ಒಂದು ಜಮೀನಿಗೆ ಹೋಗಲು ದಾರಿ ಪಡೆಯಲು ಏನೇನು ಮಾಡಬೇಕು ಎನ್ನುವುದು ಯಾವುದೇ ಒಂದು ಜಮೀನಿಗೆ ಹೋಗಲು ಬಂಡಿ ದಾರಿಯಾಗಬಹುದು ಕಾಲುದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ನಾಗರಿಕರು ಅಂದರೆ ರೈತರು ಏನು ಮಾಡಬೇಕು ಹೊಸದಾಗಿ ದಾರಿ ಸೃಷ್ಟಿಸಲು ಏನು ಮಾಡಬೇಕು ದೂರನ್ನು ಎಲಿ ಸಲ್ಲಿಸಬೇಕು ಅದಕ್ಕೆ ಬೇಕಾಗುವ ದಾಖಲಾತಿಗಳು ಏನು ಸಿಗಬಹುದಾದ ಪರಿಹಾರ ಮಾರ್ಗಗಳು ಯಾವುವು ಜಮೀನಿಗೆ ಕಾಲುದಾರಿ ಮತ್ತು ಬಂಡಿದಾರಿ ಬಗ್ಗೆ ತಿಳಿದುಕೊಳ್ಳಲು ಒಂದು ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ.
ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಅವರಿಗೂ ಸಹ ಇದರಿಂದ ಉಪಯೋಗವಾಗಬಹುದು ಕರ್ನಾಟಕ ರಾಜ್ಯ ಭೂಕಂದಾಯ ಕಾಯ್ದೆ ಪ್ರಕಾರ ಸಾಮಾನ್ಯವಾಗಿ ಯಾವುದೇ ಒಂದು ಜಮೀನಿಗೆ ಹೋಗಿ ಬರಲು ಖಚಿತವಾಗಿ ದಾರಿ ಇದ್ದೇ ಇರುತ್ತದೆ ಎಂದು ನಾವು ಮನಗಣನೆ ಮಾಡಬೇಕು ನಿಯಮದಲ್ಲಿ ನೋಡುವುದಾದರೆ ದಾರಿ ಇಲ್ಲದ ಜಮೀನು ಇಲ್ಲವೇ ಇಲ್ಲ ಎಂದು ಹೇಳಬಹುದು ಅನೇಕ ತಪ್ಪುಗಳಿಂದ ಇವತ್ತಿನ ಕಾಲದಲ್ಲಿ ಜಮೀನಿಗೆ ಹೋಗಲು ದಾರಿ ಎಂದರೆ ರಸ್ತೆ ಬಗ್ಗೆ ದೊಡ್ಡ ಸಮಸ್ಯೆಯಾಗಿ ಉದ್ಭವವಾಗಿ ರೈತರಿಗೆ ಬಹಳ ತಲೆನೋವು ಆಗಿದೆ.
ಕೆಲವು ಜಮೀನುಗಳಿಗೆ ಅಧಿಕೃತ ದಾರಿ ಇಲ್ಲದೆ ರೈತರು ಮಾಡಬೇಕಾದ ಕೆಲಸ ಯಾವುದು ಎಂದರೆ ಪಕ್ಕದ ಜಮೀನಿನ ಮಾಲೀಕರ ಜೊತೆ ಪರಸ್ಪರ ಮಾತುಕತೆ ಮೂಲಕ ಬಂಡಿ ದಾರಿ ಮತ್ತು ಕಾಲುದಾರಿ ಬಗ್ಗೆ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನ ಪಡಬೇಕು ಮೊದಲು ಮಾತುಕತೆ ಮೂಲಕ ಬಗೆಹರಿಯದಿದ್ದ ಪಕ್ಷದಲ್ಲಿ ರೈತರು ಏನು ಮಾಡಬೇಕು ಅನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ ರೈತರಿಗೆ ನ್ಯಾಯ ಬದ್ಧ ರೀತಿ ಅನುಸರಿಸಿ ನಿಮ್ಮ ಹಕ್ಕು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ ಕಾಯ್ದೆ ಪ್ರಕಾರ ಅಂದರೆ ಕಿಸಾನ್ ಕಾಯ್ದೆ ಪ್ರಕಾರ.
ನಿಮ್ಮ ಹೊಲಕ್ಕೆ ದಾರಿ ಸೃಷ್ಟಿಸಲು ಅವಕಾಶವಿದೆ ಈ ಹಕ್ಕನ್ನು ಪಡೆಯಲು ಮುಖ್ಯವಾಗಿ ಏನೇನು ದಾಖಲೆಗಳು ಸಲ್ಲಿಸಬೇಕು ಏನೇನು ದಾಖಲಾತಿಗಳು ರೆಡಿ ಮಾಡಿಕೊಳ್ಳಬೇಕು. ಒಂದು ದಾಗಿ ನೋಡೋಣ ಮೊದಲನೆಯದು ನಿಮ್ಮ ಪೂರ್ಣ ಸರವೆಯ ನಂಬರ್ ದಿನ ನಕ್ಷೆ ಸರ್ವೆ ನಕ್ಷೆಗಳು ಸರ್ವೆ ಇಲಾಖೆ ಮೂಲಕ ನೀವು ತೆಗೆದುಕೊಳ್ಳಬಹುದು ಎರಡನೆಯದು ನಿಮ್ಮ ಸರ್ವೆ ನಂಬರಿನ ಆಜು ಬಾಜು ನಾಲ್ಕು ದಿಕ್ಕುಗಳಿಂದ ನಕ್ಷೆ, ಮೂರನೆಯದು ನಿಮ್ಮ ಸರ್ವೇ ನಂಬರ್ ನ ಕಾಲಕಾಲಕ್ಕೆ ಆದ ಟಿಪ್ಪಣಿಗಳು ನಾಲ್ಕನೆಯದು ಪಹಣಿ ಮತ್ತು ಆಧಾರ್ ಕಾರ್ಡ್ ಬೇಕಾಗುತ್ತದೆ ಆರನೆಯದು ತಾಲೂಕು ಸರ್ವೆಯಿಂದ ನಿಮ್ಮ ಜಮೀನಿಗೆ ದಾರಿ ಇಲ್ಲ ಎನ್ನುವ ಪ್ರಮಾಣ ಪತ್ರ ಪಡೆಯುವುದು ಮುಖ್ಯವಾಗಿರುತ್ತದೆ ಅಂತ ಹೇಳಬಹುದು.
ಈ ಎಲ್ಲಾ ಅರ್ಜಿಗಳನ್ನು ನೀವು ತೆಗೆದುಕೊಂಡು ಎಲ್ಲಿ ಸಲ್ಲಿಸಬೇಕು ಎಂದರೆ DDLR ಕಚೇರಿಗೆ ಹೋಗಿ ಸಲ್ಲಿಸಬೇಕು ಇದಾದ ಮೇಲೆ ಅವರು ಕಾನೂನಿನ ಮೂಲಕವಾಗಿ ನಿಮಗೆ ದಾರಿಯನ್ನು ಮಾಡಿಕೊಡುತ್ತಾರೆ. ಈ ಒಂದು ದಾರಿಯನ್ನು ಮಾಡಿಕೊಡಲು ಮೊದಲು ಅವರು ನಿಮ್ಮ ಜಮೀನಿಗೆ ಬಂದು ಸರ್ವೆಯನ್ನು ಮಾಡಿ ತದನಂತರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತಾರೆ ನೀವು ನೀಡಿದ ಎಲ್ಲಾ ಅರ್ಜಿಗಳು ಸರಿಯಾಗಿ ಇದ್ದವು ಎಂದರೆ ಯಾವುದೇ ರೀತಿಯಾದಂತಹ ಸಮಸ್ಯೆ ಎದುರಾಗದೆ ಸಲೀಸಾಗಿ ನಿಮಗೆ ದಾರಿ ಸಿಗುತ್ತದೆ.