WhatsApp Group Join Now

ಹೌದು ನಾವು ಬೇಸಿಗೆ ಕಾಲ ಅಂತ ಹೋದ ಕಡೆಯೆಲ್ಲ ಜ್ಯುಸ್ ಮೊರೆ ಹೋಗುತ್ತೇವೆ. ಮಾಲ್ ಗಳಲ್ಲಿ, ಜ್ಯುಸ್ ಸೆಂಟರ್ ಗಳಲ್ಲಿ ನಾವು ಜ್ಯುಸ್ ಕುಡಿಯಲಿಕ್ಕೆ ಹೋಗುತ್ತೇವೆ. ಆದರೆ ಅಂತಹ ಕೆಲವೊಂದು ಜ್ಯುಸ್ ಗಳು ನಮ್ಮ ದೇಹದ ಮೇಲೆ ಅನಗತ್ಯ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾದರೆ ಏನಾಗುತ್ತೆ ಗೊತ್ತಾ.

ಶಾಪಿಂಗ್ ಮಾಲ್ ಗೆ ಹೋದರೆ ರೆಫ್ರಿಜರೇಟರ್ ಒಳಗಿರುವ ಬಣ್ಣ ಬಣ್ಣದ ಜ್ಯೂಸ್ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಈ ಜ್ಯೂಸ್ ನಿಮ್ಮ ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು. ಇದರಲ್ಲಿ ಸುದೀರ್ಘ ಕಾಲ ಬಾಳಿಕೆ ಬರಲು ಹಾಕುವ ರಾಸಾಯನಿಕಗಳು ನಮ್ಮ ದೇಹದಲ್ಲಿ ಬೇಡದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ. ಸೋಯಾ ಹಾಲು ಇತರ ರಾಸಾಯನಿಕಗಳಷ್ಟೇ ಆರೋಗ್ಯಕ್ಕೆಹಾನಿಕರ.

ಸೋಯಾ ಹಾಲು ನಮ್ಮ ಆರೋಗ್ಯಕ್ಕೆ ಉತ್ತಮ ಎಂದೇ ಪರಿಗಣಿಸಲಾಗುತ್ತದೆ. ಆದರೆ ತುಂಬಾ ಸಲ ಸಂಸ್ಕರಿಸಲ್ಪಟ್ಟ ಮತ್ತು ಕಳಪೆ ಗುಣಮಟ್ಟದ ಸೋಯಾ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕೃತಕವಾಗಿ ಮಾಡಲಾದ ಸಿಹಿ ವಸ್ತುಗಳೂ ಕೂಡ ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿ ನೈಸರ್ಗಿಕವಲ್ಲದ ರಾಸಾಯನಿಕಗಳನ್ನು ಬಳಸಲಾಗುತ್ತದೆ ಮತ್ತು ಈ ಕೃತಕ ಸಿಹಿ ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗಿ ಕೊಬ್ಬನ್ನು ಹೆಚ್ಚಿಸುತ್ತದೆ.

WhatsApp Group Join Now

Leave a Reply

Your email address will not be published. Required fields are marked *