ಬೊಜ್ಜು ಕರಗಿಸುವಲ್ಲಿ ಕಬ್ಬಿನ ಹಾಲು ಹೇಗೆ ಸಹಕಾರಿಯಾಗಿವೆ ಎಂಬುವುದರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ ಈ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.
ವ್ಯಾಯಾಮದ ಬಳಿಕ ತಾಜಾ ಕಬ್ಬಿನ ಹಾಲು ಕುಡಿಯಬೇಕು. ಇದಕ್ಕೆ ಕಾಳು ಮೆಣಸಿನ ಪುಡಿ, ನಿಂಬೆರಸ ಸೇರಿಸಿ ಬೇಕಾದರೆ ಕುಡಿಯಬಹುದು. ಡಯಟ್‌ನಲ್ಲಿರುವವರು ಸರಿಯಾಗಿ ತರಕಾರಿ, ಹಣ್ಣು ತಿನ್ನದೇ ಹೋದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ತಡೆಯುವಲ್ಲಿ ಕಬ್ಬಿನ ಹಾಲು ಸಹಾಯ ಮಾಡುತ್ತದೆ.
ಮೈ ತೂಕ ಕಮ್ಮಿಯಾಗಲು ಚಯಪಚಯ ಕ್ರಿಯೆ ಸರಿಯಾಗಿ ನಡೆಯಬೇಕು. ಕಬ್ಬಿನ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ.ಇದರಲ್ಲಿ ಸಕ್ಕರೆಯಂಶ ಇದ್ದರೂ ಇದರಿಂದ ಶರೀರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕಬ್ಬಿನ ಹಾಲು ಕುಡಿದರೆ ಹಸಿವನ್ನು ಇಂಗಿಸುತ್ತದೆ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.