WhatsApp Group Join Now

ಚಂದ್ರಯಾನ ಯಶಸ್ಸಾಗಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಇಸ್ರೋದಲ್ಲ ಸೈಂಟಿಸ್ಟ್ ಆಗಬೇಕೆಂಬ ಕನಸು ಮೂಡಿರಬಹುದು. ಇಸ್ರೋದಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.ಇಸ್ರೋದಲ್ಲಿ ಉದ್ಯೋಗ ಪಡೆಯುವ ಕನಸು ಸಾಕಷ್ಟು ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಆಗೆ ಇರುತ್ತದೆ. ಚಂದ್ರಯಾನದಂತಹ ಯೋಜನೆಯಲ್ಲಿ ಇಸ್ರೋ ಯಶಸ್ಸು ಪಡೆದಾಗ, ಇಂತಹ ಯೋಜನೆಗಳಲ್ಲಿ ಭಾಗಿಯಾಗುವ ವಿಜ್ಞಾನಿಗಳನ್ನು ನೋಡಿದಾಗ ಸಾಕಷ್ಟು ಜನರಿಗೆ ತಾವು ಕೂಡ ಇಸ್ರೋದಲ್ಲಿ ಉದ್ಯೋಗ ಪಡೆಯಬೇಕೆಂಬ ಅಭಿಲಾಸೆ ಮೂಡುತ್ತದೆ.ಭಾರತವು ಚಂದ್ರಯಾನ 3 ಯೋಜನೆಯಲ್ಲಿ ಯಶಸ್ವಿಯಾದ ಸಂದರ್ಭದಲ್ಲಿ ಇಸ್ರೋದಲ್ಲಿ ಉದ್ಯೋಗ ಪಡೆಯುವ ಕನಸಿನಲ್ಲಿರುವವರಿಗೆ ಕರಿಯರ್ ಮಾರ್ಗದರ್ಶನ
ಇಲ್ಲಿ ನೀಡಲಾಗಿದೆ.

ವಿಜ್ಞಾನದ ಬ್ರಹ್ಮಾಂಡ ಬಾಹ್ಯಾಕಾಶ ವಿಜ್ಞಾನ ಎನ್ನಾಲಗುತ್ತದೆ. ನೀವು ಇಸ್ರೋದಲ್ಲ ವಿಜ್ಞಾನಿಯಾಗಬೇಕಾದರೆ ಎಂಜಿನಿಯರಿಂಗ್‌ ಅಥವಾ ಸೈನ್ಸ್ ವಿಷಯ ಓದಿರಬೇಕು. ಮೆಕ್ಯಾನಿಕಲ್, ಎಲೆಕ್ನಿಕಲ್ ಅಥವಾ ಕಂಪ್ಯೂಟರ್ ಎಂಜಿನಿಯರಿಂಗ್ ಓದಿರುವವರನ್ನು, ಆಸ್ಟೋನಮಿ, ಫಿಸಿಕ್ಸ್, ಮ್ಯಾಥಮೆಟಿಕ್ಸ್‌ನಲ್ಲಿ ಪಿಎಚ್‌ಡಿ ಓದಿರುವವರನ್ನೂ ಇಸ್ರೋ ನೇಮಿಸಿಕೊಳ್ಳುತ್ತದೆ. ವಿಜ್ಞಾನಿಯಾಗುವುದೆಂದರೆ ಲ್ಯಾಬ್ ಜತೆಗೆ ಥಿಯರಿ ಜ್ಞಾನ ಸಾಕಷ್ಟು ಇರಬೇಕಾಗುತ್ತದೆ. ಚಂದ್ರಯಾನದಲ್ಲಿ ಲ್ಯಾಂಡರ್ ಇಆಸುವ ಪ್ರಕ್ರಿಯೆಯಲ್ಲಿ ಖಗೋಳ ವಿಜ್ಞಾನದ ಜತೆಗೆ ಗಣಿತದ ಪಾತ್ರವೂ ಮಹತ್ವದ್ದು. ನಕ್ಷತ್ರಗಳು, ಗ್ರಹಗಳು ಮತ್ತು ಇತರೆ ಕಾಯಗಳ ಕುರಿತು ಅಧ್ಯಯನ ಮಾಡುವ ಕೆಲಸವನ್ನು ಖಗೋಳ ವಿಜ್ಞಾನಿಗಳು ಮಾಡುತ್ತಾರೆ. ಖಗೋಳ, ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ಜ್ಞಾನ ಇರುವವರು ಇಸ್ರೋದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.

ಮೊದಲನೆಯದಾಗಿ ವಿದ್ಯಾರ್ಥಿಗಳು 10+2 ಶಿಕ್ಷಣದಲ್ಲಿ ಗಣಿತ, ಫಿಸಿಕ್ಸ್ ಮತ್ತು ಕೆಮಿಸ್ಟಿ ಓದಿರಬೇಕು. ಈ ವಿಷಯಗಳಲ್ಲಿ ಅತ್ಯುತ್ತಮ ಜ್ಞಾನ ಹೊಂದಿರಬೇಕು.ಜೆಇಇ ಅಡ್ವಾನ್ಸಡ್, ಜೆಇಇ ಮೇನ್ಸ್ ಮೂಲಕ ವಿವಿಧ ಎಂಜಿನಿಯರಿಂಗ್ ಪದವಿ ಪಡೆಯಿರಿ. ಮೆಕ್ಯಾನಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ನಿಕಲ್ ಎಂಜಿನಿಯಲಿಂಗ್, ಎಂಜಿನಿಯರಿಂಗ್ ಫಿಸಿಕ್ಸ್, ರೇಡಿಯೋ ಎಂಜಿನಿಯರಿಂಗ್ ಇತ್ಯಾದಿ ವಿಷಯಗಲಲ್ಲಿ ಬಿಇ ಅಥವಾ ಜಟೆಕ್ ಪದವಿ ಪಡೆದಿರಬೇಕು. ಇದಾದ ಬಳಿಕ ಇಸ್ರೋದ ಸೆಂಟ್ರಲೈಸ್ಟ್ ರಿಕ್ರೂಟ್‌ಮೆಂಟ್‌ ಬೋರ್ಡ್ ಪರೀಕ್ಷೆ ಉತ್ತೀರ್ಣರಾಗಿ ಸೈಂಟಿಸ್ಟ್ ಹುದ್ದೆ ಪಡೆಯಬಹುದು. ಈ ಪರೀಕ್ಷೆ ಬರೆಯಲು ಸಂಬಂಧಪಟ್ಟ ವಿಷಯಗಳಲ್ಲಿ ಚಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು.ಐಐಎಸ್ಸಿ, ಐಐಟಿ, ಎನ್‌ಐಟಿ, ಐಐಎಸ್‌ಐ ಇತ್ಯಾದಿ ಪ್ರಮುಖ ಕಾಲೇಜುಗಆಂದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಇಸ್ರೋ ಆದ್ಯತೆ ನೀಡುತ್ತದೆ.

ಎಂಎಸ್ಸಿ, ಎಂಇ ಅಥವಾ ಎಂಟೆಕ್ ಅಥವಾ ಪಿಎಚ್‌ಡಿಯನ್ನು ಸಂಬಂಧಪಟ್ಟ ವಿಷಯಗಳಲ್ಲಿ ಪಡೆದ ವಿದ್ಯಾರ್ಥಿಗಳು ಕೂಡ ಇಸ್ರೋದಲ್ಲಿ ಸೈಂಟಿಸ್ಟ್ ಆಗಬಹುದು. ಪದವಿ ಮುಗಿದ ಬಆಕ ಜಿಯೋ ಫಿಸಿಕ್ಸ್, ಜಿಯೋ ಇನ್‌ಫಾರ್ಮೆಟಿಕ್ಸ್, ಇನ್‌ಸ್ಟುಮೆಂಟೆಷನ್, ಅಪೈಡ್ ಮ್ಯಾಥಮೆಟಿಕ್ಸ್ ಇತ್ಯಾದಿ ವಿಷಯಗಳಲ್ಲಿ ಎಂಟೆಕ್ ಪದವಿ ಪಡೆದಿರಬೇಕು.ಇಸ್ರೋದ ವೆಬ್‌ಸೈಟ್‌ನಲ್ಲಿ ಕಲಿಯ‌ ಪುಟವನ್ನು ಆಗಾಗ ನೋಡುತ್ತ ಇರಿ. ಈ ವಿಷಯಗಆಗೆ ಸಂಬಂಧಪಟ್ಟ ಉದ್ಯೋಗ ಅಧಿಸೂಚನೆ ಬಂದಾಗ ಅರ್ಜಿ ಸಲ್ಲಿಸಿ, ಬಆಕ ಅಖಿತ ಪರೀಕ್ಷೆ, ಸಂದರ್ಶನ ಇತ್ಯಾದಿಗಳನ್ನು ಎದುರಿಸಿ ಯಶಸ್ಸು ಗಆಸಬಹುದು. ಇಸ್ರೋದಲ್ಲಿ ಜೂನಿಯರ್ ರಿಸರ್ಚ್ ಫೆಲೊ ಆಗಿಯೂ ಸೇರಬಹುದು. ಹೀಗೆ ಇಸ್ರೋದಲ್ಲಿ ವಿಜ್ಞಾನಿಯಾಗಲು ಕೆಲವು ಹಾದಿಗಳು ಇವೆ. ವಿದ್ಯಾರ್ಥಿ ದೆಸೆಯಲ್ಲಿ ಈ ಕುರಿತು ಸ್ಪಷ್ಟ ಗುರಿ ಇಟ್ಟುಕೊಂಡು ಕಷ್ಟಪಟ್ಟು ಓದಿಲಿ. ಜತೆಗೆ, ಇಸ್ರೋದ ವೆಬ್‌ಸೈಟ್‌ನಲ್ಲಿ ಉದ್ಯೋಗ ಮಾಹಿತಿ ನೋಡುತ್ತ ಇರಿ. ಇಸ್ರೋ ನಡೆಸುವ ವಿವಿಧ ನೇಮಕ ಪರೀಕ್ಷೆಯ ಕುರಿತು ಜ್ಞಾನ ಹೊಂದಿರಿ.

WhatsApp Group Join Now

Leave a Reply

Your email address will not be published. Required fields are marked *