ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಅದು ಗ್ಯಾಸ್ಟ್ರಿಕ್. ಹೊತ್ತಿಗೆ ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು, ಹೊರಗಿನ ಫಾಸ್ಟ್ ಫುಡ್ ಸೇವನೆಯಿಂದ, ಕರಿದ ತಿಂಡಿಗಳು, ಖಾರದ ತಿಂಡಿಗಳ ಸೇವನೆಯಿಂದ ಹೀಗೆ ಮುಂತಾದ ಕಾರಣಗಳಿಂದ ಗ್ಯಾಸ್ಟ್ರಿಕ್ ಬರಿಸಿಕೊಂಡು ಒದ್ದಾಡುತ್ತಾ ಇರುತ್ತಾರೆ. ಎಷ್ಟೋ ಔಷಧಿಯನ್ನು ಸೇವನೆ ಮಾಡುತ್ತಾ ಇದ್ದರೂ ಈ ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುವುದಿಲ್ಲ. ಈಗಂತೂ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಬೆಂಬಿಡದೆ ಕಾಡುತ್ತಿದೆ. ನಾವು ಇಷ್ಟ ಪಟ್ಟು ತಿನ್ನುವ ಯಾವುದೇ ಆಹಾರ ಇಂದು ನಮಗೆ ಗ್ಯಾಸ್ಟಿಕ್ ಸಮಸ್ಯೆಯನ್ನು ಉಂಟು ಮಾಡುವ ಹಂತಕ್ಕೆ ತಲುಪಿದೆ. ಹಾಗಾಗಿ ಯಾವುದನ್ನು ತಿನ್ನಬೇಕು ಯಾವುದನ್ನು ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಅನಾರೋಗ್ಯಕರ ಆಹಾರವನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಇಂದು ನಮ್ಮ ಸಂಪ್ರದಾಯವಾಗಿಬಿಟ್ಟಿದೆ. ಆದರೆ ಪ್ರತಿ ಬಾರಿ ಗ್ಯಾಸ್ಟಿಕ್ ಉಂಟಾದಾಗಲೂ ನಾವು ಔಷಧಿಗಳು ತೆಗೆದುಕೊಳ್ಳಲು ಅಥವಾ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ವೈದ್ಯರು ಕೂಡ ಗ್ಯಾಸ್ಟಿಕ್ ಸಂಬಂಧಿತ ಔಷಧಿಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು ಎಂದು ಔಷಧಿ ಕೊಡುವ ಮೊದಲೇ ಹೇಳುತ್ತಾರೆ.

ಹಾಗಾಗಿ ನಮ್ಮ ಜೀವನ ಶೈಲಿಯಲ್ಲಿ ನಾವೇ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹತೋಟಿಗೆ ಇಡುವ ಏಕೈಕ ದಾರಿ ಎಂದರೆ ತಿನ್ನುವ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಹೊಟ್ಟೆಗೆ ಕಷ್ಟ ಕೊಡುವ ಆಹಾರದಿಂದ ದೂರ ಇರುವುದು. ಇಂದಿನ ಲೇಖನದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಯಾವ ಆಹಾರವನ್ನು ಮಿತಿಯಾಗೀ ತಿಂದ್ರೆ ಒಳ್ಳೆಯದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಬರೋಣ ಸ್ನೇಹಿತರೆ. ಮೊದಲನೆಯದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಗೂ ಬಟಾಣಿಯನ್ನು ಅತಿಯಾಗಿ ಸೇವನೆ ಮಾಡಬಾರದು. ಈ ಆಹಾರಗಳನ್ನು ಮೀಠಿಯಾಗಿ ತಿಂದರೆ ಒಳ್ಳೆಯದು ಏಕೆಂದರೆ ಬೆಳ್ಳುಳ್ಳಿಯಲ್ಲಿ ಪ್ರೋಕೋಷ್ ಕಣಗಳು ಇರುವುದರಿಂದ ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಈರುಳ್ಳಿ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇನ್ನೂ ಬಟಾಣಿ, ಅಜೀರ್ಣ ಸಮಸ್ಯೆ ಇರುವವರು ಬಟಾಣಿಯನ್ನು ತಿನ್ನದೇ ಇರುವುದು ಒಳ್ಳೆಯದು.

ಇನ್ನೂ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಪ್ರತಿನಿತ್ಯ ಊಟಾ ಧಲ್ಲಿ ಉಪ್ಪಿನಕಾಯಿಯನ್ನು ತಿನ್ನುತ್ತಾ ಇದ್ದರೆ ಇದನ್ನು ಮಿತವಾಗಿ ತಿನ್ನುವುದು ಒಳ್ಳೆಯದು. ಉಪ್ಪಿನಕಾಯಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಜ್ ಗೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಮಸಾಲೆ ಪದಾರ್ಥಗಳ, ಕರಿದ ತಿಂಡಿಗಳು, ಫಾಸ್ಟ್ ಫುಡ್ ಗಳು ಇವುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಹಾಗೂ ಅತಿಯಾದ ಹಾಲಿನ ಪದಾರ್ಥ ಸೇವನೆ ಅಂತಹ ಮಿಲ್ಕ್ ಶೇಕ್, ಐಸ್ ಕ್ರೀಮ್ ಇವುಗಳ ಸೇವನೆಯಿಂದ ಅಸಿಡಿಟಿ ಹೆಚ್ಚಾಗುತ್ತದೆ. ಹಾಗಾಗಿ ಇವುಗಳನ್ನು ಮಿತೀಯಾಗಿ ತಿಂದರೆ ಒಳ್ಳೆಯದು. ಇನ್ನೂ ಆಲ್ಕೋಹಾಲ್ ಸೇವನೆ ಮಾಡಬಾರದು ಮತ್ತು ಮಾಂಸಾಹಾರವನ್ನು ಕಡಿಮೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅಸಿಡಿಟಿ ಇರುವವರು ಹೊಟ್ಟೆ ತುಂಬಾ ತಿನ್ನಬಾರದು. ಹೆಚ್ಚು ತಿಂದರೆ ಅರಗಿಸಿಕೊಳ್ಳಲು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಮಿತವಾಗಿ ತಿನ್ನಬೇಕು. ಆಹಾರದಲ್ಲಿ ತರಕಾರಿ ಮತ್ತು ನಾರಿನ ಅಂಶ ಇರುವ ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಬೇಕು. ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಪ್ರತಿನಿತ್ಯ ಸರಿಯಾಗಿ ಅವರವರ ದೇಹಕ್ಕೆ ಅನುಗುಣವಾಗಿ ಅಗತ್ಯವಿರುವಷ್ಟು ನೀರನ್ನು ಕುಡಿಯಬೇಕು. ಇಂದಿನ ಲೇಖನದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *