ನಮಸ್ಕಾರ ರೈತ ಸಂಪರ್ಕ ಕೇಂದ್ರದಿಂದ ಅಂದರೆ ಕೃಷಿ ಸಂಪರ್ಕ ಕೇಂದ್ರದಿಂದ ನಿಮ್ಮ ತಾಲೂಕಿನಲ್ಲಿರುವ ಅಥವಾ ನಿಮ್ಮ ಹೋಬಳಿಯಲ್ಲಿರುವ ಈ ಒಂದು ಸಂಪರ್ಕ ಕೇಂದ್ರದಿಂದ ನಮ್ಮ ರೈತರಿಗೆ ಏನೇನು ಸಿಗುತ್ತೆ? ಮುಖ್ಯವಾಗಿ ಸಬ್ಸಿಡಿ ಮುಖಾಂತರ ರೈತರಿಗೆ ಏನು ಸಿಗುತ್ತೆ? ಉದಾಹಣೆಗೆ ಯಾವ ಯಾವ ಎಷ್ಟು ಸಬ್ಸಿಡಿಯಲ್ಲಿ ಸಿಗುತ್ತೆ? ಬಿತ್ತನೆ ಬೀಜ ಏನಾದರು ಕ್ವಾಲಿಟಿ ಇರುವಂತಹ ಏನಾದರು ಸಿಗುತ್ತಾ ಕೇಂದ್ರದಲ್ಲಿ ರೈತ ಸಂಪರ್ಕದಿಂದ ಯಾವುದ್ಯಾವುದು ಸಬ್ಸಿಡಿಯಲ್ಲಿ ದೊರೆಯುತ್ತೆ ಅನ್ನೊದನ್ನ ನೋಡೋಣ. ಮೊದಲಿಗೆ ರೈತ ಸಂಪರ್ಕ ಕೇಂದ್ರದಿಂದ ಏನೆಲ್ಲ ಉಪಕರಣಗಳು ಮತ್ತು ಸೌಲಭ್ಯಗಳು ಮತ್ತು ಸಬ್ಸಿಡಿ ಮೂಲಕ ಸಿಗುತ್ತವೆ ಎಂಬುದನ್ನು ನೋಡೋಣ. ಒಂದು ಬೀಜ ಮತ್ತು ರಸಗೊಬ್ಬರ ಹೌದು, ಸರ್ಕಾರ ರೈತರಿಗೆ ಉತ್ತಮ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳು ಸಿಗೋಸ್ಕರ ಪ್ರತಿ ವರ್ಷ ರಿಯಾಯಿತಿ ದರದಲ್ಲಿ ಬೀಜ ಮತ್ತು ರಸಗೊಬ್ಬರಗಳ ಹಂಚಿಕೆ ಮಾಡಲಾಗುತ್ತದೆ. ಸರ್ಕಾರದ ವತಿಯಿಂದ ಈ ಒಂದು ಕೇಂದ್ರದ ಮೂಲಕ ಹೌದು, ಇದರ ಸಬ್ಸಿಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ರಷ್ಟು ಮತ್ತು ಎಸ್ಸಿ ಎಸ್ಟಿ ವರ್ಗದವರಿಗೆ ಶೇಕಡ 75 ರಷ್ಟು ಸಬ್ಸಿಡಿ ದರದಲ್ಲಿ ಕೊಡಲಾಗುತ್ತೆ.
ಬೀಜ ಮತ್ತು ರಸಗೊಬ್ಬರಗಳು ಪ್ರತಿವರ್ಷನು. ಎರಡನೆಯದು ಕೀಟನಾಶಕ ಔಷಧಿಗಳು. ಹೌದು, ಇದನ್ನು ವರ್ಷ ಪೂರ್ತಿ ಪ್ರಾದೇಶಿಕ ಅನುಗುಣವಾಗಿ ಅಂದ್ರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ವಿವಿಧ ಪ್ರದೇಶದಲ್ಲಿ ಏನೇನು ಬೆಳೆ ಬೆಳೆಯುತ್ತಾರೋ ಅದರ ಲೆಕ್ಕ ಹಾಕಿ ಆ ಒಂದು ಪ್ರದೇಶಕ್ಕೆ ಅನುಗುಣವಾಗಿ ಸಬ್ಸಿಡಿ ದರದಲ್ಲಿ ಕೀಟನಾಶಕ ಔಷಧಿಗಳು. ಸರ್ಕಾರ ಈ ಒಂದು ಕೇಂದ್ರದಿಂದ ಕೊಡಲಾಗುತ್ತೆ.ಮೂರನೆಯದು ಕೃಷಿ ಉಪಕರಣಗಳಾದ ನೇಗಿಲು ಮಷೀನ್ ಆಗಿರಬಹುದು. ಭೂಮಿ ಹದಗೊಳಿಸುವ ಬಗ್ಗೆ ಕೇಂದ್ರದಿಂದ ಪಡೆದುಕೊಳ್ಳಬಹುದು. ರಾಶಿ ಮಾಡುವ ಯಂತ್ರ ಗಳು ಬಿತ್ತನೆ ಮಾಡುವ ಯಂತ್ರ
ಗಳು, ಕುಂಟೆ ಹೊಡೆಯುವ ಸೈಕಲ್ ಯಂತ್ರ ಗಳು ಸೇರಿದಂತೆ ಇನ್ನು ಹಲವಾರು ಮಿನಿ ಒಂದು ಕೇಂದ್ರ ದಿಂದ ಸಬ್ಸಿಡಿ ಮೂಲಕ ನಿಮಗೆ ಸಿಗುತ್ತೆ. ರೈತರಿಗೆ ಇದು ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ರಷ್ಟು ಮತ್ತು ಎಸ್ಸಿ ಎಸ್ಟಿ ವರ್ಗದ ರೈತರಿಗೆ ಶೇಕಡ 75 ರಷ್ಟು ಅದ
ಕ್ಕಿಂತ ಜಾಸ್ತಿ ಇರಬಹುದು.
ಅವಳ ಅಂದಾಜು ಹೇಳ್ತಾ ಇದೆ, ಎಷ್ಟು ಪರ್ಸೆಂಟ್ ಅಂತ ಸಬ್ಸಿಡಿ ಮುಖಾಂತರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತೆ. ಇದಲ್ಲದೆ ರಾಶಿ ಮಾಡೋ ದೊಡ್ಡ ದೊಡ್ಡ ಯಂತ್ರ ಗಳು ಸಹ ಬಾಡಿಗೆ ಆಧಾರದ ಮೇಲೆ ರಿಯಾಯಿತಿ ದರ ಕೊಟ್ಟು ಬಳಸಬಹುದು.ನಾಲ್ಕು ಇದು ಕೃಷಿಗೆ ಸಂಬಂಧಿತ ಉಪಕರಣಗಳಾದ ಟ್ರ್ಯಾಕ್ಟರ್ ಆಗಿರಬಹುದು. ಖಾರ ಕುಟ್ಟುವ ಯಂತ್ರ, ಮನೆಯಲ್ಲಿ ಬಳಸುವ ಹಿಟ್ಟಿನ ಗಿರಣಿ ಯಂತ್ರಗಳು ಕೂಡ ಸಬ್ಸಿಡಿ ದರದಲ್ಲಿ ಒಂದು ಕೇಂದ್ರ ದಿಂದ ಪಡೆದು ಕೊಳ್ಳಲು ರೈತರಿಗೆ ಆಗಲಿ ಅಥವಾ ಊರಿನ ಗ್ರಾಮಸ್ಥರಿಗಾಗಲಿ ಪಡೆದುಕೊಳ್ಳುವುದಕ್ಕೆ ಅವಕಾಶ ಇದ್ದೇ ಇರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ