ಬೇಸಿಗೆ ಮತ್ತು ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ಮತ್ತು ಒಳಗಡೆ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ರೀತಿಯ ರಾಸಾಯನಿಕಗಳನ್ನೂ ನಿಯಂತ್ರಯಿಸಲು ಬಳಸಿದರು ಕೆಲವೊಮ್ಮೆ ಸೊಳ್ಳೆಗಳ ಕಾಟ ಕಡಿಮೆಯಾಗುವುದಿಲ್ಲ ಮತ್ತು ಅವು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ಸರಳ ಮನೆಮಾದುವುಗಳನ್ನು ಬಳಸಿ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ಅದು ಹೇಗೆ ಅಂತೀರಾ ಮುಂದೆ ಓದಿ.
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವಂತ ಲವಂಗ ಮತ್ತು ನಿಂಬೆಯನ್ನು ಈ ರೀತಿಯಾಗಿ ಬಳಸಿದರೆ ಸೊಳ್ಳೆಗಳ ನಿಯಂತ್ರಣವಾಗುವುದು. ಅಂದರೆ ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರ ಮೇಲೆ ಲವಂಗಗಳನ್ನು ಸಿಕ್ಕಿಸಿ. ಇದನ್ನು ಮನೆಯ ಬೇರೆ ಬೇರೆ ಭಾಗಗಳಲ್ಲಿ ಇಡಿ. ಇದರಿಂದ ಮನೆಯಲ್ಲಿ ಸೊಳ್ಳೆ, ನೊಣ ಯಾವುದೂ ಸುಳಿಯುವುದಿಲ್ಲ.
ಕಾಫಿ ಬೀಜಗಳನ್ನು ಹೀಗೆ ಬಳಸಿದರೆ ಸೊಳ್ಳೆಗಳನ್ನು ಸರ್ವನಾಶ ಮಾಡಬಹುದು. ಹೌದು ಕಾಫಿ ಬೀಜಗಳನ್ನು ನಿಂತ ನೀರಿರುವ ಜಾಗದ ಮೇಲೆ ಹಾಕುವುದು. ಇವು ನೀರಿನ ಕೆಳಗೆ ಹೋದಾಗ ಸೊಳ್ಳೆ ಮೊಟ್ಟೆಗಳು ಸಹ ನೀರಿನ ಕೆಳಗೆ ಹೋಗುತ್ತವೆ. ಅಲ್ಲಿ ಆಕ್ಸಿಜನ್ ಕೊರತೆಯಿಂದ ಸೊಳ್ಳೆಗಳು ಹುಟ್ಟುವ ಮೊದಲೇ ಸಾಯುತ್ತವೆ.
ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲ್ಗೆ ಹಾಕಿ ಮೂಲೆ ಮೂಲೆಗೂ ಸ್ಪ್ರೇ ಮಾಡಿ. ಒಂದೇ ಒಂದು ಸೊಳ್ಳೆ ಸುಳಿಯೋದಿಲ್ಲ. ಅಷ್ಟೇ ಅಲ್ಲದೆ ಡಿಶ್ ವಾಷ್ ಸೋಪನ್ನು ನೀರಿನ ಜೊತೆ ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಸೊಳ್ಳೆಗಳು ನಾಶವಾಗುತ್ತದೆ. ಈ ಮನೆಮದ್ದುಗಳು ಸೊಳ್ಳೆಗಳ ಹಾವಳಿಯನ್ನು ತಪ್ಪಿಸಿ ಮನೆಯಲ್ಲಿ ನಿಮಗೆ ನೆಮ್ಮದಿಯಾಗಿರಲು ಸಹಕಾರಿಯಾಗಲಿವೆ.