ನೀಲಗಿರಿ ಮರಗಳು ಮೊದಲು ಕಂಡುಬಂದಿದ್ದು ಆಸ್ಟ್ರೇಲಿಯಾ ದೇಶದಲ್ಲಿ. ಆ ಮೂಲಕ ವಿಶ್ವದ ಎಲ್ಲಾ ಮೂಲೆಗಳಲ್ಲೂ ಕೂಡ ಹಬ್ಬಿಕೊಂಡುಬಿಟ್ಟವು. ಸಾಮಾನ್ಯವಾಗಿ ಎಲ್ಲರೂತುವಿನಲ್ಲೂ ಕೂಡ ಹಚ್ಚಹಸಿರಾಗಿ ಕಂಗೊಳಿಸುವ ನೀಲಗಿರಿಯ ಎಲೆಗಳು ನಮ್ಮ ಭಾರತದ ಆಯುರ್ವೇದ ಪದ್ಧತಿಯಲ್ಲಿ ಅನೇಕ ರೀತಿಯ ಔಷಧಿಯ ತಯಾರಿಕೆಯಲ್ಲಿ ಉಪಯೋಗಕ್ಕೆ ಬರುತ್ತಿದೆ. ತನ್ನಲ್ಲಿ ಹಲವಾರು ರೀತಿಯ ಔಷಧಿ ಉತ್ಪನ್ನಗಳನ್ನು ಒಳಗೊಂಡಿರುವ ಈ ನೀಲಗಿರಿಯಲೆಗಳು ಮನುಷ್ಯರಿಗೆ ಎದುರಾಗುವ ನೆಗಡಿ, ಶೀತ ಕೆಮ್ಮು ಕಫ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಷ್ಟೇ ಅಲ್ಲದೆ ಮಾಂಸ ಖಂಡಗಳ ಸೆಳೆತ ಅಥವಾ ವಯಸ್ಸಾದಾಗ ಕಾಡುವ ಮೈ ಕೈ ನೋವು ಹಾಗೂ ಕೀಲುನೋವುಗಳಿಗೆ ಎಣ್ಣೆ ರೂಪದಲ್ಲಿ ಕೂಡ ಹಲವಾರು ಆಯುರ್ವೇದದ ಅಂಗಡಿಗಳಲ್ಲಿ ಸಿಗುತ್ತಿದ್ದು ತ್ವರಿತವಾಗಿ ನೋವನ್ನು ಶಮನ ಮಾಡುವ ಎಲ್ಲ ಗುಣಲಕ್ಷಣಗಳು ಕೂಡ ಇದರಲ್ಲಿ ಕಂಡು ಬರುತ್ತದೆ.

ಹಾಗಾದರೆ ಬನ್ನಿ ನೀಲಗಿರಿ ಎಣ್ಣೆಯಿಂದ ಮನುಷ್ಯನ ಆರೋಗ್ಯಕ್ಕೆ ಎಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಸಿಗುತ್ತವೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಸ್ಕಿಪ್ ಮಾಡದೇ ಓದುವುದನ್ನು ಮರೆಯಬೇಡಿ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ನೀಲಗಿರಿ ಎಣ್ಣೆಯಲ್ಲಿ ನೋವು ಗುಣಗಳ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ವಿಶೇಷವಾಗಿ ಇದರಲ್ಲಿ ಆಂಟಿ ಇನ್ಫಾರ್ಮೆಂಟರಿ ಗುಣಗಳು ಲಕ್ಷಣಗಳು ಯಥೇಚ್ಛವಾಗಿ ಕಂಡುಬರುವುದರಿಂದ ಮನುಷ್ಯನಲ್ಲಿ ಕಂಡುಬರುವ ದೀರ್ಘಕಾಲಿಕ ನೋವಿನ ಸಮಸ್ಯೆಯಿಂದ ಬೇಗನೆ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಮೊದಲು ಹೇಳಿರುವ ಹಾಗೆ ನೋವಿರುವ ಜಾಗದಲ್ಲಿ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವ ಅಭ್ಯಾಸ ಇಟ್ಟುಕೊಂಡಿರಿ. ಇನ್ನು ಪ್ರತಿದಿನ ಸ್ನಾನ ಮಾಡುವ ನಿಮ್ಮ ನೀರಿನ ಬಕೆಟ್ ಗೆ ಕೆಲವು ಹನಿಗಳಷ್ಟು ನೀರಿನ ಎಣ್ಣೆಯನ್ನು ಹಾಕಿ ಈ ನೀರಿನಿಂದ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ಕೀಲು ನೋವುಗಳು ಮೂಳೆಗಳಲ್ಲಿ ಕಂಡು ಬರುವ ಉರಿಕೆ ಊತ ಮತ್ತು ಮೈಕೈ ನೋವು ಸಹ ದೂರವಾಗುತ್ತದೆ.

Leave a Reply

Your email address will not be published. Required fields are marked *