ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ದಿನಗಟ್ಟಲೆ, ತಿಂಗಳುಗಟ್ಟಲೆ ನಾಡಕಛೇರಿ ಬಳಿ ಅಳೆಯುತ್ತಿರುತ್ತೀರಾ, ಆದರೆ ಆ ಚಿಂತೆ ಬೇಡ ಕುಳಿತಲ್ಲೇ ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ತೆಗೆದುಕೊಳ್ಳಬಹುದು ಅದು ಹೇಗೆ ಗೊತ್ತಾ ಮುಂದೆ ಓದಿ.
ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
ನಿಮ್ಮ ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಮಯದ ಉಳಿತಾಯವಾಗುತ್ತದೆ.
ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಗಳಲ್ಲಿ ರೂ 25 ಶುಲ್ಕವನ್ನು ಪಾವತಿಸಿ ಪಡೆಯಬೇಕಾಗುತ್ತದೆ.
ಹಾಗಾದರೆ ಹೇಗೆ ಪಡೆಯುವುದು.?: ಮೊದಲು nadakacheri.karnataka.gov.in ಗೆ ಭೇಟಿ ನೀಡಿ. ಅಲ್ಲಿ ಮೇಲ್ಭಾಗದ ಎಡಗಡೆ ಕಾಣಿಸುವ ಮೂರೂ ಗೆರೆ ಇರುವ home ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಆನ್ಲೈನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ, ಮೇಲೆ ಕಾಣಿಸುವ ನವ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ಆಗ ಆಯ್ಕೆಗಳು ಬರುತ್ತವೆ. ಆಗ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
ಜಾತಿ ಮತ್ತು ಆದಾಯ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ. ಅಲ್ಲಿ ಕೇಳುವ ಮಾಹಿತಿಯನ್ನು ಸರಿಯಾಗಿ ಭಾರ್ತಿ ಮಾಡಿ. ನಂತರ ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆಯನ್ನು ಆಯ್ದುಕೊಂಡು ನಂತರ ಪರಿಶೀಲಿಸಿ. ನೀವು ಆಯ್ದುಕೊಂಡ ಪ್ರಮಾಣ ಪತ್ರ ಬೇಕಿದ್ದಲ್ಲಿ ಕೆಳಗೆ ಕಾಣಿಸುವ ಪೆ service fee ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದ ನಂತರ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಪ್ರಿಂಟ್ ಪಡೆಯಬಹುದು.
ನೆನಪಿರಲಿ: ಈ ಆನ್ಲೈನ್ ಅಪ್ಲಿಕೇಶನ್ ಹಾಕುವಾಗ ಪ್ರಿಂಟರ್ ಸಂಪರ್ಕವಿರುವ ಗಣಕಯಂತ್ರ ಉಪಯೋಗಿಸುವುದು ಒಳ್ಳೆಯದು.