ಹೌದು ಮುಖದ ಮೇಲಿನ ರಂದ್ರಗಳು ಕೆಲವೊಮ್ಮೆ ತುಂಬಾನೇ ಮುಜಗರ ಆಗುವಂತೆ ಮಾಡುತ್ತವೆ. ನಮ್ಮ ಮುಖದ ಮೇಲಿನ ಮೊಡವೆ ಗುಳ್ಳೆಗಳು ವಾಸಿಯಾದ ಮೇಲೆ ಇರುವಂತ ಈ ರಂಧ್ರಗಳ ಬಗ್ಗೆ ನೀವು ಚಿಂತಿಸುವ ಅಗತ್ಯ ಇಲ್ಲ ಯಾಕೆ ಅಂದ್ರೆ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ.
ಮುಖಕ್ಕೆ ಬಿಸಿ ನೀರಿನ ಹವೆ: ನೀವು ವಾರಕ್ಕೆ 2 ಬಾರಿ ಮುಖಕ್ಕೆ ಬಿಸಿ ನೀರಿನ ಹವೆ ತೆಗೆದುಕೊಂಡಲ್ಲಿ ನೀವು ಈ ಪೋರ್ಸ್ನಿಂದ ಮುಕ್ತಿ ಪಡೆಯಬಹುದು. ಹೀಗೆ ಮಾಡುವುದರಿಂದ ಚರ್ಮದ ಮುಚ್ಚಿದ ರಂಧ್ರಗಳು ತೆರೆದುಕೊಂಡು ದೇಹದಲ್ಲಿನ ಬೇಡವಾದ ಕಲ್ಮಶಗಳು ಹೊರಬರುತ್ತವೆ.
ಸಕ್ಕರೆ ಮತ್ತು ನಿಂಬೆರಸ: ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಸ್ವಲ್ಪ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಹೆಚ್ಚು ರಂಧ್ರ ಇರುವ ಜಾಗದಲ್ಲಿ 5 ನಿಮಿಷಗಳ ಕಾಲ ಮೃದುವಾಗಿ ಸರ್ಕ್ಯುಲರ್ ಮೋಶನ್ನಲ್ಲಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಮಾಶ್ಚರೈಸರ್ ಹಚ್ಚಿಕೊಳ್ಳಿ. ವಾರಕ್ಕೆ ಒಂದು ಬಾರಿ ಹೀಗೆ ಮಾಡಿ.
ಜೇನುತುಪ್ಪ ಮತ್ತು ಚಕ್ಕೆ: ಒಂದು ಟೀ ಸ್ಪೂನ್ ಜೇನುತುಪ್ಪಕ್ಕೆ ಸ್ವಲ್ಪ ಚೆಕ್ಕೆ ಪುಡಿಯನ್ನು ಮಿಶ್ರಣ ಮಾಡಿ ಪೋರ್ಸ್ ಮೇಲೆ ಹಚ್ಚಿ 20 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮದಲ್ಲಿನ ಹೆಚ್ಚಿನ ಜಿಡ್ಡು ಅಂಶ ಹೊರ ಬಂದು ಪೋರ್ಸ್ ಟೈಟ್ ಆಗುತ್ತದೆ.
ಮೊಟ್ಟೆ ಮತ್ತು ನಿಂಬೆರಸ: 1 ಸ್ಪೂನ್ ಮೊಟ್ಟೆಯ ಬಿಳಿ ಭಾಗಕ್ಕೆ 1/2 ಸ್ಪೂನ್ ನಿಂಬೆರಸ ಬೆರೆಸಿ ಸಮವಾಗಿ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಂಧ್ರ ಹೆಚ್ಚಾಗಿರುವ ಭಾಗಕ್ಕೆ ಹಚ್ಚಿ 20 ನಿಮಿಷದ ನಂತರ ಮುಖ ತೊಳೆಯಿರಿ. ವಾರಕ್ಕೆ 3 ಬಾರಿ ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯಲಿದೆ.