ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ರುಚಿಕರವಾಗಿರುವ ಅಂತಹ ಪ್ರೋಟಿನ್ ಲಡ್ಡು ವನ್ನು ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತೇವೆ. ಈ ಲಡ್ಡು ವನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ತಿನ್ನಬಹುದು. ಅಷ್ಟು ರುಚಿಯಾಗಿರುತ್ತದೆ ಹಾಗೇನೆ ಇದನ್ನು ಸೇವನೆ ಮಾಡುವುದರಿಂದ ನಿಶಕ್ತಿ ಕೂಡ ಕಡಿಮೆಯಾಗುತ್ತದೆ ಮತ್ತು ಚಿಕ್ಕ ಮಕ್ಕಳು ಇದನ್ನು ಸೇವನೆ ಮಾಡುವುದರಿಂದ ಅವರ ವೇಟ್ ಕೇಕುಡ ಸಹಾಯವಾಗುತ್ತದೆ. ಜೊತೆಗೆ ಅವರಿಗೆ ಉತ್ತಮವಾದ ಪೌಷ್ಟಿಕಾಂಶಗಳು ಕೂಡ ಸಿಗುತ್ತದೆ. ಹಾಗಾದರೆ ಬನ್ನಿ ಲಡ್ಡು ವನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ.
ಮೊದಲನೇದಾಗಿ ಲಡ್ಡು ವನ್ನು ಮಾಡುವನು ಯಾವೆಲ್ಲಾ ರೀತಿಯ ಪದಾರ್ಥಗಳನ್ನು ಬೇಕಾಗುತ್ತದೆ ಎನ್ನುವುದನ್ನು ನೋಡುವುದಾದರೆ 5gram ಅಷ್ಟು ಬಡವರ ಬಾದಾಮಿ ಎಂದು ಪ್ರಸಿದ್ಧವಾಗಿರುವ ಅಂತಹ ಶೇಂಗಾವನ್ನು ತೆಗೆದುಕೊಂಡಿದ್ದೇನೆ. ಹಾಗೂ 150ಗ್ರಾಂ ಅಷ್ಟು ಎಲ್ಲಾ ರೀತಿಯಾಗಿ ಮಿಕ್ಸ್ ಆಗಿರುವಂತಹ ಡ್ರೈ ಫುಡ್ಸ್ ಗಳನ್ನು ತೆಗೆದುಕೊಂಡಿದ್ದೇನೆ. ಹಾಗೂ ರುಚಿಗೆ ತಕ್ಕಷ್ಟು ಬೆಲ್ಲವನ್ನು ಕೂಡ ತೆಗೆದುಕೊಂಡಿದ್ದೇವೆ. ಈ ಲಡ್ಡು ವನ್ನು ಮಾಡಲು ಮೊದಲು ನೀವು ಶೇಂಗಾವನ್ನು ಹುರಿದುಕೊಳ್ಳಬೇಕು ನಂತರ ಡ್ರೈ ಫುಡ್ ಗಳನ್ನು ಕೂಡ ಲೈಟಾಗಿ ಹುರಿದುಕೊಳ್ಳಬೇಕು. ನಂತರ ಅವರು ಇರುವಂತಹ ಶೇಂಗಾದ ಸಿಪ್ಪೆಯನ್ನು ಬಿಡಿಸಬೇಕು. ನಂತರ ಸಿಪ್ಪೆ ಬಿಡಿಸಿದ ನಂತರ ಶೇಂಗಾವನ್ನು ಮಿಕ್ಸಿಗೆ ಹಾಕಿಕೊಂಡು ಪೌಡರ್ ಮಾಡಿ.
ಅದೇ ರೀತಿಯಾಗಿ ಡ್ರೈ ಫುಡ್ ಗಳನ್ನು ಕೂಡ ಮಿಕ್ಸಿಗೆ ಹಾಕಿ ಪೌಡರ್ ಮಾಡಿ. ನಂತರ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಈಗ ಬೆಲ್ಲವನ್ನು ಕೂಡ ಸೇರಿಸಿ ಮಿಕ್ಸ್ ಮಾಡಿ. ಬೆಲ್ಲವನ್ನು ಸೇರಿಸಿದ ನಂತರ ಮತ್ತೆ ಮಿಕ್ಸಿ ಮಾಡಿ. ಇದು ಈಗ ಉಂಡೆ ಕಟ್ಟುವ ಹದಕ್ಕೆ ಬರುತ್ತದೆ. ಇದನ್ನು ಈಗ ಸುಲಭವಾಗಿ ಉಂಡೆ ಕಟ್ಟಬಹುದು. ನೋಡಿ ಈ ರೀತಿಯಾಗಿ ಉಂಡೆಗಳು ಕಾಣುತ್ತವೆ. ಹೊರಗೆ ಇರುವಂತಹ ಸ್ವೀಟನ್ನು ಮನೆಗೆ ತಂದು ತಿನ್ನುವ ಬದಲು ಈ ರೀತಿಯಾಗಿ ಹೆಲ್ತಿ ಆಗಿ ಮನೆಯಲ್ಲಿ ಸ್ವೀಟ್ ತಯಾರಿ ಮಾಡಿ ತಿಂದರೆ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.