ಇತ್ತೀಚಿಗೆ ಕಳ್ಳತನದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಕಳ್ಳತನಕ್ಕೆ ಪರಿಹಾರ ಒದಗಿಸಲು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ನಿಮ್ಮ ಫೋನ್ ದೇಶದ ಯಾವುದೇ ಮೂಲೆಯಲ್ಲಿ ಕಳೆದುಹೋದರೂ ಅದನ್ನು ಪತ್ತೆಹಚ್ಚುವ ಸಾಫ್ಟ್ವೇರ್ ವೊಂದನ್ನು ಸದ್ಯದಲ್ಲೆ ಸರ್ಕಾರ ಬಿಡುಗಡೆ ಮಾಡಲಿದೆ.
ಕಳೆದು ಹೋದ ಮೊಬೈಲ್ ಫೋನ್ ಕುರಿತು ಮಾಹಿತಿ ನೀಡಿ ಪ್ರಕರಣ ದಾಖಲಿಸಲು ಹೆಲ್ಪ್ ಲೈನ್ ನಂಬರ್ ನ್ನು ಸರ್ಕಾರ ಬಿಡುಗಡೆ ಮಾಡಲಿದೆ. 14422 ನಂಬರ್ ಗೆ ಕರೆ ಮಾಡಿ ಕಳೆದು ಹೋದ ನಿಮ್ಮ ಮೊಬೈಲ್ ಕುರಿತ ಮಾಹಿತಿಯನ್ನು, ಹಾಗೂ ನಿಮ್ಮ ಮೊಬೈಲ್ ನ ಉತ್ಪಾದನಾ ಸಮಯದಲ್ಲಿ ನೀಡಲಾದ ವಿಶೇಷ ಸಂಖ್ಯೆ IMEI ನಂಬರ್ ನ್ನು ನೀಡಿದರೆ, ಹೆಲ್ಪ್ ಲೈನ್ ನಂಬರ್ ಗೆ ದಾಖಲಾದ ವಿವರವನ್ನು ಸಾಫ್ಟ್ವೇರ್ ಮೂಲಕ ಮೊಬೈಲ್ ಕಂಪನಿಗಳಿಗೆ ಕಳುಹಿಸಲಾಗುವುದು.
ಈ ಮೂಲಕ ನಿಮ್ಮ ಮೊಬೈಲ್ ಫೋನ್ ದೇಶದ ಯಾವುದೇ ಮೂಲೆಯಲ್ಲಿದ್ದರೂ ಪತ್ತೆಹಚ್ಚಿ ಫೋನ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಜೊತೆಗೆ ಯಾರಾದರೂ ಆ ಫೋನ್ ನ ಬಳಕೆ ಮಾಡುತ್ತಿದ್ದರೂ ಕೂಡ ಮಾಹಿತಿ ದೊರೆಯುವುದರಿಂದ ಕಳ್ಳತನ ಮಾಡಿದವರನ್ನು ಸೆರೆ ಹಿಡಿಯಲೂ ಈ ಹೆಲ್ಪ್ ಲೈನ್ ಸಹಾಯಕವಾಗಲಿದೆ.
ಈಗಾಗಲೇ ಫೋನ್ ಪತ್ತೆಹಚ್ಚುವ ಸಾಫ್ಟ್ವೇರ್ ಗುಜರಾತ್ನಲ್ಲಿ ಯಶಸ್ವಿ ಪ್ರಯೋಗ ಕಂಡಿದ್ದು, ಸದ್ಯದಲ್ಲೆ ದೇಶದಾದ್ಯಂತ ಅಧಿಕೃತವಾಗಿ ಟೆಲಿಕಾಂ ಮಿನಿಸ್ಟರ್ ರವಿಶಂಕರ್ ಪ್ರಸಾದ್ ಬಿಡುಗಡೆ ಮಾಡಲಿದ್ದಾರೆ:ಕೃಪೆ:oneindia