ನಮಸ್ತೆ ಪ್ರಿಯ ಓದುಗರೇ, ದಿನದಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದನ್ನು ನಾವೆಲ್ಲರೂ ತಿಳಿದಿದ್ದೇವೆ. ಹಾಗೂ ಮನೆಯಲ್ಲಿ ಹಿರಿಯರು ನೀರನ್ನು ಹೆಚ್ಚು ಹೆಚ್ಚಾಗಿ ಕುಡಿಯಿರಿ ಅಂತ ಹೇಳ್ತಾ ಇರ್ತಾರೆ. ಅದಕ್ಕಾಗಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಆಗುವ ಲಾಭಗಳು ಮತ್ತು ನೀರನ್ನ ಯಾವ ಯಾವ ಸಮಯದಲ್ಲಿ ಕುಡಿಬೇಕು, ಎಷ್ಟು ಕುಡಿಯಬೇಕು, ನಾವು ಹೀಗೆಲ್ಲಾ ನೀರು ಕುಡಿದರೆ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳು ದೊರೆಯುತ್ತದೆ ಎಂದು ಇಂದಿನ ಅಂಕಣದಲ್ಲಿ ನೋಡೋಣ. ಗೆಳೆಯರೇ ನಮಗೆಲ್ಲ ಗೊತ್ತಿದೆ ಅಲ್ವಾ ನೀರು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತ, ಆದರೆ ಯಾವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎನ್ನುವ ಗಳಿಬಿಲಿಯಲ್ಲಿ ಇದ್ದಾರೆ. ಯಾಕೆಂದ್ರೆ ಕೆಲವರು ದಿನಕ್ಕೆ 8 ಲೋಟ ನೀರನ್ನು ಕುಡಿಬೇಕೂ ಅಂತಾರೆ, ಇನ್ನೂ ಕೆಲವರು ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಲೇ ಬೇಕು ಅಂತಲೂ ಹೇಳ್ತಾ ಇರ್ತಾರೆ. ಸ್ವಲ್ಪ ಜನ ಮಧ್ಯಾನ ಜಾಸ್ತಿ ಹಾಗೂ ರಾತ್ರಿ ಕಡಿಮೆ ನೀರು ಕುಡಿರಿ ಅಂತ ಹೇಳ್ತಾರೆ. ಇಷ್ಟೆಲ್ಲಾ ಬೇರೆ ಬೇರೆ ಅಭಿಪ್ರಾಯಗಳನ್ನು ಕೊಡ್ತಾ ಇರ್ತಾರೆ. ಹಾಗಾಗಿ ಗಳಿಬಿಲಿಗೆ ಒಳಗಾಗಿರ್ತೀವಿ. ಹಾಗಾಗಿ ಯಾವ ಯಾವ ಸಮಯದಲ್ಲಿ ನೀರು ಕುಡಿಬೇಕು ಎಂದು ತಿಳಿಯೋಣ ಬನ್ನಿ.
ಪ್ರತಿದಿನ ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜದೆ ಎರೆಡು ಲೋಟ ನೀರು ಕುಡಿಯಬೇಕು. ಒಂದುವೇಳೆ ಹಲ್ಲುಜ್ಜದೇ ನಾವು ಏನನ್ನೂ ಕುಡಿಯುವುದು ತಿನ್ನುವುದು ಮಾಡುವುದಿಲ್ಲ ಎನ್ನುವವರು ಹಲ್ಲುಜ್ಜಿ 20 ನಿಮಿಷದ ನಂತರ ಎರೆಡು ಲೋಟ ನೀರು ಕುಡಿಯಬಹುದು. ಹೀಗೆ ಕುಡಿಯುವುದರಿಂದ ನೀರು ನಿಮ್ಮ ದೇಹ ಪ್ರವೇಶಿಸಿ ನಿಮ್ಮ ದೇಹದ ಅವಯವಗಳನ್ನು ಉತ್ತೇಜಿಸಿ ನಿಮ್ಮ ದೇಹದಿಂದ ಕಲ್ಮಶ ಹಾಗೂ ತ್ಯಾಜ್ಯ ಪದಾರ್ಥಗಳನ್ನು ಹೊರಹಾಕಲು, ನಿಮ್ಮ ಮುಖದಲ್ಲಿನ ಮೊಡವೆ ಕಲೆ ನಿವಾರಿಸಿ ನೀವು ಇನ್ನೂ ಸುಂದರವಾಗಿ ನೈಜವಾಗಿ ಕಾಣಲು ಸಹಾಯ ಮಾಡುತ್ತದೆ. ನಂತರ ವ್ಯಾಯಾಮ ಮಾಡ್ತೀರಾ ಅನ್ನೋದಾದರೆ ವ್ಯಾಯಾಮ ಮಾಡುವ ಮುನ್ನ ಒಂದು ಲೋಟ ವ್ಯಾಯಾಮ ಮುಗಿಸಿದ ಬಳಿಕ ಒಂದು ಲೋಟ ನೀರು ಕುಡಿಯಿರಿ. ಯಾಕಂದ್ರೆ ಹೀಗೆ ಮಾಡುವುದರಿಂದ ನಮ್ಮ ಶರೀರವನ್ನು ಡೀಹೈಡ್ರೇಟ್ ಆಗದಂತೆ ತಡೆಯುತ್ತದೆ. ನಂತರ ಬೆಳಿಗ್ಗೆಯ ತಿಂಡಿಗಿಂತ ಅರ್ಧ ಗಂಟೆಯ ಮುಂಚೆ ಒಂದು ಲೋಟ ನೀರು ಕುಡಿಯಿರಿ ಹೀಗೆ ಮಾಡುವುದರಿಂದ ಜಾಸ್ತಿ ಊಟಾ ಮಾಡಲು ಇಷ್ಟ ಆಗದೆ ನಿಮ್ಮ ತೂಕ ಇಳಿಸುವ ಪ್ಲಾನ್ ಯಶಸ್ವಿ ಆಗುತ್ತದೆ. ಕೆಲವರು ಊಟಾ ಮಾಡುವ ಸಮಯದಲ್ಲಿ ಮಧ್ಯ ಮಧ್ಯ ನೀರು ಕುಡಿತಾ ಇರ್ತಾರೆ. ಇದು ತುಂಬಾ ತಪ್ಪು, ಊಟಕ್ಕಿನ ಅರ್ಧ ಗಂಟೆಯ ಮುಂಚೆ ನೀರು ಕುಡಿಯುವುದರಿಂದ ತಿಂದ ಆಹಾರ ಜೀರ್ಣ ಕ್ರಿಯೆಗೆ ಒಳ್ಳೆಯದು. ಹಾಗೆ ಊಟ ಆದ ತಕ್ಷಣ ನೀರು ಕುಡಿಯಬೇಡಿ, ಊಟ ಮಾಡಿದ ಅರ್ಧ ಗಂಟೆಯ ನಂತರ ನೀರು ಕುಡಿಯುವುದರಿಂದ ತಿಂದ ಆಹಾರದ ಪೋಷಕಾಂಶಗಳು ಖನಿಜಾಂಶಗಳನ್ನು ದೇಹದ ಅಂಗಗಳು ಸಂಪೂರ್ಣವಾಗಿ ಎಳೆದುಕೊಂಡು ದೇಹ ಸದೃಢ ಆಗುತ್ತದೆ. ನಂತರ ರಾತ್ರಿ ಮಲಗುವ ಅರ್ಧ ಗಂಟೆಯ ಮುಂಚೆ ಒಂದು ಲೋಟ ನೀರು ಕುಡಿಯಬೇಕು, ಹೀಗೆ ಕುಡಿಯುವುದರಿಂದ ರಾತ್ರಿ ಯಾವ ತೊಂದರೆಗಳೂ ಬರದೇ ನಮ್ಮ ಹೃದಯದ ಸ್ತಂಭನ ಆಗುವುದು ತಪ್ಪುತ್ತದೆ.
ಇನ್ನು ಸ್ನಾನಕ್ಕೆ ಹೋಗುವ ಮುಂಚೆ ಒಂದು ಲೋಟ ನೀರನ್ನು ಕುಡಿಯಿರಿ, ಹೀಗೆ ಮಾಡುವುದರಿಂದ ನಿಮ್ಮ ದೇಹದ ಸೋಡಿಯಂ ಪ್ರಮಾಣ ಕಡಿಮೆ ಆಗುತ್ತದೆ. ಹಾಗಾಗಿ ಬಿಪಿ, ರಕ್ತದೊತ್ತಡದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊನೆಗೆ ಒಂದುವೇಳೆ ನಿಮಗೆ ಹುಷಾರಿಲ್ಲ ಎನ್ನುವ ಸಮಯದಲ್ಲಿ ನೀವು ತುಂಬಾನೇ ನೀರನ್ನು ಕುಡಿಯಿರಿ, ಅದರಿಂದ ದೇಹ ಡೀ ಹೈಡ್ರೇಟ್ ಆಗದೆ ಯಾವುದೇ ವೈರಸ್, ಬ್ಯಾಕ್ಟೀರಿಯಾ ಗಳು ನಿಮ್ಮ ಹತ್ತಿರ ಸುಳಿಯದಂತೆ ಆಗುತ್ತವೆ. ಗೆಳೆಯರೇ ಯಾವಾಗ ನಿಮಗೆ ನಿಶ್ಯಕ್ತಿ ಉಂಟಾಗುತ್ತದೆ ಆಗ ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದ ಶಕ್ತಿಯ ಕೊರತೆ ಇದೆ ಅಂತ ಅರ್ಥ. ಹಾಗಾಗಿ ನಿಮಗೆ ನಿಶ್ಯಕ್ತಿ ಅಂತ ಅನ್ನಿಸಿದಾಗ ಒಂದು ಲೋಟ ನೀರು ಕುಡಿದರೆ ನಿಮ್ಮ ಹಳೆಯ ಚೈತನ್ಯ ಹಿಂತಿರುಗುತ್ತದೆ. ಕೊನೆಯದಾಗಿ ಇನ್ನೊಂದು ಗಮನ ಹರಿಸುವ ಅಂಶ ವಿಷ್ಯ ಏನಪ್ಪಾ ಅಂದ್ರೆ, ನೀವು ಯಾವಾಗಲೆ ನೀರು ಕುಡಿಯಿರಿ ಆದರೆ ನಿಂತುಕೊಂಡು ನೀರು ಕುಡಿಯಬೇಡಿ. ಹೀಗೆ ನಿಂತು ನೀರು ಕುಡಿಯುವುದರಿಂದ ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಒಂದು ಸುನಾಮಿಯಂತೆ ಚಿಮ್ಮುತ್ತೆ, ಹಾಗೆ ಚಿಮ್ಮಿದರೆ ನಿಮ್ಮ ಜೀರ್ಣಾಶಯದ ಒಳ ಪದರದ ಗೋಡೆಗಳಿಗೆ ತುಂಬಾನೇ ಹಾನಿ ಆಗುತ್ತದೆ. ಹೀಗೆ ಹಾನಿ ಆದ್ರೆ ಅಸಿಡಿಟಿ, ಗ್ಯಾಸ್ಟ್ರಿಕ್, ಮೂಲವ್ಯಾಧಿ ಅಂತಹ ಸಮಸ್ಯೆಗಳು ಉಂಟಾಗಬಹುದು. ಹಾಗೂ ನಿಂತು ನೀರು ಕುಡಿಯುವುದರಿಂದ ನೀರು ನಿಮ್ಮ ಕಿಡ್ನಿಗೆ ಒದಗುವುದಿಲ್ಲ. ಹಾಗೂ ಕುಡಿದ ನೀರು ನಮ್ಮ ಕೀಲುಗಳಿಗೆ ಸೇರಿ ಆರ್ಥ್ರೈಟಿಸ್ ಸಮಸ್ಯೆ ಬರುತ್ತದೆ. ಕುಳಿತು ಆರಾಮಾಗಿ ನೀರು ಕುಡಿಯುವುದರಿಂದ ನೀವು ತಿಂದಂತ ಆಹಾರ ಸುಲಭವಾಗಿ ಜೀರ್ಣ ಆಗುತ್ತೆ. ಅಷ್ಟೇ ಅಲ್ಲ ಜೀರ್ಣಾಶಯದಲ್ಲಿ ಅಧಿಕವಾಗಿ ಉತ್ಪತ್ತಿ ಆಗುವ ಆಸಿಡ್ ಗಳ ಪ್ರಭಾವ ಕೂಡ ಕಡಿಮೆ ಆಗುತ್ತದೆ. ಫ್ರಿಡ್ಜ್ ನೀರು ಒಳ್ಳೆಯದಲ್ಲ. ನಾರ್ಮಲ್ ಅಥವಾ ಉಗುರು ಬೆಚ್ಚಗಿನ ನೀರು ಕುಡಿದರೆ ಉತ್ತಮ. ನೀರನ್ನು ಒಂದೇ ಸಮನೆ ಗಟ ಗಟ ಕುಡಿಯಬಾರದು, ಮೆಲ್ಲಗೆ ಗುಟುಕರಿಸಿ, ಚಪ್ಪರಿಸುತ್ತಾ ಕುಡಿಯಬೇಕು. ನಾವು ಕಾಫಿ ಟೀ ಅನ್ನು ಹೇಗೆ ಮೆಲ್ಲಗೆ ಚಪ್ಪರಿಸಿ ಗುಟುಕರಿಸಿ ಕುಡಿಯು ತೇವೂ ಹಾಗೆ ನೀರನ್ನು ಕುಡಿದರೆ ಬಾಯಲ್ಲಿ ಲಾಲಾ ರಸ ಉತ್ಪತ್ತಿ ಆಗಿ ಅದು ಹೊಟ್ಟೆಯೊಳಗಿನ ಹಲವಾರು ರೋಗಗಳಿಗೆ ಸಂಜೀವಿನಿ ಇದ್ದಂತೆ. ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.