ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಒಂದುವೇಳೆ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ಗೊತ್ತಿಲ್ಲದವರು ಬ್ಯಾಂಕ್ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗಿಬಿಟ್ಟರೆ, ಆ ಹಣವನ್ನು ಹೇಗೆ ಮರು ಪಡೆಯುವುದು ಎಂದು ತಿಳಿದುಕೊಂಡು ಬರೋಣ ಸ್ನೇಹಿತರೆ. ಇತ್ತೀಚಿನ ದಿನಗಳಲ್ಲಿ ನೆಟ್ ಬ್ಯಾಂಕಿಂಗ್ ವ್ಯವಹಾರ ಮಾಡುವವರ ಸಂಖ್ಯೆ ಹೆಚ್ಚು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬೇಕಾದರೆ ಹಿಂದೆಲ್ಲ ಬ್ಯಾಂಕ್ ಗೆ ಆಲೆಯಬೇಕಾದ ಪರಿಸ್ಥಿತಿ ಇತ್ತು. ನಿಮ್ಮ ಖಾತೆಯಲ್ಲಿ ಹಣ ಇದ್ರೆ, ಹಾಗೆ ಕೈಯಲ್ಲಿ ಮೊಬೈಲ್ ಇದ್ರೆ ಸಾಕು ಕ್ಷಣ ಮಾತ್ರದಲ್ಲಿ ಹಣ ವರ್ಗಾವಣೆ ಮಾಡೋದು ಸಾಧ್ಯ. ಆದ್ರೆ ನಾವು ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಕಣ್ಣು ತಪ್ಪಿ ಕೈ ತಪ್ಪಿನಿಂದ ಹಣ ವರ್ಗಾವಣೆ ಮಾಡಬೇಕಾದ ಖಾತೆ ಬಿಟ್ಟು ಇನ್ಯಾವುದೋ ಖಾತೆಗೆ ಹಣ ವರ್ಗಾವಣೆ ಆಗುವ ಸಾಧ್ಯತೆ ಸಹ ಇರುತ್ತೆ. ಹಾಗಾದ್ರೆ ಈ ರೀತಿ ತಪ್ಪಾಗಿ ಬೇರೆಯವರ ಖಾತೆಗೆ ವರ್ಗಾವಣೆ ಆಗಿರುವ ಹಣವನ್ನು ಮತ್ತೆ ನನ್ನ ಖಾತೆಗೆ ಬಂದು ಜಮಾ ಆಗೋ ಹಾಗೆ ಮಾಡುವುದು ಹೇಗೆ? ಈ ಗೊಂದಲ ಎಲ್ಲರಲ್ಲೂ ಇರುತ್ತೆ. ಈ ಗೊಂದಲಕ್ಕೆ ಪರಿಹಾರ ಇಂದಿನ ಲೇಖನದಲ್ಲಿ ಇದೆ.
ನಿಮಗೆ ನೀವು ಹಣವನ್ನು ತಪ್ಪು ಖಾತೆಗೆ ವರ್ಗಾವಣೆ ಮಾಡಿದ್ದೀರಾ ಎಂದು ತಿಳಿದ ತಕ್ಷಣವೇ ಈ ಸಂಬಂಧ ನಿಮ್ಮ ಖಾತೆ ಇರುವ ಬ್ಯಾಂಕ್ ಗೆ ಮೊದಲು ಮಾಹಿತಿ ನೀಡಿ. ಕಸ್ಟಮರ್ ಕೇರ್ ಗೆ ಕರೆ ಮಾಡಿ ಹಣ ವರ್ಗಾವಣೆ ಸಂಬಂಧಿಸಿದಂತೆ ಇರುವ ಮಾಹಿತಿಯನ್ನು ನೀಡಿ. ಅವ್ರು ಈಮೇಲ್ ಮುಖಾಂತರ ನಿಮ್ಮ ಖಾತೆಯಿಂದ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದ್ರೆ, ಆ ಹಣದ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡಿ. ನಿಮ್ಮ ಖಾತೆ ಮತ್ತು ನೀವು ಹಣವನ್ನು ವರ್ಗಾಯಿಸಿದ ಖಾತೆಯ ವಿವರಗಳನ್ನು ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ. ಒಂದುವೇಳೆ ನೀವು ಹಣ ವರ್ಗಾವಣೆ ಮಾಡಿದ ಖಾತೆ ಸಂಖ್ಯೆ ತಪ್ಪಾಗಿದ್ದರೆ ಅಥವಾ IFSC code ತಪ್ಪಾಗಿದ್ದರೆ ನೀವು ವರ್ಗಾವಣೆ ಮಾಡಿದ ಹಣ ಯಾವುದೇ ಸಮಸ್ಯೆ ಇಲ್ಲದೆ ಮತ್ತೆ ನಿಮ್ಮ ಖಾತೆಗೆ ಬರಲಿದೆ. ಒಂದುವೇಳೆ ಹೀಗೆ ನಡೆಯದೇ ಹೋದಲ್ಲಿ ಬ್ಯಾಂಕ್ ಗೆ ಭೇಟಿ ನೀಡಿ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮಾತನಾಡಿ. ಅವರಿಗೆ ನೀವು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿ. ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಒಂದುವೇಳೆ ನಿಮ್ಮದೇ ಆದ ಬೇರೆ ಖಾತೆಗೆ ನೀವು ಹಣ ವರ್ಗಾವಣೆ ಮಾಡಿದ್ರೆ ನಿಮ್ಮ ಖಾತೆಗೆ ಹಣ ವಾಪಸ್ ಬರುವುದು ಸ್ವಲ್ಪ ಸುಲಭ ಆಗಲಿದೆ. ತಪ್ಪಾಗಿ ಬೇರೊಂದು ಬ್ಯಾಂಕ್ ನ ಖಾತೆಗೆ ವರ್ಗಾವಣೆ ಆಗಿದ್ರೆ ಹಣವನ್ನು ಹಿಂಪಡೆಯಲು ಹೆಚ್ಚು ಸಮಯಾವಕಾಶ ಬೇಕಾಗುತ್ತದೆ. ಇಂತಹ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲು ಕೆಲವು ಬಾರಿ ಎರೆಡು ತಿಂಗಳಷ್ಟು ಸಮಯ ಹಿಡಿಯುತ್ತದೆ. ನಿಮ್ಮ ಬ್ಯಾಂಕ್ ನಿಂದಾ ಯಾರ ಖಾತೆಗೆ, ಯಾವ ನಗರದ, ಯಾವ ಶಾಖೆಗೆ ವರ್ಗಾಯಿಸಲಾಗಿದೆ ಎಂಬುವುದನ್ನು ನೀವು ಕಂಡು ಹಿಡಿಯಬಹುದು. ಆ ಶಾಖೆಯಲ್ಲಿ ಮಾತನಾಡುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಲು ನೀವು ಸಹ ಪ್ರಯತ್ನಿಸಬಹುದು.
ನಿಮ್ಮ ಮಾಹಿತಿ ಆಧಾರದ ಮೇಲೆ ಖಾತೆಯಲ್ಲಿ ಹಣವನ್ನು ತಪ್ಪಾಗಿ ವರ್ಗಾಯಿಸಿದ ವ್ಯಕ್ತಿಯ ಬ್ಯಾಂಕ್ ನ್ನೂ ಬ್ಯಾಂಕ್ ತಿಳಿಸುತ್ತದೆ. ಒಂದುವೇಳೆ ತಪ್ಪಾಗಿ ಹಣ ವರ್ಗಾವಣೆ ಆದ ಖಾತೆ ಹೊಂದಿರುವ ವ್ಯಕ್ತಿ ನಿಮ್ಮ ಹಣವನ್ನು ಹಿಂತಿರುಗಿಸಲು ಒಪ್ಪದೆ ಇರುವ ಸಂದರ್ಭದಲ್ಲಿ ಆತನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು. ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ rbi ನಿರ್ದೇಶನವನ್ನು ನೀಡಿದೆ. ಇತ್ತೀಚೆಗೆ ನೀವು ಬ್ಯಾಂಕ್ ಖಾತೆಯಿಂದ ಬೇರೊಬ್ಬರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ ಸಂದರ್ಭದಲ್ಲಿ ನಿಮಗೆ ಬ್ಯಾಂಕ್ ನಿಂದಾ ನಿಮ್ಮ ಮೊಬೈಲ್ ಫೋನ್ ಗೆ ಸಂದೇಶ ಬರುತ್ತೆ, ಆ ಸಂದೇಶದಲ್ಲಿ ಕೂಡ ಒಂದು ವೇಳೆ ತಪ್ಪು ವ್ಯವಹಾರ ನಡೆದಿದ್ದರೆ, ಆ ಸಂದೇಶದಲ್ಲಿ ನೀಡಲಾದ ತಪ್ಪುಗಳನ್ನು ಕಲಿಸುವಂತೆ ಸೂಚನೆ ನೀಡಲಾಗುತ್ತದೆ. ಈ ಕುರಿತು ನಿರ್ದೇಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತಪ್ಪು ವ್ಯವಹಾರ ನಡೆದ ಸಂದರ್ಭದಲ್ಲಿ ಸಂಬಂಧ ಪಟ್ಟ ಬ್ಯಾಂಕ್ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಏಕೆಂದರೆ ತಪ್ಪಾಗಿರುವ ಖಾತೆಯಿಂದ ಸರಿಯಾಗಿರುವ ಖಾತೆಗೆ ಹಣ ವರ್ಗಾವಣೆ ಮಾಡಿಕೊಡುವುದು ಬ್ಯಾಂಕ್ ನ ಜವಾಬ್ದಾರಿ ಆಗಿದೆ. ನೋಡಿದ್ರಾಲ ಸ್ನೇಹಿತರೆ ನಿಮ್ಮ ಖಾತೆಯಿಂದ ಹಣ ಬೇರೆ ಖಾತೆಗೆ ತಪ್ಪಾಗಿ ವರ್ಗಾವಣೆ ಆಗಿದ್ರೆ ಯಾವ ರೀತಿ ನಿಮ್ಮ ಹಣವನ್ನು ವಾಪಸ್ ತೆಗೆದುಕೊಳ್ಳಬಹುದು ಎಂದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.