಣಿಸಿಕೊಂಡರೆ ಅದು ಏನನ್ನು ಸೂಚಿಸುತ್ತದೆ ಹಾಗು ಯಾವ ರೀತಿಯ ಹಸುಗಳು ಕಂಡ್ರೆ ಅದಕ್ಕೆ ಏನು ಅರ್ಥ ಅನ್ನೋದನ್ನ ತಿಳಿಯೋಣ ಬನ್ನಿ.

ನಿಮ್ಮ ಕನಸಿನಲ್ಲಿ ಹಸು ಬಂದ್ರೆ ನಿಮ್ಮ ಪಾಲಿಗೆ ಅದೃಷ್ಟ ಲಕ್ಷ್ಮಿ ಒಲೆದು ಬರುತ್ತಾಳೆ, ಎಂಬುದಾಗಿ ಹೇಳಲಾಗುತ್ತದೆ. ಹಸುವನ್ನು ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪೂಜಿಸುವ ಕಾರಣ, ಗೋಮಾತೆಯನ್ನು ದೇವರ ರೂಪದಲ್ಲಿ ಕಾಣಲಾಗುತ್ತದೆ. ಗೋವು ಮನುಷ್ಯನಿಗೆ ಅತಿ ಹೆಚ್ಚು ಸಹಕಾರಿಯಾಗಿದೆ.

ನಿಮ್ಮ ಕನಸಿನಲ್ಲಿ ದೊಡ್ಡ ಹಸು ಕಾಣಿಸಿ ಕೊಂಡ್ರೆ ನೀವು ಹಲವು ರೋಗಗಳಿಂದ ಬೇಗನೆ ಗುಣಮುಖರಾಗುತ್ತೀರಿ ಎಂದರ್ಥ ನಿಮ್ಮ ಕನಸಿನಲ್ಲಿ ಶಾಂತವಾಗಿ ನಿಂತಿರುವಂತ ಹಸು ಕಾಣಿಸಿ ಕೊಂಡ್ರೆ ನಿಮ್ಮ ಬಹುದಿನದ ಕನಸು ಹಿಡೇರುತ್ತದೆ, ಜೊತೆಗೆ ನಿಮ್ಮ ಪಾಲಿಗೆ ಸುಖಕರವಾದ ದಿನಗಳು ಬರುತ್ತಿವೆ ಎಂಬುದನ್ನು ಸೂಚಿಸುತ್ತದೆ.

ನಿಮ್ಮ ಕನಸಿನಲ್ಲಿ ಹಸು ಕರು ಹಾಕುವ ರೀತಿಯಲ್ಲಿ ಬಂದ್ರೆ ನಿಮ್ಮ ಮನೆಯಲ್ಲಿ ಮಕ್ಕಳನ್ನು ಕಾಣುವ ಭಾಗ್ಯ ಬೇಗನೆ ಬರಲಿದೆ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕನಸಿನಲ್ಲಿ ಹಸು ಹಾಗು ಕರು ಒಟ್ಟಿಗೆ ಕಂಡ್ರೆ ನೀವು ದಾಂಪತ್ಯ ಜೀವನವನ್ನು ಬಯಸುತ್ತಿದ್ದೀರಿ ಎಂಬುದಾಗಿ ಸೂಚಿಸುತ್ತದೆ.

ನಿಮ್ಮ ಕನಸಿನಲ್ಲಿ ಹಸುವಿನ ಹಾಲು ಕರೆಯುವ ರೀತಿ ಕನಸು ಬಿದ್ರೆ ನೀವು ತಾಯಿ ಆಗುವ ಶುಭಗಳಿಗೆ ಬೇಗನೆ ಬರಲಿದೆ ಎಂಬುದಾಗಿ ಸೂಚಿಸುತ್ತದೆ. ಒಟ್ಟಾರೆಯಾಗಿ ಹಸು ನಿಮ್ಮ ಕನಸಿನಲ್ಲಿ ಈ ರೀತಿಯಾಗಿ ಬಂದ್ರೆ ಅದು ಶುಭವನ್ನು ಸೂಚಿಸುವುದರ ಸಂಕೇತವಾಗಿದೆ ಎಂಬುದಾಗಿ ಶಾಸ್ತ್ರಗಳು ಹಾಗು ನಮ್ಮ ಪೂರ್ವಿಕರು ಹೇಳುತ್ತಾರೆ.

ನಿಮ್ಮ ಕನಸಿನಲ್ಲಿ ಹಸು ಸತ್ತಿರುವ ರೀತಿಯಲ್ಲಿ ಕನಸು ಬಿದ್ರೆ ನಿಮಗೆ ಕಷ್ಟಗಳು ಕಾದಿವೆ, ಹಾಗು ನಿಮ್ಮ ಗ್ರಹಚಾರ ಕೆಟ್ಟದಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಯಲಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *