ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವು¨ರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ.ಕೀವು ತುಂಬಿದ ಗುಳ್ಳೆಯಾಗಿದ್ದರೆ ಬಸಳೆ ಸೊಪ್ಪಿನ ರಸವನ್ನು ಗುಳ್ಳೆಗೆ ಹಚ್ಚಿದರೆ ಅಥವಾ ರಸವನ್ನು ಕುಡಿದರೇ ಗುಳ್ಳೆ ಬೇಗ ಮಾಯುತ್ತದೆ.
ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ ಹುಣ್ಣು ಶಮನವಾಗುತ್ತದೆ.ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ ರಸವನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ.ಬಸಳೆ ಸೊಪ್ಪನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.ಬಸಳೆ ಗಿಡದ ಬೇರಿನ ಕಷಾಯ ಸೇವಿಸಿದರೆ ಭೇದಿ ನಿಲ್ಲುತ್ತದೆ.
ಬಸಳೆ ಹೂವನ್ನು ಪೇಸ್ಟ್ ಮಾಡಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಗಾಯ ಗುಣವಾಗುತ್ತದೆ.ಗರ್ಭಿಣಿಯರು ಹೆರಿಗೆ ನೋವು ಬಂದಾಗ ಬಸಳೆ ಸೊಪ್ಪಿನ ಕಷಾಯ ಕುಡಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ.ಬಸಳೆ ಎಲೆಗಳ ಲೋಳೆಯನ್ನು ಹಣೆ ಮೇಲೆ ಲೇಪಿಸಿದರೆ ತಲೆನೋವು ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ಬಸಳೆ ಸೊಪ್ಪು ಮತ್ತು ಅದರ ಬೇರನ್ನು ಕಷಾಯ ಮಾಡಿ ಸೇವಿಸಿದರೆ ತಾಯಿಯ ಎದೆ ಹಾಲು ಹೆಚ್ಚುತ್ತದೆ.ಅಂಗೈ ಮತ್ತು ಅಂಗಾಲು ಉರಿ ಇದ್ದರೆ ಬಸಳೆ ಸೊಪ್ಪಿನ ರಸವನ್ನು ಹಚ್ಚಿದರೆ ಉರಿ ನಿವಾರಣೆಯಾಗುತ್ತದೆ.