ಮನೆಯಲ್ಲಿ ಒಮ್ಮೆ ತಿಗಣೆ ಸೇರಿಕೊಂಡರೆ ಮನೆಯಲ್ಲಿ ದರಿದ್ರ ತುಂಬಿಕೊಂಡಂತೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ಯಾಕೆಂದರೆ ತಿಗಣೆಯ ಕಾಟ ಅಂತದು. ಇದರಿಂದ ಮನುಷ್ಯನಿಗೆ ದೈಹಿಕವಾಗಿ ತೊಂದರೆ ಹೆಚ್ಚಾಗಿ ಆಗದೆ ಇದ್ರೂ ಮಾನಸಿಕವಾಗಿ ಕಿರಿ ಕಿರಿ ಉಂಟು ಮಾಡುತ್ತದೆ. ತಿಗಣೆ ಏನಾದ್ರು ಮನೆಯಲ್ಲಿ ಸೇರಿಕೊಂಡರೆ ಇದನ್ನು ಮನೆಯಿಂದ ನಿವಾರಿಸೋದು ತುಂಬಾನೇ ಕಷ್ಟವಾಗುತ್ತದೆ. ಆದರೆ ಆ ಚಿಂತೆ ಬಿಡಿ ಇಲ್ಲಿದೆ ಸುಲಭ ಪರಿಹಾರ.
ತಿಗಣೆ ನಿಮಗೆ ಕಡಿದರೆ ಅದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಒಂದು ವೇಳೆ ತುರಿಕೆ ಏನಾದರೂ ಹೆಚ್ಚಾದರೆ ಸ್ಟೆರಾಯ್ಡ್ ಕ್ರೀಮ್ಗಳನ್ನು ಬಳಸಿಕೊಂಡು ರಿಲೀಫ್ ಪಡೆದುಕೊಳ್ಳಬಹುದು. ನಂತರ ಸಂಭವಿಸುವ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚು ಪ್ರದೇಶದ ಮೇಲೆ ಹರಡಿದರೆ ಆಗ ನೀವು ಆ್ಯಂಟಿಬಯಾಟಿಕ್ಗಳನ್ನು ಬಳಸಬಹುದಾಗಿದೆ.
ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ತಿಗಣೆಗಳು ಇನ್ನೂ ಹೆಚ್ಚಾಗಿ ಹರಡಲಿದ್ದು, ಅದನ್ನು ತಡೆಯಲು ಸಾಮಾನ್ಯ ಕೀಟ ನಿಯಂತ್ರಣವನ್ನು ತಿಂಗಳಿಗೆ ಎರಡು ಬಾರಿ ಬಳಸಬಹುದಾಗಿದೆ. ಬಟ್ಟೆ ಹಾಸಿಗೆಗಳಲ್ಲಿ ತಿಗಣೆ ಸೇರಿಕೊಂಡಿದ್ದರೆ ಈ ಹಿನ್ನೆಲೆ ಅವುಗಳನ್ನು ಕನಿಷ್ಠ 120 ಫಾರೆನ್ಹೀಟ್ ಬಿಸಿ ನೀರಲ್ಲಿ ಚಾಚು ತಪ್ಪದೆ ತೊಳೆಯಬೇಕಾಗುತ್ತದೆ. ಯಾಕೆಂದರೆ, ಬಟ್ಟೆ ಹಾಗೂ ಹಾಸಿಗೆಗಳಿಗೆ ಯಾವುದೇ ಕೀಟ ನಿಯಂತ್ರಕವನ್ನು ಬಳಸುವ ಹಾಗಿಲ್ಲ.
ವ್ಯಾಕ್ಯೂಮ್ ಬಳಸುವ ವೇಳೆ ಕಾರ್ಪೆಟ್, ಸೋಫಾ ಮುಂತಾದ ಭಾಗಗಳನ್ನು ಬಟ್ಟೆಯಿಂದ ಒರೆಸಿದರೆ ತಿಗಣೆಗಳ ಕಾಟದಿಂದ ಮುಕ್ತಿ ಪಡೆಯಲು ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಅನ್ನೋದು ತಜ್ಞರು ಅಭಿಪ್ರಾಯವಾಗಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.