WhatsApp Group Join Now

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ.

ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಜೀವಸಂಗಾತಿಯನ್ನು ಕರುಣಿಸುವ ಶಕ್ತಿಯುತ ದೇವಾಲಯ ಎಂದೇ ಪ್ರಸಿದ್ಧವಾಗಿದೆ.

ಭಕ್ತಿ, ಶ್ರದ್ಧೆ ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಜೀವನಸಂಗಾತಿಯನ್ನು ಪಡೆಯಲು ಮುಖ್ಯವಾಗಿ ಮಾಡಬೇಕಾದುದು ಶಿವನನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆರಾಧಿಸುವುದು. ಹೀಗೆ ಪ್ರಾರ್ಥನೆ ಮಾಡಿದವರು ಮಾತ್ರ ತಮ್ಮ ಇಷ್ಟಾರ್ಥಗಳು ನೇರವೇರುತ್ತದೆ ಎಂದು ಅಲ್ಲಿನ ಭಕ್ತರ ನಂಬಿಕೆಯಗಿದೆ.

ಈ ದೇವಾಲಯದ ವಿಶೇಷವೆನೆಂದರೆ ಇಲ್ಲಿನ ಮಾಹಿಮಾನ್ವಿತವಾದ ಶಿವನು ತಾವು ಬಯಸಿದ ಜೀವನ ಸಂಗಾತಿಯನ್ನು ನೀಡುವುದು. ಹೀಗೆ ಸ್ವಾಮಿಯಿಂದ ತಮ್ಮ ಬಾಳಸಂಗಾತಿಯನ್ನು ಪಡೆದ ಅದೆಷ್ಟು ಉದಾಹರಣೆಗಳು ಇಲ್ಲಿವೆ. ತಾವು ಅಂದುಕೊಂಡಿರುವುದು ಆಗುತ್ತದೆ ಎಂಬ ವಿಶ್ವಾಸದಿಂದ ನೂರಾರು ಭಕ್ತರು ಈ ಸ್ವಾಮಿಯನ್ನು ಆರಾಧಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಈ ದೇವಸ್ಥಾನ ಇರುವುದು ಎಲ್ಲಿ: ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು 7 ಕಿ. ಮೀ ದೂರದಲ್ಲಿರುವ ತಿರುಶಕ್ತಿಮಟ್ಟಂ ಎಂಬ ಹಳ್ಳಿಯಲ್ಲಿ. ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯವಾಗಿದೆ.

ಹೇಗೆ ಹೋಗುವುದು: ಈ ದೇವಾಲಯಕ್ಕೆ ಸಮೀಪದವಾದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳು ನಾಡು ರಾಜ್ಯದ ಕುಂಭಕೋಣಂ ರೈಲ್ವೆ ನಿಲ್ದಾಣವಾಗಿದೆ. ಈ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಂಜಾವೂರ್ ವಿಮನ ನಿಲ್ದಾಣವೇ ಆಗಿದೆ.

WhatsApp Group Join Now

Leave a Reply

Your email address will not be published. Required fields are marked *