WhatsApp Group Join Now

ಡಿಜಿಟಲ್ ಯುಗದಲ್ಲಿ ನಾವು ತುಂಬಾ ಬೆಲೆಬಾಳುವ ಮೊಬೈಲ್ ಫೋನ್ ಅನ್ನು ಇಟ್ಟುಕೊಂಡಿದ್ದೇವೆ. ಆದರೆ ಕೆಲವೊಮ್ಮೆ ಕಳೆದು ಹೋಗುತ್ತವೆ. ಆದರೆ ಅವು ಕಳೆದು ಹೋದಾಗ ಅವನ್ನು ಮರಳಿ ಪಡೆಯಲು ಕೆಲವೊಮ್ಮೆ ಸಾದ್ಯವಾಗವುದಿಲ್ಲ.

ಆದರೆ ಇನ್ನು ಮುಂದೆ ಬೆಲೆಬಾಳುವಂತ ವಸ್ತುಗಳು ಏನಾದರು ಕಳೆದು ಹೋಗಿದ್ದರೆ ಚಿಂತಿಸುವ ಅಗತ್ಯವಿಲ್ಲ, ಪೊಲೀಸ್ ಇಲಾಖೆಯ ಈ ಆಪ್ ಮೂಲಕ ಮರಳಿ ಪಡೆಯಬಹುದು ಅದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಮೊಬೈಲ್, ಲ್ಯಾಪ್ ಟಾಪ್ ಮುಂತಾದ ಬೆಲೆ ಬಾಳುವ ವಸ್ತುಗಳು ಕಳೆದುಕೊಳ್ಳುವುದು ಸಹಜವಾಗಿದೆ, ಕೆಲವರು ಇವುಗಳ ಬಗ್ಗೆ ದೂರು ನೀಡದೆ ಸುಮ್ಮನಾಗುತ್ತಾರೆ. ಇನ್ನುಮುಂದೆ ಈ ವಸ್ತುಗಳು ಕಳೆದುಕೊಂಡಿದ್ದರೆ ಪೊಲೀಸ್ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಪೊಲೀಸ್ ಇಲಾಖೆ ಮಹತ್ವದ app ಒಂದನ್ನು ಬಿಡುಗಡೆ ಮಾಡಿದೆ, ಈ app ಮೂಲಕ ದೂರು ದಾಖಲಿಸಬಹುದು.

ಪೊಲೀಸ್ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಈ ಯೋಜನೆಯೊಂದನ್ನು ಆರಂಭಿಸಿದೆ. ಹೀಗಾಗಲೇ ಈ ಆ್ಯಪ್ ಅನ್ನು ಸುಮಾರು 50 ಸಾವಿರ ಕ್ಕೂ ಹೆಚ್ಚು ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಹೆಚ್ಚು ಮೊಬೈಲ್ ಹಾಗು ಲ್ಯಾಪ್ ಟಾಪ್ ಮುಂತಾದ ಬೆಲೆಬಾಳುವ ವಸ್ತುಗಳ ದೂರು ದಾಖಲಾಗಿವೆ. ಈ ಆ್ಯಪ್ ಮೂಲಕ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಕಳೆದುಕೊಂಡ ಫೋನ್ ಗಳು ತಮ್ಮ ಮಾಲೀಕರ ಕೈ ಸೇರಿವೆ. ಹಾಗಾಗಿ ನೀವು ಕೂಡ ದೂರು ದಾಖಲು ಮಾಡಲು ಬಯಸುವುದಾದರೆ ಮುಂದೆ ನೋಡಿ ..

ಮೊದಲನೆಯದಾಗಿ ಈ ಆ್ಯಪ್ ಹೆಸರು e-lost – report app ಎಂಬುದಾಗಿ ಇದರ ಮೂಲಕ ನೀವು ದೂರು ದಾಖಲಿಸಬಹುದು. ಈ ಆನ್ ಲೈನ್ ವರದಿ ಕೇವಲ ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆಯ ಪರಿಶೀಲನೆಗಾಗಿ ಇರುವ ವಿದ್ಯನ್ಮಾನ ದಾಖಲೆಯಾಗಿರುತ್ತದೆ.

ನೆನಪಿರಲಿ- ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ನಿಮ್ಮ ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವುದನ್ನು ಮರೆಯದಿರಿ.

ಹೆಚ್ಚಿನ ಮಾಹಿತಿಗಾಗಿ e-lost – report app ಅಥವಾ ಆನ್ಲೈನ್ ವೆಬ್ಸೈಟ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now

Leave a Reply

Your email address will not be published. Required fields are marked *